ಇಂದು ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ನಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ

ಮಂಗಳೂರು, ಡಿ.18: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಮಂಗಳೂರು ಹಮ್ಮಿಕೊಂಡಿರುವ ಕುರ್ ಆನ್ ಸಂದೇಶ ಪ್ರಚಾರ ಅಭಿಯಾನ ಅಂಗವಾಗಿ ಇಂದು ಸಂಜೆ 4:30ರಿಂದ ರಾತ್ರಿ 9:30ರ ತನಕ ಧಾರ್ಮಿಕ ಪ್ರವಚನ ಕಾರ್ಯಕ್ರಮ ಕಣ್ಣೂರು ಇಂಗ್ಲೀಷ್ ಮೀಡಿಯಂ ಶಾಳೆಯ ಬಳಿ ನಡೆಯಲಿದೆ.
ಕಣ್ಣೂರ್ ಸಲಫಿ ಮಸೀದಿಯ ಖತೀಬರಾದ ಮೌಲವಿ ಮುಹಮ್ಮದ್ ರಫೀಕ್ ರವರು ಇಸ್ಲಾಮಿ ಆದರ್ಶ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ. ಮುಖ್ಯ ಭಾಷಣಗಾರರಾದ ಚುಯಲಿ ಅಬ್ದುಲ್ಲಾಹ್ ಮುಸ್ಲಿಯಾರ್ ರವರು ಕಲಿಮತುಶ್ಶಹಾದ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಅಬೂಬಿಲಾಲ್ ಎಸ್.ಎಮ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





