ದುಬೈ: ನೂರುಲ್ ಹುದಾ ಬರ್ ದುಬೈ ಅಲ್ ಫರ್ದಾನ್ ಕ್ಲಸ್ಟರ್ ಅಸ್ಥಿತ್ವಕ್ಕೆ
ಅಧ್ಯಕ್ಷರಾಗಿ ಸಲೀಂ ಬರೆಪ್ಪಾಡಿ ಪ್ರಧಾನ ಕಾರ್ಯದರ್ಶಿಯಾಗಿ ಮೂಸ ಕುಂಞಿ ಕಾವು
ದುಬೈ, ಡಿ.18: ವಿಶ್ವ ಪ್ರಸಿದ್ದ ದಾರುಲ್ ಹುದಾ ಚೆಮ್ಮಾಡ್ ಇದರ ಕರ್ನಾಟಕದ ಅಂಗ ಸಂಸ್ಥೆಯಾದ ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ದುಬೈ ಸಮಿತಿ ವತಿಯಿಂದ ಮೌಲಿದ್ ಮಜ್ಲಿಸ್ ಮತ್ತು ಬರ್ ದುಬೈ ಕ್ಲಸ್ಟರ್ ಕಾರ್ಯಕ್ರಮವು ಡಿ.17ರಂದು ಶುಕ್ರವಾರ ಜುಮಾ ನಮಾಝಿನ ಬಳಿಕ ಬರ್ ದುಬೈ ಅಲ್ ಫರ್ದಾನ್ ನಿವಾಸದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನೂರುಲ್ ಹುದಾ ದುಬೈ ಸಮಿತಿ ಅಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೆಗ, ನೂರುಲ್ ಹುದಾ ದುಬೈ ಸಮಿತಿಯ ಮಾಧ್ಯಮ ಪ್ರತಿನಿಧಿ ಅಬ್ದುಲ್ಲಾ ನಯಿಮಿ ಉಸ್ತಾದ್ ಸ್ವಾಗತಿಸಿದರು.
ದಾರುಲ್ ಹುದಾ ಚೆಮ್ಮಾಡ್ ಇಸ್ಲಾಮಿಕ್ ವಿಶ್ವ ವಿದ್ಯಾಲಯ ಇದರ ಕರ್ನಾಟಕದ ಅಂಗ ಸಂಸ್ಥೆಯಾದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಕ್ಯಾಂಪಸ್ ಕಟ್ಟಡಕ್ಕೆ ಇತ್ತೀಚೆಗೆ ಕೇರಳ ಮತ್ತು ಕರ್ನಾಟಕದ ಪಂಡಿತ ಶಿರೋಮಣಿಗಳಿಂದ ನಡೆದ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಅಕಾಡೆಮಿಯ ಇತ್ತೀಚಿನ ಬೆಳವಣಿಗೆಯ ಬಗ್ಗೆ ವಿವರಿಸಿದರು.
ನಮ್ಮ ಜೀವನದಲ್ಲಿ ಉತ್ತಮ ಕೆಲಸ ಮಾಡಲು ಒದಗಿರುವ ಅವಕಾಶವನ್ನು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಉನ್ನತಿಗಾಗಿ ವಿನಿಯೋಗಿಸಬೇಕು ಎಂದು ಹೇಳಿದರು.
ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ರವರು ಮಾತನಾಡಿ, ನೂರುಲ್ ಹುದಾ ಯುಎಇ ಯಲ್ಲಿ ವೇಗವಾಗಿ ಬೆಳೆಯಲು ನಿಮ್ಮಂತಹ ಕಾರ್ಯಕರ್ತರು ಕಾರಣ ಎಂದು ಹೇಳಿದರು. ನಂತರ ಬರ್ ದುಬೈ ಅಲ್ ಫರ್ದಾನ್ ಕ್ಲಸ್ಟರ್ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.
ಸಮಿತಿಯ ಗೌರವಾಧ್ಯಕ್ಷರಾಗಿ ಯೂಸುಫ್ ಈಶ್ವರಮಂಗಿಲ, ಅಧ್ಯಕ್ಷರಾಗಿ, ಸಲೀಂ ಬರೆಪ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಮೂಸ ಕುಂಞಿ ಕಾವು, ಕೋಶಾಧಿಕಾರಿಯಾಗಿ ಅಶ್ರಫ್ ಆರ್ತಿಗೆರೆ, ಉಪಾಧ್ಯಕ್ಷರುಗಳಾಗಿ ಲತೀಫ್ ಕೂರ್ನಡ್ಕ, ಶಾಫಿ ಒಳತಡ್ಕ, ಕಾರ್ಯದರ್ಶಿಗಳಾಗಿ ನಾಸಿರ್ ಒಳತಡ್ಕ, ಬಾತಿಷ ಪರ್ಲಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಸಬೀರ್ ಮೆಲ್ಕಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಖಲೀಲ್ ಮಂಜೇಶ್ವರ, ಸುಫೀದ್ ಕೆ.ಎಂ, ತಾಜುದ್ದೀನ್ ಕಾಸರಗೋಡು, ಜುನೈದ್ ಕಣ್ಣೂರು, ಶಂಸುದ್ದೀನ್ ಮಲಪ್ಪುರಂ, ನಿಝಾರ್ ಕಾಸರಗೋಡು, ಜಾಬಿರ್ ಕಾಸರಗೋಡು, ಅರ್ಷದ್, ನೂರುದ್ದೀನ್, ಮುಹಮ್ಮದ್ ಅಲೀ, ಅಸ್ಗರ್ ಕಣ್ಣೂರು ಇವರುಗಳನ್ನು ಆರಿಸಲಾಯಿತು.
ಚುನಾವಣಾ ಅಧಿಕಾರಿಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ ಅಬ್ದುಲ್ ಲತೀಫ್ ಕೌಡಿಚ್ಚಾರ್ ಸಮಿತಿಗೆ ಇನ್ನಷ್ಟು ಸದಸ್ಯರನ್ನು ಸೇರಿಸಿ ಎಲ್ಲರೂ ನೂರುಲ್ ಹುದಾ ಅಕಾಡೆಮಿಯ ಉನ್ನತಿಗಾಗಿ ಶ್ರಮಿಸಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನೂರುಲ್ ಹುದಾ ಯುಎಇ ಸಮಿತಿ, ದುಬೈ ಸಮಿತಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಸ್ತ ಕೇರಳ ಜಮೀಯತುಲ್ ಉಲಮಾ ಇದರ ಅಧ್ಯಕ್ಷ ಕರ್ಮ ಶಾಸ್ತ್ರ ಪಾರಂಗತ, ಪಟ್ಟಿಕ್ಕಾಡ್ ಜಾಮಿಯ ನೂರಿಯಾದ ಉಮ್ಮುಲ್ ಮುದರೀಸ್ ಮುಹಖ್ಖಿಖುಲ್ ಉಲಮಾ ಎ.ಪಿ.ಮುಹಮ್ಮದ್ ಮುಸ್ಲಿಯಾರ್(ರಹ್ಮತುಲ್ಲಾಹಿ ಅಲೈಹಿ) ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ಮಯ್ಯತ್ ನಮಾಜ್ ನಿರ್ವಹಿಸಲಾಯಿತು ಮತ್ತು ನೂರುಲ್ ಹುದಾ ಸದಸ್ಯರ ಕುಟುಂಬದಲ್ಲಿ ಅಗಲಿದವರಿಗೆ ವಿಶೇಷ ದುವಾ ನೆರವೇರಿಸಲಾಯಿತು.
ನೂರುಲ್ ಹುದಾ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿ ಯವರು ನೂತನ ಸಮಿತಿಗೆ ಶುಭ ಹಾರೈಸಿ ಧನ್ಯವಾದಗೈದರು. ಸಭೆಯ ಕೊನೆಯಲ್ಲಿ ಎಲ್ಲರಿಗೂ ಉಪಹಾರ ಏರ್ಪಡಿಸಲಾಗಿತ್ತು.







