ಬ್ಯಾಂಕಿನಲ್ಲಿ ಕುಸಿದು ಬಿದ್ದು ಮೃತ್ಯು
ಕುಂದಾಪುರ, ಡಿ.18: ಅಗತ್ಯ ಕೆಲಸಕ್ಕೆ ಬ್ಯಾಂಕಿಗೆ ಹೋಗಿದ್ದ ವ್ಯಕ್ತಿಯೊಬ್ಬರು ಅಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಕುಂದಾಪುರದಲ್ಲಿ ಡಿ.17ರಂದು ಮಧ್ಯಾಹ್ನ 2.30ರ ಸುಮಾರಿಗೆ ನಡೆದಿದೆ.
ಮೃತರನ್ನು ಅಮಾಸೆಬೈಲಿನ ಬಳುವಳ್ಳಿ ನಿವಾಸಿ, ಎಲ್‌ಐಸಿ ಏಜೆಂಟ್ ಬಿ.ನಾರಾಯಣ ಶೆಟ್ಟಿ(50) ಎಂದು ಗುರುತಿಸಲಾಗಿದೆ.
ಕುಂದಾಪುರ ಎಲ್‌ಐಸಿ ಕಛೇರಿಗೆ ಬಂದು ಬಳಿಕ ಅಗತ್ಯ ಕೆಲಸದ ಬಗ್ಗೆ ಕುಂದಾಪುರ ಕಾರ್ಪೋರೇಶನ್ ಬ್ಯಾಂಕಿಗೆ ಹೋಗಿದ್ದ ನಾರಾಯಣ ಶೆಟ್ಟಿ, ತೀವ್ರ ಅಸ್ವಸ್ಥ ಗೊಂಡು ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





