ಐಎಸ್‌ಎಲ್: ಕೇರಳವನ್ನು ಮಣಿಸಿದ ಕೋಲ್ಕತಾಕ್ಕೆ ಟ್ರೋಫಿ

ಕೊಚ್ಚಿ, ಡಿ.18: ಪೆನಾಲ್ಟಿ ಶೂಟೌಟ್‌ನಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು 4-3 ಗೋಲುಗಳ ಅಂತರದಿಂದ ಮಣಿಸಿದ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಎರಡನೆ ಬಾರಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ರವಿವಾರ ಇಲ್ಲಿ ನಡೆದ ಐಎಸ್‌ಎಲ್ ಫೈನಲ್ ಪಂದ್ಯದ 120 ನಿಮಿಷಗಳ ಆಟ ಕೊನೆಗೊಂಡಾಗ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿದಾಗ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಲಾಯಿತು.
ಶೂಟೌಟ್‌ನಲ್ಲಿ ಸೌರವ್ ಗಂಗುಲಿ ಸಹ ಮಾಲಕತ್ವದ ಕೋಲ್ಕತಾ ತಂಡ ಸಚಿನ್ ತೆಂಡುಲ್ಕರ್ ಸಹ ಮಾಲಕತ್ವದ ಕೇರಳ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯಿತು. 55,000 ಪ್ರೇಕ್ಷಕರ ಸಮ್ಮುಖದಲ್ಲಿ 5ನೆ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಜೆವೆಲ್ ರಾಜಾ ಕೋಲ್ಕತಾಕ್ಕೆ ಜಯ ತಂದರು. 2014ರಲ್ಲಿ ನಡೆದ ಫೈನಲ್‌ನಲ್ಲಿ ಕೇರಳವನ್ನು 1-0 ಅಂತರದಿಂದ ಮಣಿಸಿದ್ದ ಕೋಲ್ಕತಾ ಪ್ರಶಸ್ತಿ ಜಯಿಸಿತ್ತು.
ಕಳೆದ 3 ಆವೃತ್ತಿಯ ಐಎಸ್‌ಎಲ್ ಫೈನಲ್‌ನಲ್ಲಿ ಮೊದಲ ಬಾರಿ ಪೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶ ಹೊರ ಹೊಮ್ಮಿದೆ.
Next Story





