ಮೂಡುಬಿದಿರೆ: ವಿದ್ಯಾರ್ಥಿ ನಾಪತ್ತೆ

ಮೂಡುಬಿದಿರೆ,ಡಿ.20:ಕಾಲೇಜಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಸಂಜೆ ಮರಳಿ ಹಾಸ್ಟೆಲ್‌ಗೆ ವಾಪಾಸಾಗದೆ ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ವಿದ್ಯಾರ್ಥಿಯನ್ನು ಬೆಂಗಳೂರಿನ ಕದರೇಗೌಡ ಎಂಬವರ ಮಗ ನಂದನ್ ಗೌಡ(17)ಎಂದು ತಿಳಿದುಬಂದಿದೆ. ಎಂದಿನಂತೆ ಶುಕ್ರವಾರ ಬೆಳಿಗ್ಗೆ ಈತ ಪುತ್ತಿಗೆಯ ನಂದಿನಿ ಹಾಸ್ಟೆಲ್‌ನಿಂದ ಕಾಲೇಜಿಗೆ ತರಳಿದ್ದ. ಮಧ್ಯಾಹ್ನ ವಾಪಾಸು ಹಾಸ್ಟೆಲ್‌ಗೆ ಬರದೆ ನಾಪತ್ತೆಯಾಗಿದ್ದಾನೆ.ಮರುದಿನ ಈತ ತನ್ನ ತಂದೆಯ ಮೊಬೈಲ್‌ಗೆ ಕರೆ ಮಾಡಿದ್ದರು ಏನು ವಿಷಯ ತಿಳಿಸಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





