‘ಎಚ್.ವೈ.ಮೇಟಿ’ ಪ್ರಕರಣ: ನಾಲ್ವರ ವಿರುದ್ಧ ದೂರು ದಾಖಲು

ಬಾಗಲಕೋಟೆ, ಡಿ. 18: ಮಾಜಿ ಸಚಿವ ಎಚ್.ವೈ.ಮೇಟಿ ‘ರಾಸಲೀಲೆ’ ಆರೋಪ ಪ್ರಕರಣದ ಸಂತ್ರಸ್ತ ಮಹಿಳೆ ಎನ್ನಲಾದ ವಿಜಯಲಕ್ಷ್ಮಿ ‘ತನಗೆ ಜೀವ ಬೆದರಿಕೆ ಇದೆ’ ಎಂದು ಇಲ್ಲಿನ ನವನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಸಶಸ್ತ್ರ ಮೀಸಲು ಪಡೆಯ ಪೇದೆ ಸುಭಾಷ್ ಮುಗಳಖೋಡ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಸುಭಾಷ್ ಮುಗಳಖೋಡ, ಮಿರಜಕರ್, ಅಶೋಕ, ಸಿದ್ದಲಿಂಗ ಎಂಬವರ ವಿರುದ್ಧ ದೂರು ದಾಖಲಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿಗಳ ಬಂಧನಕ್ಕೆ ಶೋಧ ಕೈಗೊಂಡಿದ್ದಾರೆ. ನಿನ್ನೆ ತಡರಾತ್ರಿ ನವ ನಗರ ಪೊಲೀಸ್ ಠಾಣೆಗೆ ಆಗಮಿಸಿದ ವಿಜಯಲಕ್ಷ್ಮಿ ದೂರು ದಾಖಲು ಮಾಡಿದ್ದಾರೆ.
Next Story





