ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ಭಾರೀ ದುಬಾರಿ!
ಶಿಕ್ಷೆ ಏನು ಗೊತ್ತೇ?

ಹೊಸದಿಲ್ಲಿ, ಡಿ.20: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ವ್ಯಕ್ತಿ ಅಥವಾ ಖಾಸಗಿ ಇಲ್ಲವೇ ಸರಕಾರಿ ಸಂಸ್ಥೆಗಳಿಗೆ 10 ಸಾವಿರ ರೂಪಾಯಿ ದಂಡ ವಿಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ನೀಡಿದೆ.
ಘನ ತ್ಯಾಜ್ಯ ವಿಲೇವಾರಿ ನಿಯಮಾವಳಿ- 2016ರ ಅನ್ವಯ ತ್ಯಾಜ್ಯವನ್ನು ಸಂಗ್ರಹಿಸುವುದು, ಸಾಗಾಟ ಮಾಡುವುದು ಹಾಗೂ ವಿಲೇವಾರಿ ಮಾಡುವುದು ಅಧಿಕಾರಿಗಳ ಶಾಸನಬದ್ಧ ಹೊಣೆಗಾರಿಕೆ ಎಂದು ಎನ್‌ಜಿಟಿ ಸ್ಪಷ್ಟಪಡಿಸಿದೆ.
"ಯಾವನೇ ವ್ಯಕ್ತಿ ವ್ಯಕ್ತಿ, ಹೊಟೇಲು, ನಿವಾಸಿ, ಕಸಾಯಿಖಾನೆ, ತರಕಾರಿ ಮಾರುಕಟ್ಟೆಗಳು ಕಾನೂನನ್ನು ಗೌರವಿಸದೇ ಚರಂಡಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದಲ್ಲಿ, ಪ್ರತಿ ಬಾರಿ ತಪ್ಪು ಮಾಡಿದಾಗ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ"’ ಎಂದು ಎನ್‌ಜಿಟಿ ಹೇಳಿದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ನ್ಯಾಯಪೀಠ ಈ ಸೂಚನೆ ನೀಡಿದ್ದು, ತ್ಯಾಜ್ಯದ ವರ್ಗೀಕರಣ ಹಾಗೂ ವಿಲೇವಾರಿಯನ್ನು ಖಾತ್ರಿಪಡಿಸಬೇಕು ಎಂದು ಹೇಳಿದೆ. ರಾಜಧಾನಿಯಲ್ಲಿ ತ್ಯಾಜ್ಯ ನಿರ್ವಹಣೆ ನಿಯಮಾವಳಿ ಉಲ್ಲಂಘಿಸಲಾಗುತ್ತಿದೆ ಎಂದು ದೂರಿ ಕುರ್ದತ್ ಸಂಧು ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎನ್‌ಜಿಟಿ ಈ ಮಹತ್ವದ ಆದೇಶ ಹೊರಡಿಸಿದೆ.
ತ್ಯಾಜ್ಯವನ್ನು ವಿಲೇವಾರಿ ಮಾಡುವ ಮುನ್ನ ಸೂಕ್ತವಾಗಿ ವಿಂಗಡಿಸುವುದು ತ್ಯಾಜ್ಯ ಮೂಲಗಳ ಜವಾಬ್ದಾರಿ ಎಂದು ಹೇಳಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.





