ಡಿ.21 ರಂದು ಕ್ರಿಸ್ಮಸ್ ಪ್ರಯುಕ್ತ ವಾಹನಗಳ ಬೃಹತ್ ರ್ಯಾಲಿ
ಮಂಗಳೂರು, ಡಿ.19: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಂಗಳೂರು ಧರ್ಮಪ್ರಾಂತ ವತಿಯಿಂದ ಡಿ.21 ರಂದು ಮಧ್ಯಾಹ್ನ ವಾಹನಗಳ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಯಲ್ಲಿ ಧರ್ಮಪ್ರಾಂತದ ಐದು ವಲಯಗಳ ಜನರು ಭಾಗವಹಿಸಲಿದ್ದಾರೆ ಎಂದು ರ್ಯಾಲಿಯ ಸಂಚಾಲಕ ವಂ. ಒನಿಲ್ ಡಿಸೋಜ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರ್ಯಾಲಿಯನ್ನು ನಾಲ್ಕು ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ದ್ವಿಚಕ್ರ ಮತ್ತು ಇತರ ನಾಲ್ಕು ಚಕ್ರದ ವಾಹನಗಳು ಭಾಗವಹಿಸಲಿವೆ. ಸುಮಾರಿ 2,000 ಮಂದಿ ಈ ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲ ವಾಹನಗಳಿಗೆ ಮಿಲಾಗ್ರಿಸ್ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಯೇಸು ಸ್ವಾಮಿಯ ಬೋಧನೆ ಆಧಾರಿತ ದೃಶ್ಯರೂಪಕ ಪ್ರದರ್ಶಿಸಲಾಗುವುದು. ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ. ಡಾ. ಅಲೀಶಿಯಸ್ ಪಾವ್ಲ್ ಡಿಸೋಜ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಥೋಲಿಕ್ ಯುವ ಸಂಚಾಲನದ ಸಂಚಾಲಕ ವಂ.ರೊನಾಲ್ಡ್ ಡಿಸೋಜ, ಮಾಧ್ಯಮ ಸಮಿತಿ ಸಂಚಾಲಕ ವಿನ್ಸೆಂಟ್ ಮಸ್ಕರೇನ್ಹಸ್, ರಾಜಕೀಯ ಸಂಚಾಲಕ ಗಾಡ್ವಿನ್ ಪಿಂಟೊ, ಎಂ.ಪಿ. ನೊರೊನ್ಹ ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.





