ರಾಘವೇಶ್ವರ ಸ್ವಾಮೀಜಿ ವಿರುದ್ಧ ಮಹಿಳಾ ದೌರ್ಜನ್ಯ ತಡೆ ಸಮಿತಿಗೆ ದೂರು

ಬೆಂಗಳೂರು, ಡಿ.20: ರಾಮಚಂದ್ರಾಪುರ ಮಠd ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಮಹಿಳಾ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್ ಉಗ್ರಪ್ಪ ಅವರಿಗೆ ಮಠದ ಕೆಲ ಭಕ್ತರು ಇಂದು ದೂರು ಸಲ್ಲಿಸಿದ್ದಾರೆ
ವಿಧಾನಸೌಧದಲ್ಲಿ ಉಗ್ರಪ್ಪ ಅವರನ್ನು ಭೇಟಿ ಮಾಡಿ ದೂರು ನೀಡಿದ ಮಠದ ಕೆಲವು ಭಕ್ತರು ಮಠಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಸರಕಾರಕ್ಕೆ ಒತ್ತಡ ಹೇರವಂತೆ ಉಗ್ರಪ್ಪ ಅವರಿಗೆ ಮನವಿ ಮಾಡಿದರು. ಅಲ್ಲದೆ ಗಾಯಕಿ ಪ್ರೇಮಲತಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಹಿಳಾ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಮನವಿ ಮಾಡಿದರು.
ಅಖಿಲ ಕರ್ನಾಟಕ ಹವ್ಯಕ ಒಕ್ಕೂಟದ ಮುಖಂಡರಾದ ಎಂ.ಎನ್.ಭಟ್ ನೇತೃತ್ವದಲ್ಲಿ ದೂರು ಸಲ್ಲಿಸಿದ ಭಕ್ತರು, ಶ್ರೀರಾಮ ಹಾಗೂ ಗೋವುಗಳ ಬಗ್ಗೆ ಆಸಕ್ತಿ ಇತ್ತು ಎಂಬ ಕಾರಣಕ್ಕೆ ಸ್ವಾಮೀಜಿಯನ್ನು ಬೆಂಬಲಿಸಿದ್ದೆವು. ಆದರೆ ಸ್ವಾಮೀಜಿಯವರ ಲಂಪಟತನವನ್ನು ತೋರುತ್ತಿದ್ದಾರೆ. ದಿವಾಕರ್ ಶಾಸ್ತ್ರಿ ಸಾವಿನ ಪ್ರಕರಣದಲ್ಲಿ ಸ್ವಾಮೀಜಿಯವರು ಚಾರ್ಚ್ ಶೀಟ್ ಹಾಕದಂತೆ ಪ್ರಭಾವ ಬೀರುತ್ತಿದ್ದಾರೆ. ಅಲ್ಲದೆ ಪ್ರೇಮಲತಾ ಕುಟುಂಬಕ್ಕೆ ಸ್ವಾಮಿ ಬೆಂಬಲಿಗರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದರು.
ರಾಘವೇಶ್ವರ ಸ್ವಾಮೀಜಿ ವಿರುದ್ಧದ ಪ್ರಕರಣಗಳನ್ನು ಶೀಘ್ರ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸುವುದಾಗಿ ಸಿಐಡಿ ಡಿಜಿಪಿಯಿಂದ ಉಗ್ರಪ್ಪ ಅವರಿಗೆ ಭರವಸೆ ನೀಡಿದರು. ಚಾರ್ಜ್ ಶೀಟ್ ಸಲ್ಲಿಸದಿದ್ದರೆ ಮಹಿಳಾ ದೌರ್ಜನ್ಯ ಸಮಿತಿ ಸಿಎಂಗೆ ದೂರು ನೀಡುವುದಾಗಿ ಉಗ್ರಪ್ಪ ಎಚ್ಚರಿಸಿದರು..
ಹವ್ಯಕ ಮುಖಂಡರ ಹೇಳಿಕೆ
ರಾಘವೇಶ್ವರ ಸ್ವಾಮೀಜಿಯವರು ಪ್ರೇಮಲತಾ ವಿರುದ್ಧ ನೀಡಿರುವ ಬ್ಲಾಕ್ ಮೇಲ್ ಪ್ರಕರಣ ಶೀಘ್ರ ಇತ್ಯರ್ಥವಾಗಬೇಕು. ನಾವು ರಾಮಚಂದ್ರಾಪುರ ಮಠದ ವಿರುದ್ಧ ಆರೋಪ ಮಾಡುತ್ತಿಲ್ಲ. ಸ್ವಾಮೀಜಿಯವರ ನಡತೆ ಬಗ್ಗೆ ನಮ್ಮ ಆಕ್ಷೇಪವಿದೆ. ಮಹಿಳೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







