ಭ್ರೂಣ ಹತ್ಯೆ ವಿರುದ್ಧ ಪುಟ್ಟ ಶ್ರೇಯಾ ಹಾಡುಗಳು ವೈರಲ್

ಕ್ಯಾಲಿಕಟ್,ಡಿ.20: ಪುಟ್ಟ ಹಾಡುಗಾರ್ತಿ ಶೇಯಾ ಜಗದೀಪ್ ಹಾಡಿದ ಭ್ರೂಣ ಹತ್ಯೆಯ ವಿರೋಧಿ ಹಾಡು "ಅಮ್ಮೇ ಞಾನೊರು ಕುಂಞಲ್ಲೇ( ಅಮ್ಮಾ ನಾನೊಂದು ಮಗುವಲ್ಲವೇ) ಸಾಮಾಜಿಕ ಮಾಧ್ಯಮಗಳಲ್ಲಿ ಗಮನಸೆಳೆಯುತ್ತಿದೆ. ಶ್ರೇಯಾಳ’ಈಶಾಯೊಡೊಪ್ಪಂ’ ಎಂಬ ಅಲ್ಬಂ ಹಾಡಿದು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಾಡು ಈಗಾಗಲೇ ಜನಪ್ರಿಯವಾಗಿದೆ.
ಒಂದು ಗಝಲ್ ಸಹಿತ ಒಟ್ಟು 10 ಹಾಡುಗಳು ಅಲ್ಬಂನಲ್ಲಿದೆ. ಶ್ರೇಯಾ ಒಬ್ಬಳೇ ಎಲ್ಲಾ ಹಾಡುಗಳನ್ನು ಹಾಡಿದ್ದಾಳೆ.
ಕ್ರೈಸ್ತ ಭಕ್ತಿಗೀತೆಗಳ ಮೂಲಕ ಜನಪ್ರಿಯರಾದ ಬೇಬಿ ಜಾನ್ ಕಳತ್ತಿರ ಅವರ ಹಾಡುಗಳನ್ನು ಅಲ್ಬಂನಲ್ಲಿ ಬಳಸಿಕೊಳ್ಳಲಾಗಿದೆ. ಜಾರ್ಜ್‌ಜೋನಿ ಸಂಗೀತ ನೀಡಿರುವ ಈ ಹಾಡನ್ನು ಈವರೆಗೆ 2 ವಾರಗಳಲ್ಲಿ ಯೂಟ್ಯೂಬ್‌ನಲ್ಲಿ ಏಳು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆಂದು ವರದಿತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





