ಬಿನ್ ಲಾದೆನ್ ಪುತ್ರ ಉಮರ್‌ಗೆ ಈಜಿಪ್ಟ್ ಪ್ರವೇಶಕ್ಕೆ ನಿರಾಕರಣೆ

ಕೈರೋ, ಡಿ.18: ಒಸಾಮಾ ಬಿನ್ ಲಾದೆನ್ ಪುತ್ರ ಉಮರ್‌ಗೆ ಈಜಿಪ್ಟ್ ಪ್ರವೇಶಕ್ಕೆ ನಿರಾಕರಿಸಲಾಗಿದೆ ಎಂದು ಏರ್‌ಪೋರ್ಟ್ ಮೂಲಗಳು ತಿಳಿಸಿವೆ. ದೇಶದ ನಿಷೇಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಉಮರ್ ಹೆಸರು ಇರುವ ಕಾರಣ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ.
ಲಾದೆನ್ ರ ನಾಲ್ಕನೆ ಪುತ್ರನಾಗಿರುವ ಉಮರ್ ತನ್ನ ಪತ್ನಿ ಝೈನ್ ಅಲ್ ಸಬಾ ಅವರೊಂದಿಗೆ ದೋಹಾದಿಂದ ಈಜಿಪ್ಟ್‌ಗೆ ಪ್ರಯಾಣಿಸುತ್ತಿದ್ದರು. ಅವರಿಗೆ ಈಜಿಪ್ಟ್‌ನಲ್ಲಿ ಪ್ರವೇಶ ನಿರಾಕರಿಸಲಾಗಿದ್ದು, ಅವರನ್ನು ಟರ್ಕಿಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಮರ್ ದಂಪತಿ 2007 ಹಾಗೂ 2008ರಲ್ಲಿ ಕೆಲವು ತಿಂಗಳು ಈಜಿಪ್ಟ್‌ನಲ್ಲಿ ನೆಲೆಸಿತ್ತು. ಈ ಹಿಂದೆ 2008ರಲ್ಲಿ ಉಮರ್‌ಗೆ ಈಜಿಪ್ಟ್ ಪ್ರವೇಶವನ್ನು ನಿರಾಕರಿಸಲಾಗಿತ್ತು. 1996 ರಿಂದ 2001ರ ತನಕ ಅಫ್ಘಾನಿಸ್ತಾನದಲ್ಲಿದ್ದ ಉಮರ್ 2001ರಲ್ಲಿ ತಂದೆ ಲಾದೆನ್ ಸಂಬಂಧ ತೊರೆದು ದೂರವೇ ಉಳಿದಿದ್ದರು.
ನಾನು ಸೌದಿ ಅರೇಬಿಯ ಹಾಗೂ ಇರಾನ್‌ನಲ್ಲಿ ಉದ್ಯೋಗದಲ್ಲಿದ್ದೇನೆ. 2001ರ ಸೆ.11 ರಂದು ಅಲ್‌ಖಾಯಿದ ದಾಳಿಯ ಬಳಿಕ ಸಹೋದರರು ಹಾಗೂ ಸಹೋದರರು ಒಟ್ಟಿಗಿದ್ದೇವೆ. ಬಿನ್ ಲಾದೆನ್ ಮಕ್ಕಳು ವಿಶ್ವದ ಉತ್ತಮ ಪ್ರಜೆಗಳಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮ್ಮ ಮೇಲೆ ಅಲ್‌ಖಾಯಿದ ನಾಯಕನ ಮಕ್ಕಳೆಂಬ ಕಳಂಕವಿದೆ. ನಾವ್ಯಾರೂ ಅಲ್‌ಖಾಯಿದದೊಂದಿಗೆ ಭಾಗಿಯಾಗಿಲ್ಲ ಎಂದು ರೇಟರ್ಸ್‌ಗೆ 2010ರಲ್ಲಿ ನೀಡಿರುವ ಸಂದರ್ಶನದಲ್ಲಿ ಉಮರ್ ತಿಳಿಸಿದ್ದರು.
ನಾವೆಲ್ಲರೂ ಇರಾನ್ ಹಾಗೂ ಸೌದಿ ಸರಕಾರದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಈ ಕ್ಷಣದಲ್ಲಿ ನನ್ನೊಂದಿಗೆ ನಮ್ಮ ತಾಯಿ, ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಇದ್ದಾರೆ ಎಂದು ಉಮರ್ ಹೇಳಿದ್ದಾರೆ.
ಸೆ.11ರ ಅಮೆರಿಕದ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಲ್‌ಖಾಯಿದ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಒಸಾಮ ಬಿನ್ ಲಾದೆನ್‌ರನ್ನು 2011ರಲ್ಲಿ ಅಮೆರಿಕದ ಕಮಾಂಡೋಗಳು ಪಾಕಿಸ್ತಾನದಲ್ಲಿ ಹತ್ಯೆಗೈದಿದ್ದರು.







