Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮೈಕಲ್ ಶುಮ್ಯಾಕರ್ ಹಾಸಿಗೆ ಹಿಡಿದಿರುವ...

ಮೈಕಲ್ ಶುಮ್ಯಾಕರ್ ಹಾಸಿಗೆ ಹಿಡಿದಿರುವ ಚಿತ್ರಕ್ಕೆ 7 ಕೋಟಿ ರೂಪಾಯಿ !

ವಾರ್ತಾಭಾರತಿವಾರ್ತಾಭಾರತಿ20 Dec 2016 3:23 PM IST
share
ಮೈಕಲ್ ಶುಮ್ಯಾಕರ್ ಹಾಸಿಗೆ ಹಿಡಿದಿರುವ ಚಿತ್ರಕ್ಕೆ 7 ಕೋಟಿ ರೂಪಾಯಿ !

ಜಿನೆವಾ,ಡಿ.20: ಫಾರ್ಮ್ಯುಲಾ ಒನ್ ದಂತಕಥೆ, ಫ್ರೆಂಚ್ ಆಲ್ಪ್ಸ್‌ನಲ್ಲಿ ಸ್ಕೀಯಿಂಗ್ ಸಂದರ್ಭದಲ್ಲಿ ಅವಘಡಕ್ಕೆ ಗುರಿಯಾಗಿ ದೇಹವು ಭಾಗಶಃ ನಿಷ್ಕ್ರಿಯಗೊಂಡಿರುವ ಮೈಕಲ್ ಶುಮ್ಯಾಕರ್ ಅವರ ಮೊದಲ ಚಿತ್ರಗಳು ಅವರ ಮನೆಯಿಂದ ಹೊರಗೆ ಕಳ್ಳಸಾಗಣೆ ಯಾಗಿದ್ದು, ಅವುಗಳನ್ನು ಸುಮಾರು ಒಂದು ಮಿಲಿಯನ್ ಡಾಲರ್(6.7 ಕೋ.ರೂ)ಗೆ ಮಾರುವ ಕೊಡುಗೆ ಮಾಧ್ಯಮ ಸಂಸ್ಥೆಯೊಂದಕ್ಕೆ ಬಂದಿದೆ.

2013ರಲ್ಲಿ ಸ್ಕೀಯಿಂಗ್ ಮಾಡುತ್ತಿರುವಾಗ ಬಿದ್ದು ಮಿದುಳಿಗೆ ಪೆಟ್ಟು ಮಾಡಿಕೊಂಡಿದ್ದ, ಫಾರ್ಮ್ಯುಲಾ ಒನ್ ರೇಸ್‌ನಲ್ಲಿ ಏಳು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಶುಮ್ಯಾಕರ್ ದೇಹಸ್ಥಿತಿಯ ಬಗ್ಗೆ ಮಾಹಿತಿಯನ್ನು ಗುಟ್ಟಾಗಿಯೇ ಇರಿಸಲಾಗಿದೆ. ಈಗ ಸುದ್ದಿಯಾಗಿರುವ ಚಿತ್ರಗಳು ಅವರ ವೈಯಕ್ತಿಕ ಬದುಕನ್ನು ಉಲ್ಲಂಘಿಸಿವೆ ಎಂದು ಜರ್ಮನಿಯ ಸರಕಾರಿ ಅಭಿಯೋಜಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಚಿತ್ರಗಳನ್ನು ತೆಗೆದಿರುವ ಫೋಟೊಗ್ರಾಫರ್ ಶುಮ್ಯಾಕರ್ ಅವರ ಪರಿಚಯದ ವ್ಯಕ್ತಿಯೇ ಆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

‘ಅಪರಿಚಿತ ವ್ಯಕ್ತಿಯೋರ್ವ ’ ಈ ಚಿತ್ರಗಳನ್ನು ತೆಗೆದಿದ್ದಾನೆ ಮತ್ತು ದುಬಾರಿ ಬೆಲೆಗೆ ಮಾರಾಟ ಮಾಡುವ ಕೊಡುಗೆಯನ್ನು ಮುಂದಿರಿಸಿದ್ದಾನೆ ಎಂದು ಜರ್ಮನಿಯ ಒಫೆನ್‌ಬರ್ಗ್‌ನಲ್ಲಿರುವ ಪ್ರಾಸಿಕ್ಯೂಟರ್ ಕಚೇರಿಯು ತಿಳಿಸಿದೆ ಎಂದು ಬ್ರಿಟನ್ನಿನ ದೈನಿಕ ’ದಿ ಸನ್ ’ವರದಿ ಮಾಡಿದೆ.

ಶುಮ್ಯಾಕರ್ ಅವಘಡಕ್ಕೆ ಸಿಲುಕಿ ಡಿ.29ಕ್ಕೆ ಭರ್ತಿ ಮೂರು ವರ್ಷಗಳಾಗುತ್ತವೆ. ಅವರ ಆರೋಗ್ಯದ ಬಗ್ಗೆ ವದಂತಿಗಳು ದಟ್ಟವಾಗಿದ್ದು, ಅವರ ಕುಟುಂಬವು ತನ್ನ ಖಾಸಗಿತನವನ್ನು ಉಲ್ಲಂಘಿಸದಂತೆ ನಿರಂತರವಾಗಿ ಕೋರಿಕೊಳ್ಳುತ್ತಲೇ ಇದೆ.

ಶುಮ್ಯಾಕರ್ ಅವರ ದೇಹಸ್ಥಿತಿಯ ಬಗ್ಗೆ ಕೆಲವೇ ಮಾಹಿತಿಗಳನ್ನು ಬಹಿರಂಗ ಗೊಳಿಸಲಾಗಿದೆ. ಶುಮ್ಯಾಕರ್ ಅವರ ಆರೋಗ್ಯ ಸಾರ್ವಜನಿಕ ಚರ್ಚೆಯ ವಿಷಯ ವಲ್ಲ, ಹೀಗಾಗಿ ಈ ಬಗ್ಗೆ ವೌನವನ್ನು ಕಾಯ್ದುಕೊಳ್ಳಲಾಗುವುದು ಎಂದು ಅವರ ಮ್ಯಾನೇಜರ್ ಸಬಿನೆ ಕೆಹ್ಮ್ ಹೇಳಿದ್ದಾರೆ.

ಶುಮ್ಯಾಕರ್ ತನ್ನ ಖಾಸಗಿತನದ ಬಗ್ಗೆ ಭಾರೀ ಕಾಳಜಿ ವಹಿಸುತ್ತಿದ್ದರು. ತನ್ನ ವೃತ್ತಿ ಜೀವನದ ಅತ್ಯಂತ ಉತ್ತುಂಗದ ದಿನಗಳಲ್ಲೂ ಅವರು ಈ ಕಾಳಜಿಯನ್ನು ಬಿಟ್ಟಿರಲಿಲ್ಲ. ತನ್ನ ಸಾರ್ವಜನಿಕ ವ್ಯಕ್ತಿತ್ವ ಮತ್ತು ಖಾಸಗಿ ಬದುಕಿನ ನಡುವೆ ಸ್ಪಷ್ಟ ಅಂತರವನ್ನು ಅವರು ಕಾಯ್ದುಕೊಂಡಿದ್ದರು ಎಂದು ಕೆಹ್ಮ್ ಹೇಳಿದ್ದಾರೆ.

 2013,ಡಿಸೆಂಬರ್‌ನಲ್ಲಿ ಸ್ಕೀಯಿಂಗ್ ಅವಘಡದ ಬಳಿಕ ಶುಮ್ಯಾಕರ್ ಅವರು ಕೋಮಾ ಸ್ಥಿತಿಯಲ್ಲಿದ್ದರು. 2014,ಜೂನ್‌ನಲ್ಲಿ ಅವರಿಗೆ ಪ್ರಜ್ಞೆ ಮರುಕಳಿಸಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಅವರನ್ನು ಜಿನೆವಾದ ಅವರ ಕುಟುಂಬದ ಮನೆಯಲ್ಲಿನ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಅವರ ಶರೀರ ಭಾಗಶಃ ನಿಷ್ಕ್ರಿಯಗೊಂಡಿದೆ ಎನ್ನಲಾಗಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X