ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ

ಬಂಟ್ವಾಳ: ಡಿ 17, ತೌಹೀದ್ ಅರೆಬಿಕ್ ಮದ್ರಸ ಎಸ್ಕೆಎಸ್ಬಿವಿ ವತಿಯಿಂದ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ಇಲ್ಲಿಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕರಿಯರ್ ಗೈಡೆನ್ಸ್ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ರಫೀಕ್ ಮಾಸ್ಟರ್ ಮತ್ತು ಗೂಡಿನಬಳಿ ಮಸೀದಿ ಖತೀಬ್ ರಿಯಾಝ್ ರಹ್ಮಾನಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ಆರ್ ಮುಹಮ್ಮದ್ ಅಲಿ ಹಾಜಿ, ಕಾರ್ಯದರ್ಶಿ ಹಾಜಿ ಮುಹಮ್ಮದ್, ಪಿಟಿಎ ಅಧ್ಯಕ್ಷ ಶಬೀರ್ ಅಹ್ಮದ್, ಶಾಲಾ ಮುಖ್ಯ ಶಿಕ್ಷಕಿ ಮೆಟಿಲ್ಡ ಡಿಕೋಸ್ಟ, ತೌಹೀದ್ ಅರೆಬಿಕ್ ಮದ್ರಸದ ಸದರ್ ಮುಅಲ್ಲಿಂ ಅಬೂಬಕ್ಕರ್ ಸಿದ್ದೀಖ್ ರಹ್ಮಾನಿ ಮೊದಲಾದವರು ಉಪಸ್ಥಿತರಿದ್ದರು.
Next Story





