ಪಾವೂರು ಗಾಡಿಗದ್ದೆ ಶಾಲಾ ವಾರ್ಷಿಕೋತ್ಸವ

ಮಂಗಳೂರು, ಡಿ.18: ಪಾವೂರು ಗ್ರಾಮದ ಗಾಡಿಗದ್ದೆ ದ.ಕ. ಜಿಪಂ ಹಿ.ಪ್ರಾ. ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಕಾರ್ಯಕ್ರಮ ಉದ್ಘಾಟಿಸಿದರು. ಪಾವೂರು ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್ ಅಧ್ಯಕ್ಷತೆ ವಹಿಸಿದ್ದರು.
ಕೊಣಾಜೆ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿಯಾಗಿ ಸುಗುಣಾ ಬಾಲಕೃಷ್ಣ ಮಾತನಾಡಿದರು. ಈ ಸಂದರ್ಭ ಪಾವೂರು ಗ್ರಾಪಂ ಸದಸ್ಯೆ ರವಿಕಲಾ, ಸದಸ್ಯ ವಾಮನ್‌ರಾಜ್, ಉಗ್ಗಪ್ಪಪೂಜಾರಿ, ಶಿಕ್ಷಕಿ ನಮಿತಾ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಅಝ್ಮತ್ ವರದಿ ವಾಚಿಸಿದರು. ಶಿಕ್ಷಕಿ ಸಾಂಡ್ರಾ ಲವೀನಾ ಡಿಸೋಜ ಸ್ವಾಗತಿಸಿದರು. ಐರಿನ್ ಡಿಸೋಜ ವಂದಿಸಿದರು. ರಾಜಲಕ್ಷ್ಮೀ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಮತ್ತು ಅಬ್ದುರ್ರಹ್ಮಾನ್ ಕೊಣಾಜೆಯವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.
Next Story





