ಭಟ್ಕಳ: ಬೈಕ್ ಸ್ಕಿಡ್, ಯುವಕ ಸಾವು
ಭಟ್ಕಳ, ಡಿ.18: ವೇಗವಾಗಿ ಚಲಿಸುತ್ತಿದ್ದ ಮೋಟಾರ್ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ಸಾಗರ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಬೈಕ್ ಚಾಲಕನನ್ನು ಹೌಸಿಂಗ್ ಕಾಲನಿಯ ಬೈತುಲ್ಮುಸ್ಬಾ ನಿವಾಸಿ ಮುಹಮ್ಮದ್ ಸುಹೇಲ್ ತಂದೆ ಇಸ್ಮಾಯಿಲ್ ಮುಸ್ಬಾ (26) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮೃತ ಸುಹೇಲ್ ತನ್ನ ಇತರ ಮೂವರು ಸ್ನೇಹಿತರೊಂದಿಗೆ ಸಾಗರ ರಸ್ತೆಯಲ್ಲಿ ತಡರಾತ್ರಿ ಪಾರ್ಟಿ ಮುಗಿಸಿ ಮರಳಿ ಬರುತ್ತಿದ್ದಾಗ ಘಟನೆ ಸಂಭವಿಸಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಎಸ್ಸೈ ಮಂಜೇಶ್ವರ ವಿ.ಚಂದಾವರ ತನಿಖೆಕೈಗೊಂಡಿದ್ದಾರೆ.
Next Story





