ಇಂಡಿಯನ್ ಸೋಶಿಯಲ್ ಫಾರಂ ಪ್ರಯತ್ನದಿಂದ ಹೊನ್ನಾವರಕ್ಕೆ ತಲುಪಿದ ಮೊಹಮ್ಮದ್ ರಫೀಕ್ ಮೃತ ದೇಹ.

ಸೌದಿ ಅರೇಬಿಯಾ, ಡಿ.19 : ಸುಮಾರು ಎಂಟು ವರ್ಷಗಳಿಂದ ಸೌದಿ ಅರೇಬಿಯಾದ ಬುರೈದ ನಗರದಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಮೊಹಮ್ಮದ್ ರಫೀಕ್ ರವರು ದಿನಾಂಕ 25-11-2016 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.
ಆಸ್ಪತ್ರೆಯಲ್ಲಿರುವ ಮೃತದೇಹದವನ್ನು ಅಂತ್ಯಕ್ರಿಯೆಗಾಗಿ ಸ್ವಗ್ರಾಮಕ್ಕೆ ಕಳುಹಿಸಿಕೊಡುವ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರಾದ ಅಬ್ದುಲ್ ಅಝೀಝ್ ಹೊನ್ನಾವರ ರವರು ಇಂಡಿಯನ್ ಸೋಶಿಯಲ್ ಫೋರಂನ ಸದಸ್ಯರನ್ನು ನೆರವಿಗಾಗಿ ಸಂಪರ್ಕಿಸಿದ್ದರು.
ಇಂಡಿಯನ್ ಸೋಶಿಯಲ್ ಫೋರಂ ಬುರೈದ ಘಟಕದ ಅಬ್ದುಲ್ ರಹುಫ್ ಕಳಾಯಿ, ಅಯಾಝ್ ಕೃಷ್ಣಾಪುರ, ಇರ್ಫಾನ್ ಅಡ್ಡುರು ಮತ್ತು ಅಬ್ದುಲ್ ಅಝೀಝ್ ಹೊನ್ನಾವರ ರವರ ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಪೋಲಿಸ್ ಠಾಣೆ ಮತ್ತು ಅವರ ಕಫೀಲ್ (ವೀಸಾ ಪ್ರಾಯೋಜಕ) ನ್ನು ನಿರಂತರ ಭೇಟಿ ನೀಡಿ ದಾಖಲೆಗಳನ್ನು ಸರಿಪಡಿಸಲಾಯಿತು.
ಅಂತಿಮವಾಗಿ ಮೃತ ಮೊಹಮ್ಮದ್ ರಫೀಕ್ ರವರ ಸಂಬಂಧಿಯಾದ ಅಬ್ದುಲ್ ಅಝೀಝ್ ಹೊನ್ನಾವರರವರ ಹೆಸರಿನ ಮೇಲೆ ಭಾರತೀಯ ರಾಯಭಾರ ಕಚೇರಿಯ ಮೂಲಕ ಅಧಿಕಾರ ಪತ್ರ ಪಡೆಯಲಾಯಿತು.
ಹೀಗೆ ಇಂಡಿಯನ್ ಸೋಶಿಯಲ್ ಫೋರಂ ಬುರೈದ ಘಟಕದ ಸತತ ಪರಿಶ್ರಮದ ಫಲವಾಗಿ ಮೊಹಮ್ಮದ್ ರಫೀಕ್ ರವರ ಮೃತದೇಹವನ್ನು ಅಂತಿಮವಾಗಿ ದಿನಾಂಕ 13-12-2016 ರಂದು ವಿಮಾನದ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು.
ಮೊಹಮ್ಮದ್ ರಫೀಕ್ ರವರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಬುರೈದ ಘಟಕ ಸಮಿತಿಯು ಸಂತಾಪ ಸೂಚಿಸಿದೆ.
ಇಂಡಿಯನ್ ಸೋಶಿಯಲ್ ಫೋರಂನ ನೆರವಿಗೆ ಮೃತರ ಸಂಬಂಧಿಗಳು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







