ಐದನೆ ಟೆಸ್ಟ್: ಚೊಚ್ಚಲ ಶತಕ ದಾಖಲಿಸಿದ ಕರ್ನಾಟಕದ ನಾಯರ್

ಚೆನ್ನೈ, ಡಿ.19: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತದ ಕರುಣ್ ನಾಯರ್ ಚೊಚ್ಚಲ ಶತಕ ದಾಖಲಿಸಿದ್ದಾರೆ.
ಮೂರನೆ ಟೆಸ್ಟ್ ಆಡುತ್ತಿರುವ ಕನಾಟಕದ ನಾಯರ್ ಅವರು 115 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಚೊಚ್ಚಲ ಶತಕ ಪೂರ್ಣಗೊಳಿಸಿದರು. ಟೆಸ್ಟ್ ನ ನಾಲ್ಕನೆ ದಿನವಾಗಿರುವ ಇಂದು 129 ಓವರ‍್ ಗಳು ಪೂರ್ಣಗೊಂಡಾಗ ಭಾರತ 5 ವಿಕೆಟ್ ನಷ್ಟದಲ್ಲಿ 447 ರನ್ ಗಳಿಸಿದೆ. 115 ರನ್ ಗಳಿಸಿರುವ ಕರುಣ್ ನಾಯರ್ ಮತ್ತು ಇನ್ನೂ ಖಾತೆ ತೆರೆಯದ ಆರ‍್.ಅಶ್ವಿನ್ ಔಟಾಗದೆ ಕ್ರೀಸ್‌ನಲ್ಲಿದ್ದರು.ಮುರಳಿ ವಿಜಯ್ 29 ರನ್ ಗಳಿಸಿ ಔಟಾಗಿದ್ಧಾರೆ.
Next Story





