ವಿಷ್ಣು ಕೊಲೆ ಪ್ರಕರಣ: 11 ಆರೆಸ್ಸೆಸ್ಸಿಗರಿಗೆ ಅವಳಿ ಜೀವಾವಧಿ ಶಿಕ್ಷೆ
.jpg)
ತಿರುವನಂತಪುರ,ಡಿ.19: ತಿರುವನಂತಪುರಂ ಅಡಿಶನಲ್ ಸೆಶನ್ಸ್ ಕೋರ್ಟು ಸಿಪಿಎಂ ಕಾರ್ಯಕರ್ತ ವಂಚಿಯೂರ್ ವಿಷ್ಣು ಕೊಲೆ ಪ್ರಕರಣದ ತೀರ್ಪು ಪ್ರಕಟಿಸಿದ್ದು, 13 ಮಂದಿ ಆರೆಸ್ಸೆಸ್ ಕಾರ್ಯಕರ್ತರಿಗೆ ಶಿಕ್ಷೆ ವಿಧಿಸಿದೆ. ಇವರಲ್ಲಿ 11 ಮಂದಿಗೆ ಅವಳಿ ಜೀವಾಧಿ ಶಿಕ್ಷೆ, ಇನ್ನೊಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಕೊಲೆ ಆರೋಪಿಗಳು ತಪ್ಪಿಸಿಕೊಳ್ಳಲು ನೆರವು ನೀಡಿದ್ದ ಹರಿಲಾಲ್ ಎಂಬಾತನಿಗೆ ಕೋರ್ಟು 3 ವರ್ಷ ಕಠಿಣ ಶಿಕ್ಷೆ ಹಾಗೂ 50,000ರೂಪಾಯಿ ದಂಡವನ್ನು ವಿಧಿಸಿದೆ ಎಂದು ವರದಿಯಾಗಿದೆ.
2008ರ ಎಪ್ರಿಲ್ ಒಂದಕ್ಕೆ ಘಟನೆ ನಡೆದಿದ್ದು, ಸಿಪಿಎಂ ವಂಚಿಯೂರ್ ಕಲಕ್ಟರೇಟ್ ಶಾಖೆಯ ಸದಸ್ಯ ವಿಷ್ಣುವನ್ನು ಪಾಸ್‌ಪೋರ್ಟ್‌ಕಚೇರಿ ಮುಂಭಾಗದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ಕಡಿದು ಕೊಲೆಗೈದಿತ್ತು. ವಿಶೇಷ ಅಭಿಯೋಚಕರು ರಾಜಕೀಯದ್ವೇಷದಿಂದ ವಿಷ್ಣುವಿನ ಕೊಲೆ ನಡೆದಿದೆಎಂದು ವಾದಿಸಿದ್ದರು.
ಆರೋಪಿಗಳಿಗೆ ಅಡಗಿರಲು ನೆರವಾಗಿದ್ದಾನೆ ಎಂದು ಪ್ರಾಶಿಕ್ಯೂಶನ್ ಆರೋಪಿಸಿದ್ದ 16ನೆ ಆರೋಪಿ ಶೈಜು ಯಾನೆ ಅರುಣ್‌ಕುಮಾರ್‌ನನ್ನು ಆರೋಪ ಮುಕ್ತಗೊಳಿಸಿ ಖುಲಾಸೆಗೊಳಿಸಿದೆ.ಪ್ರಕರಣದ 3ನೆ ಆರೋಪಿ ವಿಚಾರಣೆ ಆರಂಭವಾಗುವ ಮುಂಚೆಯೇ ಕೊಲೆಯಾಗಿದ್ದು, 14ನೆ ಆರೋಪಿ ಆಝಂ ಅನಿ ಎಂಬಾತ ಈಗಲೂ ತಲೆತಪ್ಪಿಸಿಕೊಂಡಿದ್ದಾನೆ.
ಕೈತಮುಕ್ ಸಂತೋಷ್, ಕೇರಳಾದಿತ್ಯಪುರಂನ ಮನೋಜ್, ನಿಜು ಕುಮಾರ್, ಹರಿಲಾಲ್, ಮಣಕ್ಕಾಡಿನ ರಂಜಿತ್‌ಕುಮಾರ್,ಮಲಪ್ಪರಿಕೋಣಂ ಬಾಲು ಮಹೇಂದ್ರ, ಆನಯರದ ವಿಪಿನ್ ಯಾನೆ ಬಿಬಿನ್, ಕಡವೂರ್ ಸತೀಶ್ ಯಾನೆ ಸತೀಶ್‌ಕುಮಾರ್, ಪೇಟ್ಟದ ದಾಸ್,ವಟ್ಟಿಯೂರಿಕ್ಕಾವಿನ ಮಣಿಕಂಠನ್ ಯಾನೆ ಸತೀಶ್, ಚೇಂಚೇರಿ ವಿನೋದ್ ಕುಮಾರ್, ಶ್ರೀಕಾರ್ಯಂನ ಸುಭಾಶ್, ಕರಿಕ್ಕಗಂ ಶಿವಲಾಲ್ ಎಂಬವರಿಗೆ ಕೋರ್ಟು ಶಿಕ್ಷೆ ವಿಧಿಸಿದೆ ಎಂದು ವರದಿ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







