ಸೈಬೀರಿಯದಲ್ಲಿ ಬಲವಂತದ ಭೂಸ್ಪರ್ಶ ಮಾಡಿದ ರಶ್ಯ ವಿಮಾನ ;38 ಮಂದಿಗೆ ಗಂಭೀರ ಗಾಯ

ಮಾಸ್ಕೊ, ಡಿ. 19: ರಶ್ಯದ ರಕ್ಷಣಾ ಸಚಿವಾಲಯಕ್ಕೆ ಸೇರಿದ ಐಎಲ್-18 ವಿಮಾನವೊಂದು ಸೈಬೀರಿಯದಲ್ಲಿ ಬಲವಂತದ ಭೂಸ್ಪರ್ಶ ಮಾಡಿದ್ದು, 38 ಮಂದಿ ಗಾಯಗೊಂಡಿದ್ದಾರೆ.
ಸೈಬೀರಿಯದಲಿ ಹವಾಮಾನ ಪರಿಸ್ಥಿತಿ ಹದಗೆಟ್ಟಿದೆ ಹಾಗೂ ವಿಮಾನ ಪ್ರಬಲ ಗಾಳಿಯ ಸುಳಿಗೆ ಸಿಕ್ಕಿರಬಹುದು ಎಂದು ವರದಿಗಳು ತಿಳಿಸಿವೆ.
ವಿಮಾನವು ಕ್ರಾಸ್‌ನೊಯರ್ಸ್‌ಕ್ ಕ್ರಾಯ್ ವಲಯದಿಂದ 39 ಮಂದಿಯನ್ನು ಹೊತ್ತು ಸಖ ವಲಯದ ಟಿಕ್ಸಿ ಎಂಬಲ್ಲಿಗೆ ತೆರಳುತ್ತಿತ್ತು.
ಅಪಘಾತದಲ್ಲಿ ಹೆಚ್ಚಿನವರು ಮೃತಪಟ್ಟಿದ್ದಾರೆ ಎಂಬುದಾಗಿ ಆರಂಭಿಕ ವರದಿಗಳು ಹೇಳಿದ್ದವು. ಆದರೆ, ರಕ್ಷಣಾ ಸಚಿವಾಲಯವು ಬಳಿಕ ಪರಿಷ್ಕೃತ ಹೇಳಿಕೆಯೊಂದನ್ನು ನೀಡಿ, ವಿಮಾನದಲ್ಲಿದ್ದ ಎಲ್ಲರು ಜೀವಂತವಾಗಿದ್ದಾರೆ ಎಂದು ಹೇಳಿದೆ.
38 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಾಲ್ವರು ತೀರಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದವರ ಪರಿಸ್ಥಿತಿಯೂ ಗಂಭೀರವಾಗಿಯೇ ಇದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story







