ಜೂನಿಯರ್ ಹಾಕಿ ವಿಶ್ವಕಪ್: ಭಾರತ ಚಾಂಪಿಯನ್!!!
ಬೆಲ್ಜಿಯಂ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಭಾರತ ತಂಡ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ತವರು ನೆಲದಲ್ಲಿ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯನ್ನು ಜಯಿಸಿದ ಮೊದಲ ತಂಡವೆಂಬ ಕೀರ್ತಿಗೂ ಭಾಜನವಾಗಿದೆ.15 ವರ್ಷಗಳ ಬಳಿಕ 2ನೆ ಬಾರಿ ವಿಶ್ವಕಪ್ ಜಯಿಸಿದ ಭಾರತ ಐತಿಹಾಸಿಕ ಸಾಧನೆ ಮಾಡಿತು. 2001ರಲ್ಲಿ ಆಸ್ಟ್ರೇಲಿಯದಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು. ಭಾರತ ತಂಡ ಜರ್ಮನಿ ತಂಡದ ಬಳಿಕ ಜೂನಿಯರ್ ವಿಶ್ವಕಪ್‌ನ್ನು ಎರಡು ಬಾರಿ ಜಯಿಸಿದ ಸಾಧನೆ ಮಾಡಿತು.
Next Story





