ವಿಟ್ಲ : ಮಡವೂರ್ ಸಿ.ಎಂ. ಮಖಾಂ ಯತೀಂಖಾನದಿಂದ ನೂತನ ಕಟ್ಟಡದ ಶಿಲಾನ್ಯಾಸ

ಬಂಟ್ವಾಳ, ಡಿ. 19: ಮಡವೂರ್ ಸಿ.ಎಂ. ವಲಿಯುಲ್ಲಾಹಿರವರನ್ನು ಕೇವಲ ಆಧ್ಯಾತ್ಮಿಕ ವಿಷಯಗಳಿಗೆ ಸೀಮಿತಗೊಳಿಸದೆ ಸಾಮಾಜಿಕವಾಗಿ ಮತ್ತು ಲೌಕಿಕವಾಗಿ ನಗದೀಕರಿಸಿಕೊಳ್ಳಬೇಕಾಗಿರುವುದು ಇಂದಿನ ಅತ್ಯಗತ್ಯವಾಗಿದೆ ಎಂದು ಸ್ವಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಕರೆ ನೀಡಿದರು.
ಮಡವೂರ್ ಸಿ.ಎಂ. ಮಖಾಂ ಯತೀಂಖಾನ ಎಜ್ಯುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ಅಧೀನದಲ್ಲಿ ವಿಟ್ಲದ ಅನಿಲಕಟ್ಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈದ ಸಯ್ಯದ್ ಎನ್.ಪಿ.ಎಂ.ಝೈನುಲ್ ಆಬಿದೀನ್ ಕುನ್ನುಂಗೈ, ದೇವರು ಅತೀ ಹೆಚ್ಚಾಗಿ ಮೆಚ್ಚುವಂತಹ ಕೆಲಸಗಳಲ್ಲಿ ಅನಾಥ ಮಕ್ಕಳ ಸೇವೆ ಕೂಡಾ ಒಂದಾಗಿದೆ. ಅವರ ಇಷ್ಟ ಪಡುವವರನ್ನು ದೇವರು ಇಷ್ಟ ಪಡುವನು. ಅವರಿಗೆ ಸಹಾಯ ಮಾಡುವವರನ್ನು ದೇವರು ಸಹಾಯ ಮಾಡುವನು. ನಾವು ನಮ್ಮ ಮಕ್ಕಳಿಗೆ ನೀಡುವ ಅತ್ಯುತ್ತಮ ದಾನವೆಂದರೆ ಶಿಕ್ಷಣವಾಗಿದೆ. ಆದ್ದುರಿಂದ ಎಲ್ಲರೂ ಶಿಕ್ಷಣ ಪಡೆಯುವಂತಾಗಬೇಕು. ಆದುದರಿಂದ ಎಲ್ಲಾ ಕಡೆಗಳಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಮಾತನಾಡಿ, ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣ ಅಗತ್ಯವಿದೆ. ಸಿ.ಎಂ. ಮಡವೂರ್ ಶಿಕ್ಷಣ ಕೇಂದ್ರ ಇಲ್ಲಿ ನಿರ್ಮಾಣಗೊಳ್ಳುವುದರಿಂದ ಅನಿಲಕಟ್ಟೆ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.
ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಧ್ವಜಾರೋಹಣಗೈದರು.
ಸಯ್ಯದ್ ಹಬೀಬ್ ತಂಙಳ್ ಸೂರಿಂಜ, ಸಯ್ಯದ್ ಅಮೀರ ತಂಙಳ್ ಕಿನ್ಯ, ಮೌಲೀದ್‌ಗೆ ನೇತೃತ್ವ ನೀಡಿದರು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಅಬ್ದುಲ್ ಖಾದರ್, ಕೆ.ಎಂ. ಖಾಸಿಂ ದಾರಿಮಿ ಕಿನ್ಯ, ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಎಸ್.ಬಿ.ಮುಹಮ್ಮದ್ ದಾರಿಮಿ, ಕೆ.ಎಂ.ಅಬೂಬಕ್ಕರ್ ಮದನಿ ಸಾಲೆತ್ತೂರು, ಕೆ.ಬಿ.ಅಬ್ದುಲ್ ಖಾದರ್ ದಾರಿಮಿ, ಜಿ.ಎಂ.ಅಬ್ದುಲ್ ರಹಿಮಾನ್ ಫೈಝಿ, ಎಸ್.ಎಚ್.ಉಸ್ಮಾನ್ ಹಾಜಿ ಆಲಡ್ಕ, ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಹಸೈನಾರ್ ಮುಸ್ಲಿಯಾರ್ ಕಾದುಕಟ್ಟೆ, ಅಬ್ದುಲ್ ರಹ್ಮಾನ್ ಆತೂರು, ಶರೀಫ್ ಮೂಸಾ ಕುದ್ದುಪದವು, ಪಿ.ಎಂ.ಅಬ್ದುಲ್ ಹಕೀಂ ಪರ್ತಿಪ್ಪಾಡಿ, ವಿ.ಎಸ್ ಇಬ್ರಾಹೀಂ ಒಕ್ಕೆತ್ತೂರು, ಶಮೀರ್ ಪಳಿಕೆ, ಇಸ್ಮಾಯೀಲ್ ಹಾಜಿ ಕೊಡಂಗಾಯಿ, ಅಬ್ದುಲ್ಲ ಹಾಜಿ ಮುಚ್ಚಿರಪದವು, ಅಬ್ದುಲ್ಲ ಹಾಜಿ ಕುದ್ದುಪದವು, ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ಲ ಹಾಜಿ ವಿಟ್ಲ, ನೋಟರಿ ಅಬೂಬಕ್ಕರ್ ವಿಟ್ಲ, ಮುಹಮ್ಮದ್ ಹನೀಫ್ ಅರಿಯಮೂಲೆ, ಹಾಜಿ ಸುಲೈಮಾನ್ ಕಲ್ಲಡ್ಕ, ನವೀನ್ ಖಂಡಿಗ, ಅಶ್ರಫ್ ಕಬಕ ಮೊದಲಾದವರು ಉಪಸ್ಥಿತರಿದ್ದರು.
ಹಾಜಿ ಯು.ಶರಪುದ್ದೀನ್ ಮಾಸ್ಟರ್ ಮಡವೂರ್ ಸ್ವಾಗತಿಸಿದರು.
ಕೆ.ಎಂ.ಎ.ಕೊಡಂಗಾಯಿ ನಿರೂಪಿಸಿದರು.
ಸಿ.ಎಚ್ ಇಬ್ರಾಹೀಂ ಮುಸ್ಲಿಯಾರ್ ಪರ್ತಿಪ್ಪಾಡಿ, ಎಂ.ಎಸ್ ಹಮೀದ್, ಅಬೂಬಕ್ಕರ್ ಅನಿಲಕಟ್ಟೆ, ಪತ್ರಕರ್ತ ಹನೀಫ್ ಅನಿಲಕಟ್ಟೆ ಸಹಕರಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







