ದಾವಣಗೆರೆ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕರಿಬಸಪ್ಪನಿಗೆ ಸಹಾಯಕ್ಕಾಗಿ ಮನವಿ
ದಾವಣಗೆರೆ, ಡಿ.19: ಕಳೆದ ಒಂದೂವರೆ ವರ್ಷದಿಂದ ತೋಳಹುಣಸೆ ಗ್ರಾಮದ ನಿವಾಸಿ ಕರಿಬಸಪ್ಪಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹೆಚ್ಚಿನ ನೆರವಿನ ಅಗತ್ಯವಿದೆ.
ಸಾರ್ವಜನಿಕರು ಸಹಾಯ ಮಾಡಬೇಕೆಂದು ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ಲೋಕೇಶ್ ಮನವಿ ಮಾಡಿದ್ದಾರೆ.
ಸೋಮವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಡ್ನಿ ವೈಫಲ್ಯದಿಂದ ಪ್ರತಿ ವಾರಕ್ಕೆ 2 ಬಾರಿಯಂತೆ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಬೇಕಾಗಿದೆ. ಕರಿಬಸಪ್ಪನ ಪತ್ನಿ ಕವಿತಮ್ಮ ಕಿಡ್ನಿ ನೀಡಲು ಸಿದ್ಧಳಿದ್ದಾಳೆ.
ಆದರೆ ಜೋಡಣೆಗೆ ಲಕ್ಷಾಂತರ ರೂ. ವೆಚ್ಚವಾಗುತ್ತಿದೆ.ಆದ್ದರಿಂದ ಸಾರ್ವಜನಿಕರ, ದಾನಿಗಳ ಸಹಾಯ ಅಗತ್ಯವಾಗಿದೆ ಎಂದರು. ನಮಗೆ ಈ ವೆಚ್ಚ ನಿಭಾಯಿಸಲು ಆಗುತ್ತಿಲ್ಲ. ಒಂದು ಬಾರಿ ಡಯಾಲಿಸಿಸ್ ಗೆ 350 ರೂ. ವೆಚ್ಚವಲ್ಲದೆ ಪ್ರಯಾಣ ಸೇರಿ ತಿಂಗಳಿಗೆ ಸಾವಿರಾರು ವೆಚ್ಚ ತಗುಲುತ್ತಿದೆ.ತೋಳಹುಣಸೆ ಗ್ರಾಮದ ಸರಕಾರಿ ಶಾಲೆಯಲ್ಲಿ ಬಿಸಿಯೂಟ ಅಡುಗೆ ಸಹಾಯಕಿಯಾಗಿ ಕವಿತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಚಿಕಿತ್ಸೆಗೆ ನೆರವು ನೀಬೇಕು ಎಂದು ಮನವಿ ಮಾಡಿದರು. ಸಹಾಯ ಮಾಡಲು ಇಚ್ಛಿಸುವವರು ಸಿಂಡಿಕೇಟ್ ಬ್ಯಾಂಕ್ ಖಾತೆ ನಂಬರ್ 06302250029402,ಐಎಫ್‌ಸಿಎಸ್ ಕೋಡ್ ನಂಬರ್ ಎಸ್‌ವೈಎನ್‌ಬಿ:0000630 ಇಲ್ಲಿಗೆ ಜಮಾ ಮಾಡಬಹುದು. ಸಹಾಯಕ್ಕಾಗಿ ಮೊ:9008596883ಗೆ ಸಂಪರ್ಕಿಸಬಹುದು.
ಗೋಷ್ಠಿಯಲ್ಲಿ ಕರಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.





