ಸಾಲ ಮರುಪಾವತಿಗೆ ರಿಯಾಯಿತಿ ಅನ್ವಯಿಸದು: ಆರ್‌ಬಿಐ ಸ್ಪಷ್ಟನೆ

ಶಿವಮೊಗ್ಗ, ಡಿ.18: ಸಾಲಗಾರರು ತಮ್ಮ ಸಾಲಗಳನ್ನು ಮರುಪಾವತಿ ಮಾಡಲು ಯಾವುದೇ ಗಡುವು ವಿಸ್ತರಣೆ ಇಲ್ಲ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ. ಮೈಕ್ರೊ ಫೈನಾನ್ಸ್ ಇನ್‌ಸ್ಟಿಟ್ಯೂಷನ್ಸ್ ನೆಟ್‌ವರ್ಕ್ (ಎಂಎಫ್‌ಐಎನ್) ಒಕ್ಕೂಟದ ಸಿಇಒ ಅವರಿಗೆ ಬರೆದ ಪತ್ರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಸ್ಪಷ್ಟನೆ ನೀಡಿದ್ದು, 2016ರ ನ.21 ರಂದು ಹೊರಡಿಸಿದ ಸುತ್ತೋಲೆಯಂತೆ ಸಾಲ ಬಾಕಿ ಪಾವತಿಗೆ ಅನ್ವಯಿಸುವುದಿಲ್ಲ ಎಂದಿದೆ.
ಸಣ್ಣ ಹಣಕಾಸು ಸಂಸ್ಥೆಗಳ ಸ್ವಯಂ ನಿಯಂತ್ರಣದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಎಂಎಫ್‌ಐಎನ್, ಈ ಕುರಿತು ಬಯಸಿದ ಸ್ಪಷ್ಟನೆಗೆ ಪ್ರತಿಕ್ರಿಯಿಸಿರುವ ಆರ್‌ಬಿಐ, ಸುತ್ತೋಲೆಯಲ್ಲಿ ನೀಡಿರುವ ರಿಯಾಯಿತಿಗಳು ಸಾಲ ಮರುಪಾವತಿಗೆ ಅನ್ವಯಿಸುವುದಿಲ್ಲ.
ಮುಂಗಡಕ್ಕೆ ಸಂಬಂಧಿಸಿದಂತೆ ಆದಾಯ ಗುರುತಿಸುವಿಕೆ, ಆಸ್ತಿವಿಂಗಡಣೆ ಕುರಿತ ಆರ್‌ಬಿಐ ಸುತ್ತೋಲೆಯು ಸಾಮಾನ್ಯ ಸಾಲದ ಖಾತೆಯನ್ನು ಉಪ ಸಾಮಾನ್ಯ ಎಂದು ವರ್ಗೀಕರಣ ಮಾಡಲು 60 ದಿನಗಳ ಕಾಲಾವಕಾಶವನ್ನು ನೀಡಿತ್ತು.
ಈ ಕುರಿತು ಎಂಎಫ್‌ಐಎನ್‌ನ ಸಿಇಒ ರತ್ನಾ ವಿಶ್ವನಾಥನ್ ಅವರು, ಆರ್‌ಬಿಐನ ಈ ಸ್ಪಷ್ಟನೆಯೂ ಎಂಎಫ್‌ಐಎನ್‌ಗೆ ದೊಡ್ಡ ಸಮಾಧಾನ ನೀಡಿದೆ. ಸಾಲ ಮರುಪಾವತಿಗೆ 60 ದಿನದ ಕಾಲಾವಕಾಶ ವಿಸ್ತರಿಸಲಾಗಿದ್ದು, ಈ ಕುರಿತು ನಿರ್ಮಾಣವಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ ಎಂದಿದ್ದಾರೆ.
ಎಂಎಫ್‌ಐಎನ್ ಪ್ರಸ್ತುತ ತನ್ನ ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಹೊಣೆ ಹೊಂದಿದ್ದು, ಜೊತೆಗೆ ಗ್ರಾಹಕ ಸಂಸ್ಥೆಗಳು ಆರ್‌ಬಿಐ ನೀತಿಯನ್ನು ಗಮನಿಸಿಕೊಳ್ಳಬೇಕಾದ ಹೊಣೆಯನ್ನು ನಿಭಾಯಿಸಬೇಕಾಗಿದೆ ಎಂದಿದ್ದಾರೆ.







