ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನು ಉಡುಗೊರೆ ನೀಡಿದ ಯೋಧ!

ಇಂಫಾಲ, ಡಿ.18: ಮಣಿಪುರ ಹಾಗೂ ನಾಗಾಲ್ಯಾಂಡ್ ನಡುವೆ ಸಂಪರ್ಕ ಕಲ್ಪಿಸುವ ಕಳೆದ 45 ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 2 ಯುನೈಟೆಡ್ ನಾಗಾ ಕೌನ್ಸಿಲ್ ಸದಸ್ಯರ ಪ್ರತಿಭಟನೆಯಿಂದಾಗಿ ಮುಚ್ಚಿತ್ತು. ಕೇಂದ್ರದ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದ್ದ ಎನ್‌ಎಸ್‌ಸಿಎನ್(ಎಂ) ಕೂಡಾ ಇದಕ್ಕೆ ಬೆಂಬಲ ಸೂಚಿಸಿದ್ದರಿಂದ ಬಂದ್ ಸಂಪೂರ್ಣವಾಗಿತ್ತು.
ಇದು ಮಣಿಪುರದ ಜೀವನಾಡಿಯಾಗಿದ್ದು, ಪದೇ ಪದೇ ತೊಂದರೆಗೀಡಾಗುವ ರಸ್ತೆಯಾಗಿದೆ. ಬುಡಕಟ್ಟು ಗುಂಪುಗಳು ತಮ್ಮ ಬೇಡಿಕೆಗೆ ಒತ್ತಡ ತರುವ ಸಲುವಾಗಿ ಪದೇ ಈ ಹೆದ್ದಾರಿಗೆ ತಡೆ ಒಡ್ಡುತ್ತಲೇ ಇವೆ. ಇದರಿಂದಾಗಿ ಇಡೀ ರಾಜ್ಯದ ನಾಗರಿಕರನ್ನು ಒತ್ತೆ ಇಟ್ಟಂತಾಗುತ್ತದೆ. ಅಸ್ಸಾಂ ಮೂಲಕ ಮಣಿಪುರಕ್ಕೆ ಎರಡು ರಸ್ತೆಗಳಿದ್ದರೂ, ಸಾಗಾಣೆ ತೊಂದರೆಗಳಿಂದಾಗಿ ಇದು ಉಪಯೋಗಕ್ಕೆ ಬರುವುದು ಕಡಿಮೆ. ಸಮಸ್ಯೆ ಬಗೆಹರಿಸಲು ಸರಕಾರಗಳು ನಡೆಸುತ್ತಾ ಬಂದ ಪ್ರಯತ್ನ ವಿಫಲವಾಗಿತ್ತು.
ಈ ಹೆದ್ದಾರಿ ಮಂಜೂರಾದ ಹಿಂದೆ ರೋಚಕ ಕಥೆ ಇದೆ. ಭಾರತದ ಯುವ ಸೇನಾ ಕ್ಯಾಪ್ಟನ್ ಡಿ.ಪಿ.ಕೆ.ಪಿಳ್ಳೈ ಅವರಿಗೆ ಇದನ್ನು ಪರಿಶೀಲನೆ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ಇಲ್ಲಿ ಪ್ರಮುಖ ಸೇತುವೆಯನ್ನು ಸ್ಫೋಟಿಸಲು ಉಗ್ರರು ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಇವರನ್ನು ಶೋಧಿಸಿ ಹಿಡಿಯುವ ಕೆಲಸವನ್ನು ಅವರಿಗೆ ವಹಿಸಲಾಗಿತ್ತು. ನಾಲ್ಕು ದಿನಗಳ ಶೋಧದ ಬಳಿಕ ಅವರ ಅಡಗುದಾಣಗಳನ್ನು ಭೇಧಿಸಿ ಅವರನ್ನು ಹಿಡಿದ ಸಾಧನೆಯಿಂದಾಗಿ ಸಮಸ್ಯೆ ಬಗೆಹರಿದಂತಾಗಿದೆ.
ಮೂರು ಗಂಟೆಗಳ ರಕ್ತಸಿಕ್ತ ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರ ಮೃತಪಟ್ಟಿದ್ದು, ಇದರ ಇಬ್ಬರನ್ನು ಬಂಧಿಸಲಾಗಿದೆ. ಕಮಾಂಡರ್ ಪಿಳ್ಳೈಗೆ ಎಕೆ-47ನಿಂದ ಗಾಯಗಳಾಗಿವೆ.







