ಬಾವಿಗೆ ಹಾರಿ ಮುಖ್ಯ ಶಿಕ್ಷಕಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಹೆಬ್ರಿ, ಡಿ.18: ಶಾಲಾ ಬೆಳ್ಳಿಹಬ್ಬದ ವಾರ್ಷಿಕೋತ್ಸವದ ತಯಾರಿ ಸಂಬಂಧಿಸಿದ ವಿಚಾರದಲ್ಲಿ ಮನನೊಂದ ಮುಖ್ಯ ಶಿಕ್ಷಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.17ರಂದು ರಾತ್ರಿ ವೇಳೆ ಹೆಬ್ರಿ ಗ್ರಾಮದ ಮಾಯಲ್ಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಮಾಯಲ್ಬೆಟ್ಟು ನಿವಾಸಿ ಮುರಲೀಧರ ಭಟ್ ಎಂಬವರ ಪತ್ನಿ ಹಾಗೂ ಚಾರಾ ಗ್ರಾಮದ ಕೊಂಡೆಜಡ್ಡು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೇದಾವತಿ(43) ಎಂದು ಗುರುತಿಸಲಾಗಿದೆ.
ಡಿ.18ರಂದು ಶಾಲಾ ಬೆಳ್ಳಿಹಬ್ಬದ ವಾರ್ಷಿಕೋತ್ಸವ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೆ ವೇದಾವತಿ ಸುಮಾರು ಒಂದು ತಿಂಗಳಿಂದ ತಯಾರಿ ನಡೆಸುತ್ತಿದ್ದರು. ಈ ವಿಚಾರವನ್ನು ಮನಸ್ಸಿಗೆ ತುಂಬಾ ಹಚ್ಚಿಕೊಂಡ ಅವರ, ಮಾನಸಿಕವಾಗಿ ನೊಂದು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





