ಪುತ್ತೂರು : ತಾಲೂಕು ಮಟ್ಟದ ಕರಾವಳಿ ಉತ್ಸವ

ಪುತ್ತೂರು , ಡಿ. 18 : ಕರಾವಳಿಯಲ್ಲಿ ವೈವಿದ್ಯಮಯ ವೃತ್ತಿ ಮತ್ತು ಪರಿಸರ ಪರಂಪರೆಯಿದ್ದು ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಪುತ್ತೂರಿನ ಪುರಭವನದಲ್ಲಿ ನಡೆದ ಕರಾವಳಿ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರಾವಳಿಯಲ್ಲಿನ ಬುಟ್ಟಿ ಹೆಣೆಯುವಿಕೆ, ಕುಡುಪು ತಯಾರಿ, ಮಡಿಕೆ ತಯಾರಿ ಹೀಗೆ ಪ್ರತಿಯೊಂದು ವೃತ್ತಿಯಲ್ಲಿಯಲ್ಲಿಯೂ ಪರಂಪರೆಯ ಇತಿಹಾಸವಿದೆ. ಆದರೆ ಇತ್ತೀಚಿನ ಮಕ್ಕಳಿಗೆ ಈ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಅವರಿಗೂ ಈ ವೃತ್ತಿಯನ್ನು ಕಲಿಸಬೇಕು ಹಾಗೂ ಇಲ್ಲಿನ ವೈವಿದ್ಯಮಯ ಪರಿಸರ ಪರಂಪರೆಯ ಬಗ್ಗೆಯೂ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ. ರಘುನಂದನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರ ಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಡೆಸಲಾದ ‘ರಸ್ತೆ ಸುರಕ್ಷತೆ’ ಕುರಿತ ಚಿತ್ರಸ್ಪರ್ಧೆ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಡೆಸಲಾದ ‘ನಮ್ಮ ಕರಾವಳಿ’ ಚಿತ್ರಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕಿ ಬಹುಮಾನ ವಿತರಿಸಿದರು.
ಶಿಕ್ಷಕ ದಿನೇಶ್ ಬಹುಮಾನಿತರ ಪಟ್ಟಿ ವಾಚಿಸಿದರು.
ಉಪತಹಸೀಲ್ದಾರ್ ಶ್ರೀಧರ್ ಪಿ ಸ್ವಾಗತಿಸಿದರು.
ತಹಸೀಲ್ದಾರ್ ಅನಂತಶಂಕರ್ ವಂದಿಸಿದರು.
ಪ್ರೊ. ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಫೋಟೋ:







