ರಾಹುಲ್ ಶತಕಕ್ಕೆ ತನ್ನದೇ ಶತಕದಂತೆ ಸಂಭ್ರಮಿಸಿದ ವಿರಾಟ್
ಕ್ರೀಡಾಸ್ಫೂರ್ತಿಯ ಶ್ರೇಷ್ಠ ನಿದರ್ಶನ

ಚೆನ್ನೈ , ಡಿ. 18 : ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ತನ್ನ ನಾಲ್ಕನೇ ಟೆಸ್ಟ್ ಶತಕ ಬಾರಿಸಿದಾಗ ಅವರ ಜೊತೆಗಿದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಸ್ವತಃ ತಾನೇ ಶತಕ ಬಾರಿಸಿದಂತೆ ಸಂಭ್ರಮ ಆಚರಿಸಿದ್ದು ಗಮನ ಸೆಳೆಯಿತು.
ಬೆನ್ ಸ್ಟೋಕ್ಸ್ ಎಸೆತದಲ್ಲಿ ರಾಹುಲ್ ಎರಡು ರನ್ ಗಳಿಸಿ ಶತಕ ಪೂರೈಸಿದರು. ಇದಕ್ಕಾಗಿ ಓಡುವಾಗ ಇನ್ನೂ ಎರಡನೇ ರನ್ ಗೆ ಓಡುತ್ತಿರುವಾಗಲೇ ವಿರಾಟ್ , ರಾಹುಲ್ ಅವರ ಶತಕದ ಸಂಭ್ರಮ ಆಚರಣೆ ಪ್ರಾರಂಭಿಸಿ ಅವರಿಗೆ ಶುಭಾಶಯ ಸಲ್ಲಿಸಿದರು. ಇದು ಭಾರತದಲ್ಲಿ ರಾಹುಲ್ ಅವರ ಪ್ರಪ್ರಥಮ ಟೆಸ್ಟ್ ಶತಕ. ರಾಹುಲ್ 199 ರನ್ ಗಳಿಸಿ ಔಟಾದರು.
Next Story





