ಸೌದಿ ಅರೇಬಿಯ: ಅಪಘಾತದಲ್ಲಿ ಭಾರತೀಯ ವ್ಯಕ್ತಿ ಸಾವು

ಬುರೈದ,ಡಿ.19: ಕೊಲ್ಲಂನ ರೇಷ್ಮಾಭವನದ ರಾಧಾಕೃಷ್ಣನ್‌ಶಿವರಾಮ್(50) ಸೌದಿ ಅರೇಬಿಯದ ಬುರೈದದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭಾರೀ ಮಳೆ ಸುರಿದ ಪರಿಣಾಮ ರಾಧಾಕೃಷ್ಣನ್ ಚಲಾಯಿಸುತ್ತಿದ್ದ ಕಾರು ರಸ್ತೆ ಮಧ್ಯೆ ಕೆಟ್ಟು ನಿಂತಿತ್ತು. ಅದನ್ನು ಮುಂದಕ್ಕೆ ತಳ್ಳಲು ಯತ್ನಿಸುತ್ತಿದ್ದ ವೇಳೆ ಹಿಂಬದಿಯಿಂದ ಯಮನ್ ಪ್ರಜೆ ಚಲಾಯಿಸುತ್ತಿದ್ದ ಕಾರು ಅವರಿಗೆ ಢಿಕ್ಕಿಹೊಡೆದಿದೆ. ಅಪಘಾತ ಬುರೈದ ಅಲ್‌ಬೈಕ್ ರೆಸ್ಟಾರೆಂಟ್ ಸಮೀಪ ನಡೆದಿತ್ತು.
ಕಳೆದ 22ವರ್ಷಗಳಿಂದ ಬುರೈದ ಅಲ್‌ಫರಹ್ ಆಸ್ಪತ್ರೆಯಲ್ಲಿ ದುಡಿಯುತ್ತಿದ್ದರು. ಬುರೈದ ಬಿಎಂಸಿ ಶವಾಗಾರದಲ್ಲಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು ಸೋಮವಾರ ಊರಿಗೆ ತರಲಾಗುವುದು ಎಂದು ವರದಿ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





