ಬಂಟ್ವಾಳ : ಡಿ. 22ರಂದು ಅನುಸ್ಮರಣೆ ಹಾಗೂ ಮೌಲೀದ್ ಪಾರಾಯಣ
ಬಂಟ್ವಾಳ, ಡಿ. 18: ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ಸಮಿತಿ ವತಿಯಿಂದ ಇತ್ತೀಚೆಗೆ ನಿಧನರಾದ ಸಮಸ್ತ ಕೇರಳ ಜಮೀಯತುಲ್ ಉಲಮಾದ ಅಧ್ಯಕ್ಷ ಮುಹಖ್ಖಿಖುಲ್ ಉಲಮಾ ಎ.ಪಿ.ಮುಹಮ್ಮದ್ ಮುಸ್ಲಿಯಾರ್‌ರವರ ಅನುಸ್ಮರಣಾ ಹಾಗೂ ಮೌಲೀದ್ ಪಾರಾಯಣ ಕಾರ್ಯಕ್ರಮ ಡಿ. 22ರಂದು ಮಗ್ರೀಬ್ ನಮಾಝ್ ಬಳಿಕ ಬಿ.ಸಿ.ರೋಡ್ ಕೈಕಂಬ ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರದ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ದರ್ಗಾ ಝಿಯಾರತ್ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮಿತ್ತಬೈಲ್ ಕೇಂದ್ರ ಮದರಸದ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ ಅಧ್ಯಕ್ಷತೆ ವಹಿಸಲಿದ್ದು, ಮಿತ್ತಬೈಲು ಮಸೀದಿಯ ಖತೀಬರಾದ ಖಲಿಲುರ್ರಹ್ಮಾನ್ ದಾರಿಮಿ ಮುಖ್ಯ ಪ್ರಭಾಷಣೆ ಗೈಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





