ನರೇಂದ್ರ ಮೋದಿ-‘ವೌನೇಂದ್ರ ಮೋದಿ’: ಜನಾರ್ದನ ಪೂಜಾರಿ
ದೇಶದ ಆರ್ಥಿಕ ವ್ಯವಸ್ಥೆ ಗೆ ಹಾನಿ

ಮಂಗಳೂರು,ಡಿ.19: ದೇಶದ ಪ್ರಮುಖ ವಿಷಯಗಳು ಚರ್ಚೆಯಾಗಬೇಕಾದ ಸಂಸತ್ ಅವೇಶನ ಸರಿಯಾಗಿ ನಡೆಯುತ್ತಿಲ್ಲ ಪ್ರಧಾನಿ ನರೇಂದ್ರ ಮೋದಿ ವೌನೇಂದ್ರ ಮೋದಿಯಾಗಿದ್ದಾರೆ.ಅಸಮರ್ಪಕ ರೀತಿಯಲ್ಲಿ ನೋಟುಗಳನ್ನು ಅವೌನ್ಯಗೊಳಿಸಿದ ಪರಿಣಾಮವಾಗಿ ದೇಶದ ಅಭಿವೃದ್ಧಿ 5ವರ್ಷ ಹಿಂದಕ್ಕೆ ಸರಿದಿದೆ ಎಂದು ಮಾಜಿ ವಿತ್ತ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದರು.
ದೇಶದಲ್ಲಿ ಭೃಷ್ಟಾಚಾರ ಹೆಚ್ಚುತ್ತಿರುವ ಕಾರಣ ಆರ್ಥಿಕ ವ್ಯವಸ್ಥೆ ನಾಶವಾಗುತ್ತಿದೆ. ಸೈನಿಕರಿಗೆ ನೀಡಿದ ಭರವಸೆ ಈಡೇರಿಕೆ ಆಗದಿರುವ ಬಗ್ಗೆ ಅವರಿಗೆ ನಿರಾಸೆಯಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ, ಸುಶ್ಮಾ ಸ್ವರಾಜ್‌ರ ಕುಟುಂಬದ ಸದಸ್ಯರು, ಮಹಾರಾಷ್ಟ್ರದ ಮುಖ್ಯಮಂತ್ರಿ, ಉದ್ಯಮಿ ವಿಜಯ ಮಲ್ಯ, ಲಲಿತ್ ಮೋದಿ ಮೊದಲಾದ ಭ್ರಷ್ಟಾಚಾರಿಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಹಾನಿಯಾಗಿದೆ. ದೇಶದ ಆರ್ಥಿಕ ವ್ಯವಸ್ಥೆ ಈ ರೀತಿ ದುರ್ಬಲಗೊಳ್ಳುತ್ತಿದ್ದರೂ ಪ್ರಧಾನಿ ಮೋದಿ ಮೌನವಹಿಸಿದ್ದಾರೆ. ಪರಿಣಾಮವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ಜನರನ್ನು ಕಂಗೆಡಿಸಿದೆ ಎಂದು ಜನಾರ್ದನ ಪೂಜಾರಿ ಆರೋಪಿಸಿದರು.
ಇಬ್ಬರು ಸಚಿವರು ಮತ್ತು ಇಬ್ಬರು ಶಾಸಕರ ಹಗರಣ ಬಹಿರಂಗಪಡಿಸಿ ಯಡಿಯರೂರಪ್ಪರಿಗೆ ಸವಾಲು:
ಸಚಿವ ಮೇಟಿ ಲೈಂಗಿಕ ಹಗರಣದ ಬಳಿಕ ಸಾರ್ವಜನಿಕವಾಗಿ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೂ ಇಬ್ಬರು ಸಚಿವರು,ಇಬ್ಬರು ಶಾಸಕರು ಈ ರೀತಿಯ ಪ್ರಕರಣಗಳಲ್ಲಿ ರಾಜೀನಾಮೆ ನೀಡಬೇಕೆಂದಿದ್ದಾರೆ ಅವರ ಆರೋಪ ನಿಜವಾಗಿದ್ದರೆ ಅವರ ಹೆಸರುಗಳನ್ನು ತಕ್ಷಣ ಬಹಿರಂಗ ಪಡಿಸಲಿ ಎಂದು ಜನಾರ್ದನ ಪೂಜಾರಿ ಸವಾಲೆಸೆದಿದ್ದಾರೆ.
ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನೆ ನಡೆಸಲಿ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಪುರಂದರ, ಕರುಣಾಕರ ಶೆಟ್ಟಿಮೊದಲಾದವರು ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







