ಬ್ರಹ್ಮಾವರ ಸಮೀಪ ಹೇರೂರು ಸೇತುವೆಯಲ್ಲಿ ಖಾಸಗಿ ಬಸ್, ಆಂಬುಲೆನ್ಸ್ ಢಿಕ್ಕಿ

ಬ್ರಹ್ಮಾವರ, ಡಿ.19: ಉಡುಪಿಯಿಂದ ಬ್ರಹ್ಮಾವರಕ್ಕೆ ಬರುತ್ತಿದ್ದ ಅಂಬ್ಯುಲೆನ್ಸ್ ಮತ್ತು ಬ್ರಹ್ಮಾವರದಿಂದ ಉಡುಪಿಯತ್ತ ತೆರಳುತ್ತಿದ್ದ ಬಸ್ ನಡುವೆ ಢಿಕ್ಕಿ ಸಂಭವಿಸಿದೆ.
ಉಡುಪಿ ಸಂತೆಕಟ್ಟೆಯಿಂದ ಬ್ರಹ್ಮಾವರದವರೆಗೆ ಕಿಲೋಮೀಟರ್ ಉದ್ದಕ್ಕೆ ಟ್ರಾಫಿಕ್ ಜಾಮ್ ಸಂಭವಿಸಿದೆ. ಹೇರೂರು ಹಳೆಯ ಸೇತುವೆ ದುರಸ್ತಿ ಹಿನ್ನಲೆಯಲ್ಲಿ ಏಕಮುಖ ಸಂಚಾರ ಸ್ಥಗಿತಗೊಳಿಸಿ, ಹೊಸ ಸೇತುವೆಯಲ್ಲಿ ಎರಡು ಕಡೆಯ ವಾಹನ ಸಂಚಾರಕ್ಕೆ ಅವಕಾಶ ನೀಡದ ಹಿನ್ನಲೆಯಲ್ಲಿ ಅಪಘಾತ ಹಾಗೂ ಟ್ರಾಫಿಕ್ ಜಾಮ್ ನಡೆದಿದೆ.
ಘಟನೆಯ ಪೂರ್ಣ ವಿವರ ಇನ್ನಷ್ಟೇ ಬರಬೇಕಿದೆ...
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





