ಮಲಯಾಳಂ ನಟ ಜಗನ್ನಾಥ ವರ್ಮ ನಿಧನ

ತಿರುವನಂತಪುರ, ಡಿ.20: ಖ್ಯಾತ ಮಲಯಾಳಂ ನಟ ಜಗನ್ನಾಥ ವರ್ಮ ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಕಥಕ್ಕಳಿ ಕಲಾವಿದರಾಗಿರುವ ವರ್ಮ ಅವರು 575ಕ್ಕೂ ಅಧಿಕ ಚಿತ್ರಗಳಲ್ಲಿ ಮತ್ತು ಟಿವಿ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಮೂಲತಃ ಚೆರ್ತಾಲ ನಿವಾಸಿಯಾಗಿರುವ ವರ್ಮ ಪೊಲೀಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಮಲಯಾಳಂ ಚಿತ್ರಗಳಲ್ಲಿ ನಿರ್ವಹಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ, ಜಡ್ಜ್ , ಬಿಷಪ್ , ಹಿರಿಯ ಅಧಿಕಾರಿಗಳ ಪಾತ್ರ ಗಳು ಹೆಚ್ಚು ಜನಪ್ರಿಯತೆಯನ್ನು ತಂದು ಕೊಟ್ಟಿತ್ತು.
ವರ್ಮ ಅವರ ಪುತ್ರ ಮನು ವರ್ಮ ನಟರಾಗಿದ್ದಾರೆ. ಸಿನಿಮಾ ನಿರ್ದೇಶಕ ವಿಜಿ ಥಾಂಪಿ ಅವರು ವರ್ಮರ ಅಳಿಯ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





