ಮೇಲ್ಛಾವಣಿ ಕುಸಿುದು ವ್ಯಕ್ತಿ ಸಾವು

ಅಂಕೋಲಾ, ಡಿ.18 : ವ್ಯಕ್ತಿಯೊರ್ವನು ತನ್ನ ಅಂಗಡಿ ಕಟ್ಟಡವನ್ನು ತೆರವುಗೊಳಿಸುತ್ತಿರುವಾಗ ಮೇಲ್ಛಾವಣಿ ಕುಸಿದು, ಮೃತಪಟ್ಟಿರುವ ರಾ.ಹೆ.66ರ ಸಮೀಪ ಬಾಳಿಗುಳಿ ಕೃಷ್ಣಾಪುರದಲ್ಲಿ ನಡೆದಿದೆ.
ಕೃಷ್ಣಾಪುರ ನಿವಾಸಿ ನಾಗೇಶ ನೇಮು ನಾಯ್ಕ (33) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿರುತ್ತಾನೆ.
ಅಂಗಡಿ ಜಾಗವನ್ನು ಹೆದ್ದಾರಿ ಅಗಲೀಕರಣಕ್ಕಾಗಿ ಬಿಟ್ಟುಕೊಡುವುದಗೊಸ್ಕರ ನಾಗೇಶ ನಾಯ್ಕನು ಸ್ವತಃ ಕಟ್ಟಡವನ್ನು ತೆರವುಗೊಳಿಸುತ್ತಿರುವಾಗ ಮೇಲ್ಛಾವಣಿ ಕುಸಿದು ಮೈಮೇಲೆ ಬಿದ್ದ ಪರಿಣಾಮ ತಲೆ ಮತ್ತು ಕಿವಿ ಭಾಗದಲ್ಲಿ ರಕ್ತ ಸೂರುವಿಕೆಯಿಂದ ಬಳಲುತ್ತಿದ್ದುದ್ದನ್ನು ಕಂಡು, ಸ್ಥಳೀಯರು ಪಟ್ಟಣದ ಆರ್ಯಾ ಮೆಡಿಕಲ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸುವರಷ್ಟರಲ್ಲಿ ಮೃತಪಟ್ಟಿರುತ್ತಾನೆ.
ಈ ಸ್ಥಳಕ್ಕೆ ಪಿ.ಎಸ್.ಐ. ಎಚ್.ಓಂಕಾರಪ್ಪ , ಪಿ.ಎಸ್.ಐ. ವೀಣಾ ಹೊನ್ನೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Next Story





