ಯೆಮೆನ್ ಆತ್ಮಹತ್ಯಾ ಬಾಂಬು ಸ್ಫೋಟ: ಕನಿಷ್ಠ 40 ಸೈನಿಕರು ಹತ

ಆಡೆನ್, ಡಿ.18: ತೀವ್ರಗಾಮಿ ಸಂಘಟನೆಗಳು ಸೈನಿಕರನ್ನು ಗುರಿಯಾಗಿರಿಸಿ ನಡೆಸಿದ ಆತ್ಮಹತ್ಯಾ ಬಾಂಬು ದಾಳಿಯಲ್ಲಿ ಕನಿಷ್ಠ 40 ಸೈನಿಕರು ಮೃತಪಟ್ಟಿದ್ದಾರೆ.
ಈಶಾನ್ಯ ಅದೆನ್‌ನಲ್ಲಿರುವ ಸೇನಾ ಶಿಬಿರದಲ್ಲಿ ಸೈನಿಕರು ವೇತನವನ್ನು ಸ್ವೀಕರಿಸಲು ನೆರೆದಿದ್ದ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬು ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 40 ಸೈನಿಕರು ಮೃತಪಟ್ಟಿದ್ದು, ಇತರ 50 ಮಂದಿ ಗಾಯಗೊಂಡಿದ್ದಾರೆ. ಕೆಲವರು ಗಂಭೀರ ಗಾಯಗೊಂಡಿರುವ ಕಾರಣ ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
8 ದಿನಗಳ ಹಿಂದೆಯಷ್ಟೇ ನಡೆದ ಇದೇ ರೀತಿಯ ಬಾಂಬು ದಾಳಿಯಲ್ಲಿ 48 ಮಂದಿ ಸೈನಿಕರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದರು.
ಯೆಮನ್‌ನ ಎರಡನೆ ನಗರವಾಗಿರುವ ಆಡೆನ್‌ನಲ್ಲಿ ತೀವ್ರಗಾಮಿ ಸಂಘಟನೆಗಳು ಕಳೆದ ಕೆಲವು ಸಮಯದಿಂದ ಬಾಂಬು ದಾಳಿ ನಡೆಸುತ್ತಿವೆ.
Next Story





