Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೆಇಎಫ್ ಇನ್ಫ್ರಾ ಒನ್ ಯಿಂದ ಜಗತ್ತಿನ...

ಕೆಇಎಫ್ ಇನ್ಫ್ರಾ ಒನ್ ಯಿಂದ ಜಗತ್ತಿನ ಪ್ರಥಮ ಆಫ್‌ಸೈಟ್ ನಿರ್ಮಾಣ ಪಾರ್ಕ್ ಕೃಷ್ಣಗಿರಿಯಲ್ಲಿ ಆರಂಭ

10 ಲಕ್ಷ ಚ.ಅಡಿ. ಒಟ್ಟು ವಿಸ್ತಾರದ ಸೌಲಭ್ಯ ಜಗತ್ತಿನಲ್ಲೆ ದೊಡ್ಡದು

ವಾರ್ತಾಭಾರತಿವಾರ್ತಾಭಾರತಿ19 Dec 2016 8:07 PM IST
share
ಕೆಇಎಫ್ ಇನ್ಫ್ರಾ ಒನ್ ಯಿಂದ ಜಗತ್ತಿನ ಪ್ರಥಮ ಆಫ್‌ಸೈಟ್ ನಿರ್ಮಾಣ ಪಾರ್ಕ್ ಕೃಷ್ಣಗಿರಿಯಲ್ಲಿ ಆರಂಭ

ಕೃಷ್ಣಗಿರಿ, ಡಿ. 19:  ಕೆಇಎಫ್ ಇನ್ಫ್ರಾ, ಭಾರತದ ಏಕೈಕ ಮತ್ತು ಸಮಗ್ರವಾದ ಆಫ್‌ಸೈಟ್ ನಿರ್ಮಾಣ ಕಂಪನಿ. ಇದು ಆಸ್ಪತ್ರೆಗಳನ್ನು, ಶಾಲೆಗಳನ್ನು, ಹೋಟೆಲುಗಳನ್ನು ಮತ್ತು ಮನೆಗಳನ್ನು ನಿರ್ಮಿಸುತ್ತದೆ. 

ಈ ಕಂಪನಿಯು ಇಂದು ಕೆಇಎಫ್ ಇನ್ಫ್ರಾ ಒನ್ ಕೈಗಾರಿಕಾ ಪಾರ್ಕನ್ನು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಅಧಿಕೃತವಾಗಿ ಆರಂಭಿಸಿದೆ. ಇನ್ಫೋಸಿಸ್ ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿಯವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು.

10 ಲಕ್ಷ ಚ.ಅಡಿ ಕ್ಷೇತ್ರದಲ್ಲಿ ನಿರ್ಮಿಸಲಾದ ಈ ಪಾರ್ಕನ್ನು 650 ಕೋಟಿ ರೂ. ಹೂಡಿ ಅಭಿವೃದ್ಧಿಪಡಿಸಲಾಗಿದೆ. ಇದು, ಜಗತ್ತಿನಲ್ಲೆ ಅತಿದೊಡ್ಡ ಆಫ್‌ಸೈಟ್ ನಿರ್ಮಾಣ ಪಾರ್ಕ್.

ಕೆಇಎಫ್ ಇನ್ಫ್ರಾ ಒನ್ ವೈವಿಧ್ಯಮಯ ಶ್ರೇಣಿಯ, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಹಾಗಾಗಿ ಕಂಪನಿಯ ಉತ್ಪಾದನ ಪ್ರಕ್ರಿಯೆಗಳು ಶ್ರೇಷ್ಠವಾಗಿವೆ. ಭಾರತದ ಪ್ರಗತಿಗೆ ನೆರವಾಗಬೇಕೆಂಬ ದೂರಗಾಮಿ ಗುರಿಯನ್ನು ಹೊಂದಿರುವ ಈ ಕಂಪನಿ, ತನ್ನ ಸಮಗ್ರವಾದ, ವಿಶ್ವ ದರ್ಜೆಯ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೈಗಾರಿಕಾ ಕ್ರಾಂತಿ 4.0 ರ ಮುಂಚೂಣಿಯಲ್ಲಿದೆ.

ಕಂಪನಿಯು ಸಕಾಲದಲ್ಲಿ ಮತ್ತು ಮಿತ ವ್ಯಯದಲ್ಲಿ ಅತ್ಯುನ್ನತ ಗುಣಮಟ್ಟದ ಇಂಜಿನಿಯರೀಕರಿಸಿದ ಮೂಲಭೂತಸೌಲಭ್ಯ ಪರಿಹಾರಗಳನ್ನು ಒದಗಿಸುತ್ತದೆ. ಕೆಇಎಫ್ ಇನ್ಫ್ರಾ ಒನ್‌ನಲ್ಲಿ ಆಟೋಮೇಷನ್ ಮತ್ತು ಡೇಟ ವಿನಿಮಯವನ್ನು ಉತ್ಪಾದನಾ ತಂತ್ರಜ್ಞಾನಗಳೊಂದಿಗೆ ಏಕೀಕರಿಸಲಾಗಿದೆ. ಇಲ್ಲಿ ಸ್ಮಾರ್ಟ್ ಕಾರ್ಖಾನೆಗಳ ನೆಟ್‌ವರ್ಕ್‌ಗೆ ಮಾನವ ಪ್ರಯತ್ನಗಳು ಮತ್ತು ಸೈಬರ್ ಭೌತಿಕ ಸಿಸ್ಟಂಗಳು ಚಾಲಕ ಶಕ್ತಿಯಾಗಿವೆ. ತಂತ್ರಜ್ಞಾನದ ನೆರವಿನಿಂದ ಬಾಳಿಕೆ ಬರುವ, ಶಾಶ್ವತವಾದ ಮತ್ತು ವೇಗ ದಕ್ಷತೆ ಮತ್ತು ನಿಖರತೆಯಲ್ಲಿ ಅತ್ಯಂತ ವಿನೂತನ ಉತ್ಪನ್ನಗಳನ್ನು ಸೃಷ್ಟಿಸುತ್ತದೆ.

ಕೆಇಎಫ್ ಇನ್ಫ್ರಾ ಒನ್ ಅರಂಭದ ಬಗ್ಗೆ ಮಾತನಾಡಿದ ಕೆಇಎಫ್ ಹೋಲ್ಡಿಂಗ್ಸ್ ಚೇರ್ಮನ್ ಶ್ರೀ ಫೈಜಲ್ ಇ ಕೊಟ್ಟೊಕೊಳ್ಳನ್,  ಇಂದು ಭಾರತ ನಾವೀನ್ಯಗಳ ಬೆನ್ನೇರಿ ಪ್ರಗತಿ ಸಾಧಿಸುತ್ತಿದೆ. ತಂತ್ರಜ್ಞಾನ ಮತ್ತು ಮೂಲಭೂತ ಸೌಲಭ್ಯ ಪರಿಣಾಮಕಾರಿಯಾಗಿ ಏಕೀಭವಿಸುವಂತಹ ಹೊಸ ಪೀಳಿಗೆ ತಂತ್ರಜ್ಞಾನವನ್ನು ನಾವು ನಿರ್ಮಿಸುತ್ತಿದ್ದೇವೆ. ಈ ಮೂಲಕ ಕೈಗಾರಿಕಾ ಕ್ರಾಂತಿ 4.0 ಕ್ಕೆ ನಾವು ಕಾರಣರಾಗುತ್ತಿದ್ದೇವೆ ಎಂದರು.

 ಗುರಿ:

ಭಾರತದಲ್ಲಿನ ಮೂಲಭೂತ ಸೌಲಭ್ಯದ ಸನ್ನಿವೇಶವನ್ನು ಪೂರ್ಣವಾಗಿ ಬದಲಾಯಿಸುವ ಮೂಲಕ ಪ್ರಗತಿಗೆ ವೇಗ ನೀಡುವುದು. ಮೂಲಭೂತ ಸೌಲಭ್ಯದ ಆಫ್‌ಸೈಟ್ ತಯಾರಿಕೆಯಿಂದ ಪೂರ್ಣಗೊಳ್ಳುವ ಸಮಯ 2/3 ರಷ್ಟು ಕಡಿಮೆಯಾಗುತ್ತದೆ. ಆ ಮೂಲಕ ನಿರ್ಮಾಣ ಪ್ರಕ್ರಿಯೆ ವೇಗಗೊಳ್ಳುತ್ತದೆ. ಕೆಇಎಫ್ ಇನ್ಫ್ರಾ ದಲ್ಲಿ ನಾವು ಸಾಂಪ್ರದಾಯಿಕ ನಿರ್ಮಾಣ ವಿಧಾನಗಳಿಗೆ ಸವಾಲೊಡ್ಡಿ ಒಂದು ದಕ್ಷ, ಮತ್ತು ಸ್ವಯಂಚಾಲಿತ ವೇದಿಕೆಯತ್ತ ಮುನ್ನಡೆಯುತ್ತಿದ್ದೇವೆ. ಕೆಇಎಫ್ ಇನ್ಫ್ರಾ ಒನ್ ಭಾರತದ ಅಭಿವೃದ್ಧಿಯ ಮುಂದಿನ ಹಂತಕ್ಕೆ ವಿಶ್ವ ದರ್ಜೆಯ ಮೂಲಭೂತ ಸೌಲಭ್ಯದ ಮೂಲಕ ವೇಗ ಕೊಡಬೇಕೆಂಬ ನಮ್ಮ ಕಲ್ಪನೆಯ ಮೊದಲ ಹೆಜ್ಜೆ. ಇದನ್ನು ವಿಶ್ವಕ್ಕೆ ಪ್ರಸ್ತುತ ಪಡಿಸಲು ನಮಗೆ ಹೆಮ್ಮೆಯೆನಿಸುತ್ತದೆ.

ಇನ್ಫೋಸಿಸ್ ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿಯವರು ಮಾತನಾಡುತ್ತಾ , ಭಾರತ ನಿರಂತರವಾಗಿ ಅಭಿವೃದ್ಧಿ ಪಥದಲ್ಲಿದೆ. ತಂತ್ರಜ್ಞಾನದ ಪರಿಚಯದೊಂದಿಗೆ ಅಭಿವೃದ್ಧಿ ವೇಗ ವಿಪರೀತವಾಗಿದೆ. ಆದರೆ ಭಾರತದ ಪ್ರಗತಿಗೆ ಕೊಡುಗೆ ನೀಡುವ ಪ್ರತಿಯೊಂದು ರಂಗಕ್ಕೂ ಭವಿಷ್ಯಕ್ಕೆ ಸಜ್ಜಾಗಿರುವ ಮೂಲಭೂತ ಸೌಲಭ್ಯದ ಅಗತ್ಯವಿದೆ. ಇಲ್ಲಿಯೇ ಕೆಇಎಫ್ ಇನ್ಫ್ರಾ ಒನ್ ನಿಜವಾದ ಕೆಲಸವಿರುವುದು. ಭವಿಷ್ಯದ ಮೂಲಭೂತ ಸೌಲಭ್ಯಗಳ ನಿರ್ಮಾಣವೆಂದರೆ ಭವಿಷ್ಯದ ಭಾರತದ ನಿರ್ಮಾಣ  ಎಂದರು.

ಕೆಇಎಫ್ ಇನ್ಫ್ರಾ ಸಿಇಒ ಶ್ರೀ ಸುಮೇಶ್ ಸಾಚಾರ್ಕೆ ಮಾತನಾಡಿ, ಇಎಫ್ ಇನ್ಫ್ರಾ ಒನ್ ಆಸ್ಪತ್ರೆಗಳು, ಶಾಲೆಗಳು, ಹೋಟೆಲುಗಳು ಮತ್ತು ಮನೆಗಳ ನಿರ್ಮಾಣಕ್ಕಾಗಿ ಉನ್ನತ ಗುಣಮಟ್ಟದ ಆಫ್‌ಸೈಟ್ ತಯಾರಿಕಾ ಪರಿಹಾರಗಳನ್ನು ಸರಬರಾಜುಮಾಡುತ್ತದೆ. ನಿರ್ಮಾಣಕ್ಕೆ ಬೇಕಾದ ಎಲ್ಲವೂ ಇಲ್ಲಿ ಲಭ್ಯ ವಿನ್ಯಾಸದಿಂದ ಹಿಡಿದು ನಿರ್ಮಾಣದವರೆಗೆ ಎಲ್ಲವೂ ಪೂರ್ವ ಸಿದ್ಧ. ಈ ಸಮಗ್ರವಾದ ಮತ್ತು ತಾಂತ್ರಿಕವಾಗಿ ಉನ್ನತವಾದ ಕೈಗಾರಿಕಾ ಪಾರ್ಕ್ ಮೂಲಕ ನಾವು ಕಾರ್ಮಿಕರ ಕೌಶಲವನ್ನು ಉನ್ನತೀಕರಿಸಲು ಉದ್ದೇಶಿಸಿದ್ದೇವೆ; ಮಾನವ-ಯಂತ್ರಗಳ ಸಹ-ಅವಲಂಬನೆ ಲಾಭದಾಯಕವಾಗುವಂತೆ ಮಾಡಿದ್ದೇವೆ. ಇದರಿಂದ ವೆಚ್ಚ, ಸಮಯ, ಸಂಪನ್ಮೂಲಗಳು ಮತ್ತು, ಗುಣಮಟ್ಟಗಳ ನಡುವೆ ರಾಜಿಯಾಗುವ ಸಂಭವವೇ ಇಲ್ಲ. ಸದ್ಯ ಭಾರತೀಯ ಮೂಲಭೂತ ಸೌಲಭ್ಯಗಳ ಕ್ಷೇತ್ರದಲ್ಲಿನ ದೊಡ್ಡ ಅಡ್ಡಿಯೇ ಇದಾಗಿದೆ  ಎಂದರು. 

ಭವಿಷ್ಯದಲ್ಲಿ ಕೆಇಎಫ್ ಇನ್ಫ್ರಾ ಭಾರತದಲ್ಲಿನ ತನ್ನ ಯಶೋಗಾಥೆಯನ್ನು ಯುಎಇ ಮಾರುಕಟ್ಟೆಗೂ ವಿಸ್ತರಿಸಲಿದೆ. ಭಾರತದ ಆವಿಷ್ಕಾರ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯ ಜಾಗತಿಕ ಕಲ್ಪನೆಯನ್ನು ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾಗಳಿಗೂ ಅಲ್ಲಿನ ಪ್ರಾದೇಶಿಕ ವಿಶಿಷ್ಟ ನಿರ್ಮಾಣ ಬೇಡಿಕೆಗಳನ್ನು ಶಾಶ್ವತವಾಗಿ ಪೂರೈಸಲು ರಫ್ತು ಮಾಡಲಿದೆ . 

ಕೆಇಎಫ್ ಇನ್ಫ್ರಾ ಬಗ್ಗೆ

ಕೆಇಎಫ್ ಇನ್ಫ್ರಾ ಕೆಇಎಫ್ ಹೋಲ್ಡಿಂಗ್ಸ್‌ನ ಅಧೀನ ಸಂಸ್ಥೆ. ಕೆಇಎಫ್ ಹೋಲ್ಡಿಂಗ್ಸ್ ಆಸ್ಪತ್ರೆಗಳನ್ನು, ಶಾಲೆಗಳನ್ನು, ಹೋಟೆಲುಗಳನ್ನು ಮತ್ತು ಮನೆಗಳನ್ನು ನಿರ್ಮಿಸುತ್ತದೆ. 2012ರಲ್ಲಿ ಸ್ಥಾಪಿತವಾದ ಕೆಇಎಫ್ ಇನ್ಫ್ರಾ, ಹೊಸ-ಪೀಳಿಗೆಯ ಉತ್ಪಾದನೆ ಮತ್ತು ಇಂಜಿನಿಯರಿಂಗ್ ಕಂಪನಿ. ಇದರ ಕೇಂದ್ರ ಕಛೇರಿ ಬೆಂಗಳೂರಿನಲ್ಲಿದೆ.

ರೋಬಾಟಿಕ್ಸ್ ಮತ್ತು ಆಟೊಮೇಷನ್‌ಗಳ ಉತ್ತಮ ಅಭ್ಯಾಸಗಳೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲಿನ ಮೂಲಭೂತ ಸೌಲಭ್ಯಗಳ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಲು ಬದ್ಧವಾಗಿದೆ. ಫೈಜಲ್ ಇ ಕೊಟ್ಟಿಕೊಳ್ಳನ್ ನಿಂದ ಸ್ಥಾಪಿತವಾದ ಕೆಇಎಫ್ ಇನ್ಫ್ರಾ, ಕೈಗಾರಿಕಾ ಕ್ರಾಂತಿ 4.0 ನ ಮುಂಚೂಣಿಯಲ್ಲಿದೆ. ಭಾರತದ ಮೂಲಭೂತ ಸೌಲಭ್ಯದ ಅಭಿವೃದ್ಧಿ ವೇಗವಾಗಿ ಸಾಗಬೇಕೆಂದು ಯತ್ನಿಸುತ್ತಿದೆ.

ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ, ಅತ್ಯುನ್ನತ ಗುಣಮಟ್ಟ ಮತ್ತು ಸಕಾಲಿಕತೆ ಇವುಗಳನ್ನೆಲ್ಲ ಏಕೀಭವಿಸಿ ಅತ್ಯಂತ ನಿಖರವಾದ ಇಂಜಿನಿಯರ್ಡ್ ಉತ್ಪನ್ನಗಳನ್ನು ನೀಡುತ್ತ ಮೂಲಭೂತ ಸೌಲಭ್ಯದ ರಂಗವನ್ನು ಬದಲಿಸುತ್ತಿದೆ. ಉನ್ನತ ಗುಣಮಟ್ಟದ ಮೂಲಭೂತ ಸೌಲಭ್ಯ, ಸರಬರಾಜಿನ ವೇಗ ಮತ್ತು ನಿರ್ಮಾಣ ವೆಚ್ಚ ಇವುಗಳ ನಡುವಣ ಅಂತರವನ್ನು ಕಡಿಮೆ ಮಾಡಲು ಕೆಇಎಫ್ ಇನ್ಫ್ರಾ ರಾಷ್ಟದ ಸಾಮಾಜಿಕ ಮೂಲಭೂತ ಸೌಲಭ್ಯದ ಮೇಲೆ ಇತ್ಯಾತ್ಮಕ ಪ್ರಭಾವವನ್ನು ಬೀರುವ ಉದ್ದೇಶವನ್ನು ಹೊಂದಿದೆ.

ಮುಖ್ಯವಾಗಿ ಭಾರತದ ಶಿಕ್ಷಣ, ಆರೋಗ್ಯ ಆರೈಕೆ, ವಾಣಿಜ್ಯಿಕ ಮತ್ತು ನಿವಾಸಗಳ ಕ್ಷೇತ್ರಗಳ ಬಗ್ಗೆ ವಿಶೇಷವಾಗಿ ಗಮನ ಹರಿಯಿಸುತ್ತಿದೆ. ಇಲ್ಲಿ ವಿನ್ಯಾಸ, ಇಂಜಿನಿಯರಿಂಗ್, ತಯಾರಿಕೆ, ಅಸೆಂಬ್ಲಿ ಮತ್ತು ಪ್ರಾಜೆಕ್ಟ್ ನಿರ್ವಹಣೆಯ ಪರಿಹಾರಗಳೆಲ್ಲ ಒಂದೇ ಸೂರಿನಡಿಯಲ್ಲಿ ಲಭ್ಯ. ಆಫ್‌ಸೈಟ್ ತಯಾರಿಕೆಗಾಗಿ 42 ಎಕರೆ ಕೈಗಾರಿಕಾ ಪಾರ್ಕನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಕೆಇಎಫ್ ಇನ್ಫ್ರಾ ಒನ್ ಜಗತ್ತಿನ ಅತಿದೊಡ್ಡ ಸಮಗ್ರವಾದ ಆಫ್‌ಸೈಟ್ ತಯಾರಿಕಾ ಸೌಲಭ್ಯ.

ಜಗತ್ತಿನಲ್ಲಿ ಇಂತಹ ಸೌಲಭ್ಯ ಇದೊಂದೇ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X