Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಕರುಣ್ ನಾಯರ್ ಅಜೇಯ 303

ಕರುಣ್ ನಾಯರ್ ಅಜೇಯ 303

ಆಂಗ್ಲರ ಮೇಲೆ ಮೇಲುಗೈ ಸಾಧಿಸಿದ ಭಾರತ ಟೆಸ್ಟ್‌ನಲ್ಲಿ ಭಾರತದ ಗರಿಷ್ಠ ಸ್ಕೋರ್ ಮೊದಲ ಇನಿಂಗ್ಸ್‌ನಲ್ಲಿ

ವಾರ್ತಾಭಾರತಿವಾರ್ತಾಭಾರತಿ19 Dec 2016 11:59 PM IST
share
ಕರುಣ್ ನಾಯರ್ ಅಜೇಯ 303

ಚೆನ್ನೈ, ಡಿ.19: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಕರ್ನಾಟಕದ ಕರುಣ್ ನಾಯರ್ ಔಟಾಗದೆ (303 ರನ್, 381ಎ, 32ಬೌ,4ಸಿ) ತ್ರಿಶತಕದ ದಾಖಲೆ ಬರೆಯವುದರೊಂದಿಗೆ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿದೆ.

ಚಿಪಾಕ್‌ನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯತ್ತಿರುವ ಟೆಸ್ಟ್‌ನಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ 190.4 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 759 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದು, ಇಂಗ್ಲೆಂಡ್ ವಿರುದ್ಧ 282 ರನ್‌ಗಳ ಮೇಲುಗೈ ಸಾಧಿಸಿದೆ.
 ನಾಲ್ಕನೆ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಎರಡನೆ ಇನಿಂಗ್ಸ್‌ನಲ್ಲಿ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ. ಆರಂಭಿಕ ದಾಂಡಿಗರಾದ ಅಲಿಸ್ಟೆರ್ ಕುಕ್ ಔಟಾಗದೆ 3 ರನ್ ಮತ್ತು ಕೀಟನ್ ಜೆನ್ನಿಂಗ್ಸ್ ಔಟಾಗದೆ 9 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ಎಂಟು ವರ್ಷಗಳ ಬಳಿಕ ಚಿಪಾಕ್‌ನಲ್ಲಿ ತ್ರಿಶತಕದ ಸಾಧನೆ: 2008ರಲ್ಲಿ ಭಾರತದ ಸ್ಫೋಟಕ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಚಿಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತ್ರಿಶತಕದ ಸಾಧನೆ ಮಾಡಿದ್ದರು. ಇದು ಭಾರತದ ನೆಲದಲ್ಲಿ ಭಾರತದ ಆಟಗಾರನಿಂದ ಟೆಸ್ಟ್‌ನಲ್ಲಿ ದಾಖಲಾದ ಮೊದಲ ದ್ವಿಶತಕ ಆಗಿತ್ತು.
ವೀರೇಂದ್ರ ಸೆಹ್ವಾಗ್ ಅವರು ದಕ್ಷಿಣ ಆಫ್ರಿಕ ವಿರುದ್ಧ 319 ರನ್ ಗಳಿಸಿದ್ದರು.
ಎಂಟೂವರೆ ವರ್ಷಗಳ ಬಳಿಕ ಅಂತಹದ್ದೇ ಸಾಧನೆ ಭಾರತದ ಆಟಗಾರನಿಂದ ದಾಖಲಾಗಿದೆ. ಸೆಹ್ವಾಗ್ ಬಳಿಕ ಇದೀಗ ಭಾರತದ ಇನ್ನೊಬ್ಬ ಆಟಗಾರನಿಂದ ತ್ರಿಶತಕ ದಾಖಲಾಗಿದೆ.
ಕನ್ನಡಿಗ ಕರುಣ್ ನಾಯರ್ ಅವರು 190.4ನೆ ಓವರ್‌ನಲ್ಲಿ ಆದಿಲ್ ರಶೀದ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ತ್ರಿಶತಕದ ಸಾಧನೆ ಮಾಡಿದರು. ಮೂರನೆ ಟೆಸ್ಟ್‌ನಲ್ಲಿ ನಾಯರ್ ಅವರಿಂದ ತ್ರಿಶತಕ ದಾಖಲಾಗಿದೆ.
ಕಳೆದ ಎರಡು ಟೆಸ್ಟ್‌ಗಳಲ್ಲಿ ಅಷ್ಟೇನೂ ದೊಡ್ಡ ಸಾಧನೆ ಅವರು ಮಾಡಿರಲಿಲ್ಲ. ಒಟ್ಟು 17 ರನ್ ಗಳಿಸಿದ್ದರು. 13 ರನ್ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. ಆದರೆ ಇಂದು ಅವರು ಶತಕ, ದ್ವಿಶತಕ ಮತ್ತು ತ್ರಿಶತಕ ಮಾಡಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟರು.
 ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಅವರು ಗಾಯಾಳುವಾಗಿ ತಂಡದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಕರುಣ್ ನಾಯರ್ ಭಾರತ ಕ್ರಿಕೆಟ್ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ನಾಯರ್ ಅವರು ಈ ಟೆಸ್ಟ್‌ನಲ್ಲಿ ಮಾಡಿದ ಅಪೂರ್ವ ಸಾಧನೆಯು ಟೆಸ್ಟ್‌ನಲ್ಲಿ ಅವಕಾಶವನ್ನು ಭದ್ರ ಪಡಿಸಲು ಹಾದಿ ಮಾಡಿಕೊಟ್ಟಂತಾಗಿದೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕರ್ನಾಟಕ ಆಟಗಾರರ ಗತವೈಭವವನ್ನು ನೆನಪಿಸುವಂತಾಗಿದೆ.

ನಾಯರ್ ಅವರ ರಣಜಿ ತಂಡದ ಲೋಕೇಶ್ ರಾಹುಲ್ ಅವರು ರವಿವಾರ ಒಂದು ರನ್‌ನಿಂದ ದ್ವಿಶತಕ ವಂಚಿತಗೊಂಡಿದ್ದರು. ಆದರೆ ನಾಯರ್ ಅವರಿಗೆ ಸಾಧ್ಯವಾಗದ ದ್ವಿಶತಕದ ಸಾಧನೆಯನ್ನು ದಾಟಿ ತ್ರಿಶತಕದ ಸರದಾರ ಎನಿಸಿಕೊಂಡಿದ್ದಾರೆ.

 ನಾಯರ್ 303 ರನ್ ಗಳಿಸಿದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡಿದ್ದರು. ಒಂದು ವೇಳೆ ಭಾರತದ ಬ್ಯಾಟಿಂಗ್ ಮುಂದುವರಿದಿದ್ದರೆ ಸೆಹ್ವಾಗ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆ ಮುರಿಯುವ ಸಾಧ್ಯತೆಯೂ ಇತ್ತು. ಆದರೆ ಕೊಹ್ಲಿ ಭಾರತ ಸ್ಕೋರ್ ಎತ್ತರಕ್ಕೆ ಏರುತ್ತಿದ್ದಂತೆ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡಿದ್ಧಾರೆ. ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದ್ದರೂ ಅದು ಇನಿಂಗ್ಸ್ ಸೋಲನ್ನು ತಪ್ಪಿಸಲು ಹೋರಾಟ ನಡೆಸಬೇಕಾದ ಅಗತ್ಯತೆ ಇದೆ.
ಮೊದಲ ಶತಕ: ಮೂರನೆ ದಿನದಾಟದಂತ್ಯಕ್ಕೆ ಭಾರತ 108 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 391 ರನ್ ಗಳಿಸಿತ್ತು. ಕರುಣ್ ನಾಯರ್ 71 ರನ್ ಮತ್ತು ಮುರಳಿ ವಿಜಯ್ 17 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಇಂದು ಬ್ಯಾಟಿಂಗ್ ಮುಂದುವರಿಸಿದ ಕರುಣ್ ನಾಯರ್ ಮತ್ತು ಮುರಳಿ ವಿಜಯ್ ತಂಡದ ಸ್ಕೋರ್‌ನ್ನು ಐದನೆ ವಿಕೆಟ್ ಜೊತೆಯಾಟದಲ್ಲಿ 63 ರನ್ ಗಳಿಸಿದರು. ಮುರಳಿ ವಿಜಯ್ 29 ರನ್ ಗಳಿಸಿದ್ದಾಗ ಅವರನ್ನು ಡಾಸನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

ನಾಯರ್ ಅವರು 122.6ನೆ ಓವರ್‌ನಲ್ಲಿ ಸ್ಟೋಕ್ಸ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಕರುಣ್ ನಾಯರ್ ಚೊಚ್ಚಲ ಶತಕ ಪೂರ್ಣಗೊಳಿಸಿದರು.185 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ನಾಯರ್ ಶತಕ ಪೂರೈಸಿದರು.
ನಾಯರ್ ಶತಕ ಪೂರ್ಣಗೊಳಿಸಿದ ಬೆನ್ನಲ್ಲೆ ಮುರಳಿ ವಿಜಯ್ ಪೆವಿಲಿಯನ್ ಸೇರಿದರು.
 
ನಾಯರ್ ದ್ವಿಶತಕ: ವಿಜಯ್ ನಿರ್ಗಮನದ ಬಳಿಕ ರವಿಚಂದ್ರನ್ ಅಶ್ವಿನ್ ಅವರು ನಾಯರ್‌ಗೆ ಜೊತೆಯಾದರು. ಇವರು ಮತ್ತೆ ಸೊಗಸಾದ ಇನಿಂಗ್ಸ್ ಕಟ್ಟಿದರು. ನಾಯರ್ ಮತ್ತು ಅಶ್ವಿನ್ ಆರನೆ ವಿಕೆಟ್‌ಗೆ 163 ರನ್‌ಗಳ ಜೊತೆಯಾಟ ನೀಡಿದರು. ನಾಯರ್ ಚಹಾ ವಿರಾಮದ ವೇಳೆಗೆ 195 ರನ್ ಗಳಿಸಿದ್ದರು. ಬಳಿಕ ಅವರು 78 ಎಸೆತಗಳಲ್ಲಿ 108 ರನ್ ಗಳಿಸಿ ತ್ರಿಶತಕದ ಸಾಧನೆ ಮಾಡಿದ್ದರು.

166.1ನೆ ಓವರ್‌ನಲ್ಲಿ ನಾಯರ್ ಅವರು ಜೆನ್ನಿಂಗ್ಸ್ ಎಸೆತವನ್ನು ಬೌಂಡರಿಗಟ್ಟಿ ದ್ವಿಶತಕ ಪೂರೈಸಿದರು. 306 ಎಸೆತಗಳನ್ನು ಎದುರಿಸಿ 23 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ದ್ವಿಶತಕ ಪೂರೈಸಿದರು.

  ಅಶ್ವಿನ್ ಶತಕ ಪೂರೈಸುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅವರು 67 ರನ್ ಗಳಿಸಿ ಔಟಾದರು. ನಾಯರ್ ತ್ರಿಶತಕ: ದ್ವಿಶತಕ ದಾಖಲಿಸುವ ಮುಂದುವರಿದ ನಾಯರ್ ತ್ರಿಶತಕ ಮುಟ್ಟುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಅವರು ಆ ಸಾಧನೆ ಮಾಡಿದರು. ಅಶ್ವಿನ್ ನಿರ್ಗಮನದ ಬಳಿಕ ರವೀಂದ್ರ ಜಡೇಜ ಅವರು ಕರುಣ್ ನಾಯರ್‌ಗೆ ಜೊತೆಯಾದರು. ಇವರ ಜೊತೆಯಾಟದಲ್ಲಿ 7 ವಿಕೆಟ್‌ಗೆ 138 ರನ್ ಸೇರ್ಪಡೆಗೊಂಡಿತು. ಜಡೇಜ ಅವರು ನಾಯರ್‌ಗೆ ಉತ್ತಮ ಬೆಂಬಲ ನೀಡಿದರು. ಜಡೇಜ ಅರ್ಧ ಶತಕ ಗಳಿಸಿದರು. 189.5ನೆ ಓವರ್‌ನಲ್ಲಿ ಜಡೇಜ ಅವರು ಡಾಸನ್ ಎಸೆತದಲ್ಲಿ ಬಾಲ್‌ಗೆ ಕ್ಯಾಚ್ ನೀಡಿದರು. ಔಟಾಗುವ ಮುನ್ನ ಜಡೇಜ 51 ರನ್ ಗಳಿಸಿದರು.ಆಗ ತಂಡದ ಸ್ಕೋರ್ 7 ವಿಕೆಟ್ ನಷ್ಟದಲ್ಲಿ 754 ಆಗಿತ್ತು.
ಕರುಣ್ ನಾಯರ್ 190.4ನೆ ಎಸೆತವನ್ನು ಬೌಂಡರಿಗಟ್ಟುವ ಮೂಲಕ ತ್ರಿಶತಕದ ಸಾಧನೆ ಮಾಡಿದರು.

381 ಎಸೆತಗಳಲ್ಲಿ 32 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ ನಾಯರ್ ತ್ರಿಶತಕ ಗಳಿಸಿ ಔಟಾಗದೆ ಉಳಿದರು. ಇಂಗ್ಲೆಂಡ್‌ನ ಬ್ರಾಡ್ ಮತ್ತು ಡಾಸನ್ ತಲಾ ಎರಡು ವಿಕೆಟ್, ಎಂಎಂ ಅಲಿ, ಸ್ಟೋಕ್ಸ್ ಮತ್ತು ಆದಿಲ್ ರಶೀದ್ ತಲಾ 1 ವಿಕೆಟ್ ಪಡೆದರು.

.........................
ಕರುಣ್ ನಾಯರ್ ತ್ರಿಶತಕ ದಾಖಲಿಸಿದ ಭಾರತ ಎರಡನೆ ಬ್ಯಾಟ್ಸ್‌ಮನ್
 ಚೆನ್ನೈ, ಡಿ.19: ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಸೋಮವಾರ ತ್ರಿಶತಕ ದಾಖಲಿಸುವುದರೊಂದಿಗೆ 300ರ ಕ್ಲಬ್ ಸೇರ್ಪಡೆಗೊಂಡರು.
ಭಾರತದ ಪರ ತ್ರಿಶತಕ ದಾಖಲಿಸಿದ ಎರಡನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಮೂರನೆ ಟೆಸ್ಟ್ ಆಡುತ್ತಿರುವ ನಾಯರ್, ತ್ರಿಶತಕದ ಸಾಧನೆಯೊಂದಿಗೆ ವೀರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೆ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ನಾಯರ್ ತ್ರಿಶತಕ ದಾಖಲಿಸಿದ ಬಳಿಕ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತ ಮೊದಲ ಇನಿಂಗ್ಸ್ ನಲ್ಲಿ 190.4 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 759 ರನ್ ಗಳಿಸುವ ಮೂಲಕ ಟೆಸ್ಟ್‌ನಲ್ಲಿ ಗರಿಷ್ಠ ರನ್‌ಗಳ ದಾಖಲೆ ಬರೆದಿದೆ.
 ನಾಯರ್ ಅವರು ತ್ರಿಶತಕ ದಾಖಲಿಸಿದ ಯುವ ಆಟಗಾರ. ಅವರ ವಯಸ್ಸು 25 ವರ್ಷ ಮತ್ತು 13 ದಿನಗಳು. ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ದಾಖಲಿಸಿದ ಎರಡನೆ ಭಾರತದ ದಾಂಡಿಗ ನಾಯರ್. ಸೆಹ್ವಾಗ್ ಅವರು 2004ರಲ್ಲಿ ಪಾಕಿಸ್ತಾನದ ಮುಲ್ತಾನ್‌ನಲ್ಲಿ 309 ರನ್ ದಾಖಲಿಸಿದ್ದರು. ಆಗ ಅವರ ವಯಸ್ಸು 25 ವರ್ಷ ಮತ್ತು 160 ದಿನಗಳು.

 ನಾಯರ್ ತ್ರಿಶತಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೀರೇಂದ್ರ ಸೆಹ್ವಾಗ್ ಅವರು '' 300ನೆ ಕ್ಲಬ್‌ಗೆ ನಾಯರ್‌ಗೆ ಸ್ವಾಗತ. ಕಳೆದ 12 ವರ್ಷ ಮತ್ತು 8 ತಿಂಗಳಿನಿಂದ ನಾನು ಈ ಕ್ಲಬ್‌ನಲ್ಲಿ ಏಕಾಂಗಿಯಾಗಿದ್ದೆ. ಕರುಣ್ ನಾಯರ್‌ಗೆ ಅಭಿನಂದನೆಗಳು'' ಎಂದು ಟ್ವೀಟ್ ಮಾಡಿದ್ಧಾರೆ ಭಾರತ ಡಿಸೆಂಬರ್ 2009ರಲ್ಲಿ ಶ್ರೀಲಂಕಾ ವಿರುದ್ಧ 9 ವಿಕೆಟ್ ನಷ್ಟದಲ್ಲಿ 726 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದು ಭಾರತ ಟೆಸ್ಟ್‌ನಲ್ಲಿ ದಾಖಲಿಸಿದ ಗರಿಷ್ಠ ಮೊತ್ತ ಆಗಿತ್ತು. ಆ ಟೆಸ್ಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಮ್ ಇಂಡಿಯಾ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಸೆಹ್ವಾಗ್ ಅವರು ಮೂರನೆ ತ್ರಿಶತಕ ದಾಖಲಿಸುವ ಅವಕಾಶವನ್ನು 7 ರನ್‌ನಿಂದ ಕಳೆದುಕೊಂಡಿದ್ದರು. ಸೆಹ್ವಾಗ್ 293 ರನ್ ಗಳಿಸಿ ಔಟಾಗಿದ್ದರು.

ಸೆಹ್ವಾಗ್ 2008ರಲ್ಲಿ ಇದೇ ಕ್ರೀಡಾಂಗಣದಲ್ಲಿ 319 ರನ್ ಗಳಿಸಿದ್ದರು. ಮುಲ್ತಾನ್‌ನಲ್ಲಿ ಅವರು 309 ರನ್ ಗಳಿಸಿ ಭಾರತದ ಪರ ತ್ರಿಶತಕ ದಾಖಲಿಸಿದ ಮೊದಲ ದಾಂಡಿಗ ಎನಿಸಿಕೊಂಡರು. ಕರುಣ್ ನಾಯರ್ ಚೊಚ್ಚಲ ಶತಕ ಬಾರಿಸಿ ಬಳಿಕ ದ್ವಿಶತಕ ಮತ್ತು ತ್ರಿಶತಕದ ಸಾಧನೆ ಮಾಡಿರುವುದು ವಿಶೇಷ. ನಾಯರ್ ತ್ರಿಶತಕ ದಾಖಲಿಸಿದ ನಂ.5 ಕ್ರಮಾಂಕದ ಭಾರತದ ಮೊದಲ ಬ್ಯಾಟ್ಸ್‌ಮನ್. ಏಷ್ಯನ್ ಬ್ಯಾಟ್ಸ್‌ಮನ್‌ಗಳ ಪೈಕಿ ನಾಯರ್ ಅವರದ್ದು ಮೊದಲ ಸಾಧನೆ.

....................................

ನಾಯರ್ ಗುರಿ ತಪ್ಪಲಿಲ್ಲ
  ಹೊಸದಿಲ್ಲಿ, ಡಿ.19: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ 1986, ಡಿ.22ರಂದು ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತದ ಆಗಿನ ಸ್ಟಾರ್ ಆಟಗಾರ ಎನಿಸಿಕೊಂಡಿದ್ದ ಮುಹಮ್ಮದ್ ಅಝರುದ್ದೀನ್ 199 ರನ್ ಗಳಿಸಿದ ಔಟಾದಾಗ ದೂರದರ್ಶನದಲ್ಲಿ ಕ್ರಿಕೆಟ್ ನೋಡುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ಉಂಟಾಗಿತ್ತು.

ಮೂವತ್ತು ವರ್ಷಗಳ ಬಳಿಕ ಅಂತಹದ್ದೇ ಘಟನೆ ನಡೆದಿತ್ತು. ರವಿವಾರ ಲೋಕೇಶ್ ರಾಹುಲ್ 199 ರನ್ ಗಳಿಸಿ ಔಟಾಗುವ ಮೂಲಕ ಅಝರ್ ಅವರು ಔಟಾದ ಕ್ಷಣವನ್ನು ನೆನಪಿಸುವಂತಾಗಿತ್ತು.

'' ರಾಹುಲ್ ಅವರಿಗೆ ಈ ಕಹಿ ಘಟನೆಯನ್ನು ಬಹಳ ದಿನಗಳ ತನಕ ಮರೆಯುವುದು ಕಷ್ಟ '' ಎಂದು ಅಝರ್ ಹೇಳಿದ್ದರು. ಅಝರುದ್ದಿನ್ ಕಳೆದ ಮೂರು ದಶಕಗಳಲ್ಲಿ ಕ್ರಿಕೆಟ್‌ನ ಏಳು ಬೀಳುಗಳನ್ನು ಚೆನ್ನಾಗಿ ಅರಿತುಕೊಂಡವರು.
    '' ನನಗೆ ದ್ವಿಶತಕ ತಪ್ಪಿದಾಗ ಆಗಿನ ನಾಯಕ ಕಪಿಲ್ ದೇವ್ ಮತ್ತಿತರು ಸಂತೈಸಿದ್ದರು.ಇದೀಗ ನಾಯಕ ವಿರಾಟ್ ಕೊಹ್ಲಿ ಅವರು ರಾಹುಲ್ ಅವರನ್ನು ಸಂತೈಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಭಾವಿಸುವೆನು'' ಎಂದು ಅಝರುದ್ದಿನ್ ಆಂಗ್ಲ ಪತ್ರಿಕೆ 'ಮುಂಬೈ ಮಿರರ್'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
  ಅಝರುದ್ದಿನ್ ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರು. 99 ಟೆಸ್ಟ್‌ಗಳನ್ನು ಆಡಿರುವ ಅವರು 199 ರನ್ ಗಳಿಸಿರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಿಸಿರುವ ಗರಿಷ್ಠ ಸ್ಕೋರ್ ಆಗಿದೆ. ಅವರಿಗೆ ಒಮ್ಮೆಯೂ ದ್ವಿಶತಕ ಗಳಿಸಲು ಸಾಧ್ಯವಾಗಲಿಲ್ಲ. ದ್ವಿಶತಕ ತಪ್ಪಿದಕ್ಕೆ ನೋವಾಗಿದೆ: ನನಗೆ 200 ರನ್ ಗಳಿಸಲು ಸಾಧ್ಯವಾಗಲಿಲ್ಲ. ದ್ವಿಶತಕ ವಂಚಿತಗೊಂಡಿರುವ ಹಿನ್ನೆಲೆಯಲ್ಲಿ ಮನಸ್ಸಿಗೆ ನೋವಾಗಿದೆ. ಆದರೆ ನಾನು ಯಾರ ದಾಖಲೆಯನ್ನು ಮುರಿಯುವುದಕ್ಕಾಗಿ ಆಡಲಿಲ್ಲ.200 ರನ್ ಗಳಿಸಿದ್ದರೆ ಚೆನ್ನಾಗಿರುತ್ತಿತ್ತು'' ಎಂದು ರಾಹುಲ್ ಹೇಳಿದ್ದಾರೆ.

....

..........................

ಕ್ರಿಕೆಟ್ 10 ಹರೆಯದಲ್ಲೇ ನಾಯರ್‌ಗೆ ರಕ್ತಗತವಾಗಿತ್ತು

ಮಗನ ಸಾಧನೆಯ ಬಗ್ಗೆ ತಂದೆಯ ಪ್ರತಿಕ್ರಿಯೆ

ಚೆನ್ನೈ, ಡಿ.19: ಹತ್ತನೆ ಹರೆಯದಲ್ಲೇ ಕರುಣ್ ನಾಯರ್‌ಗೆ ಕ್ರಿಕೆಟ್ ರಕ್ತಗತವಾಗಿ ಬಂದಿತ್ತು '' ಎಂದು ಅವರ ತಂದೆ ಕಲಾಧರನ್ ನಾಯರ್ ಹೇಳಿದ್ದಾರೆ.
  ಎಂಎ ಚಿದಂಬರಮ್ ಸ್ಟೇಡಿಯಂನಲ್ಲಿ ಮಗ ಕರುಣ್ ನಾಯರ್ ಅವರು ತ್ರಿಶತಕ ಸಾಧನೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಕಲಾಧರನ್ ನಾಯರ್ ಅವರು ''ನಾನು ಮತ್ತು ಅವನ ತಾಯಿ ಮಗನ ಕ್ರಿಕೆಟ್ ಬೆಳವಣಿಗೆಯ ಬಗ್ಗೆ ಸ್ಟೇಡಿಯಂನಲ್ಲಿ ವೀಕ್ಷಿಸುತ್ತಿದ್ದೆವು'' ಎಂದು ಅವರು ಹೇಳಿದ್ದಾರೆ.
  ''ಹತ್ತನೆ ಹರೆಯಕ್ಕೆ ಕಾಲಿಟ್ಟಾಗ ನಾಯರ್ ಕ್ರಿಕೆಟ್ ಆರಂಭಿಸಿದರು. ಐದು ವರ್ಷಗಳ ಬಳಿಕ ಪ್ರಥಮ ದರ್ಜೆ ಮತ್ತು ಮತ್ತೆ 2 ವರ್ಷಗಳ ಬಳಿಕ ರಣಜಿಯಲ್ಲಿ ಮಿಂಚಿ ಇಲ್ಲಿಗೆ ಬಂದಿದ್ದಾರೆ'' ಎಂದರು
ನಾಯರ್ ತ್ರಿಶತಕದ ಸಾಧನೆ ಮಾಡುವಾಗ ಅವರ ತಂದೆ ಮತ್ತು ತಾಯಿ ಸ್ಥಳದಲ್ಲಿ ಇದ್ದರು.

ನಾಯರ್ ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ದ ಆಡಿದ ಚೊಚ್ಚಲ ಟೆಸ್ಟ್‌ನಲ್ಲಿ 4ರನ್ ಮತ್ತು ಮುಂಬೈನಲ್ಲಿ ಎರಡನೆ ಟೆಸ್ಟ್‌ನಲ್ಲಿ 13 ರನ್ ಗಳಿಸಿದ್ದರು.ಹೀಗಿದ್ದರೂ ಅವರ ಬ್ಯಾಟಿಂಗ್‌ನ ಬಗ್ಗೆ ಆಯ್ಕೆ ಸಮಿತಿ ವಿಶ್ವಾಸ ಹೊಂದಿತ್ತು. ಅವರಿಗೆ ಸಾಮರ್ಥ್ಯವನ್ನು ಸಾಬೀತುಪಡಿಸಲು ಮೂರನೆ ಅವಕಾಶ ನೀಡಿತ್ತು. ಕರುಣ್ ನಾಯರ್ ತ್ರಿಶತಕ ದಾಖಲಿಸಿದ ಮೊದಲ ಮಲೆಯಾಳಿ ಎನಿಸಿಕೊಂಡಿದ್ದಾರೆ. ನಾಯರ್ ಹೆತ್ತವರು ಕೇರಳದ ಅಲಪ್ಪುಳದ ಚೆಂಗನೂರಿನವರು ವರು. ಬೆಂಗಳೂರಿನಲ್ಲಿ ಅವರ ಕುಟುಂಬ ತಳವೂರಿದ ಹಿನ್ನೆಲೆಯಲ್ಲಿ ನಾಯರ್ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ರಣಜಿ ಕ್ರಿಕೆಟ್‌ನಲ್ಲಿ 328 ರನ್‌ಗಳ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

................

ಸ್ಟೋರ್ ಪಟ್ಟಿ


ಇಂಗ್ಲೆಂಡ್ ಮೊದಲ ಇನಿಂಗ್ಸ್ 477ಭಾರತ ಮೊದಲ ಇನಿಂಗ್ಸ್ 190.4 ಓವರ್‌ಗಳಲ್ಲಿ 759 /7 ಡಿಕ್ಲೇರ್
    ರಾಹುಲ್ ಸಿ ಬಟ್ಲರ್ ಬಿ ರಶೀದ್199
     ಪಾರ್ಥಿವ್ ಪಟೇಲ್ ಸಿ ಬಟ್ಲರ್ ಬಿ ಅಲಿ71
     ಪೂಜಾರ ಸಿ ಕುಕ್ ಬಿ ಸ್ಟೋಕ್ಸ್16
    ವಿರಾಟ್ ಕೊಹ್ಲಿ ಸಿ ಜೆನ್ನಿಂಗ್ಸ್ ಬಿ ಬ್ರಾಡ್15
    ಕರುಣ್ ನಾಯರ್ ಔಟಾಗದೆ303
    ಎಂ. ವಿಜಯ್ ಎಲ್‌ಬಿಡಬ್ಲು ಬಿ ಡಾಸನ್29
    ಆರ್.ಅಶ್ವಿನ್ ಸಿ ಬಟ್ಲರ್ ಬಿ ಬ್ರಾಡ್67
    ಜಡೇಜ ಸಿ ಬಾಲ್ ಬಿ ಡಾಸನ್51
    ಉಮೇಶ್ ಯಾದವ್ ಔಟಾಗದೆ01
            ಇತರೆ07
ವಿಕೆಟ್ ಪತನ: 1-152, 2-181, 3-211, 4-372, 5-435, 6-616, 7-754
ಬೌಲಿಂಗ್ ವಿವರ
    ಬ್ರಾಡ್27.0-6-080-2
    ಬಾಲ್23.0-2-093-0
    ಅಲಿ41.0-1-190-1
    ಸ್ಟೋಕ್ಸ್20.0-2-076-1
    ರಶೀದ್29.4-1-153-1
    ಡಾಸನ್43.0-4-129-2
    ರೂಟ್02.0-1-012-0
    ಜೆನ್ನಿಂಗ್ಸ್05.0-1-020-0

ಇಂಗ್ಲೆಂಡ್ ಎರಡನೆ ಇನಿಂಗ್ಸ್ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 12
    ಕುಕ್ ಔಟಾಗದೆ03
    ಜೆನ್ನಿಂಗ್ಸ್ ಔಟಾಗದೆ09
    ಇತರೆ00
ಬೌಲಿಂಗ್ ವಿವರ
    ಇಶಾಂತ್1-0-2-0
    ಅಶ್ವಿನ್2-0-7-0
    ಜಡೇಜ2-0-3-0
...

share
ವಾರ್ತಾಭಾರತಿ
ವಾರ್ತಾಭಾರತಿ
Next Story
X