ಬೆಂಕಿ ಆಕಸ್ಮಿಕ: ವೃದ್ಧೆ ಮೃತ್ಯು
![ಬೆಂಕಿ ಆಕಸ್ಮಿಕ: ವೃದ್ಧೆ ಮೃತ್ಯು ಬೆಂಕಿ ಆಕಸ್ಮಿಕ: ವೃದ್ಧೆ ಮೃತ್ಯು](https://www.varthabharati.in/sites/default/files/images/articles/2016/12/18/download_0.jpg)
ಕಾರ್ಕಳ, ಡಿ.18: ಕೌಡೂರು ಗ್ರಾಮದ ರಂಗನಪಲ್ಕೆ ಎಂಬಲ್ಲಿ ಬೆಂಕಿ ಆಕಸ್ಮಿಕದಿಂದ ಗಾಯಗೊಂಡಿದ್ದ ವೃದ್ಧೆ ಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ರಂಗನಪಲ್ಕೆಯ ಎಲಿಜಾ ಅಂದ್ರಾದೆ(90) ಎಂದು ಗುರುತಿಸಲಾಗಿದೆ.
ಇವರು ಡಿ.12ರಂದು ಬೆಳಗ್ಗೆ ಚಿಮಣಿ ದೀಪ ಹಿಡಿದು ಬಾಗಿಲು ತೆಗೆಯಲು ಬಂದಾಗ ಆಕಸ್ಮಿಕವಾಗಿ ಚಿಮಣಿ ದೀಪ ಕೈಯಿಂದ ಜಾರಿ ಬಟ್ಟೆ ಗಳಿಗೆ ಬೆಂಕಿ ತಗುಲಿ ಮೈಗೆ ಸುಟ್ಟ ಗಾಯಗಳಾಗಿದ್ದು, ಅದೇ ದಿನ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ವಾಗಿ ಗಾಯಗೊಂಡ ಅವರು ಡಿ.17ರಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story