ಭಟ್ಕಳ : ಎಚ್.ಆರ್.ಎಸ್.ನಿಂದ ಯಶಸ್ವಿ ಉಚಿತ ಆರೋಗ್ಯ ಶಿಬಿರ

ಭಟ್ಕಳ, ಡಿ.18 : ಇಲ್ಲಿನ ಹ್ಯುಮಾನೆಟೇರಿಯನ್ ರಿಲೀಫ್ ಸೂಸೈಟಿ(ಎಚ್.ಆರ್.ಎಸ್) ವತಿಯಿಂದ ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ಹೃದಯ ಹಾಗೂ ಮೂತ್ರಪಿಂಡ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು.
110 ಹೃದಯ ಕಾಯಿಲೆ ಹಾಗೂ 132 ಮೂತ್ರಪಿಂಡ ಸಂಬಂಧಿ ರೋಗಿಗಳ ತಪಾಸಣೆ ಮಾಡಲಾಯಿತು.
ಬೆಂಗಳೂರಿನ ನುರಿತ ವೈದ್ಯರಾದ ಡಾ. ಕುಮಾರ್, ಡಾ. ಅಶೋಕ್ ತಪಾಸಣ ಶಿಬಿರದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಚ್.ಆರ್.ಎಸ್. ಸಂಚಾಲಕ ಮೌಲಾನ ಸೈಯ್ಯದ್ ಝುಬೇರ್ ಸೇರಿದಂತೆ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತಿದ್ದರು.
Next Story





