ಡಿ.26 ರಂದು ಎತ್ತಿನ ಹೊಳೆಯ ಬಗ್ಗೆ ಮುಖ್ಯಮಂತ್ರಿಯಿಂದ ಸಮಾಲೋಚನಾ ಸಭೆ

ಮಂಗಳೂರು,ಡಿ.20: ಎತ್ತಿನ ಹೊಳೆ ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಲು ಈಗಾಗಲೇ ಮುಖ್ಯಮಂತ್ರಿ ಬಳಿ ತೆರಳಿರುವ ನಿಯೋಗ ಹಾಗೂ ಇತರ ಸಂರ್ಘಟನೆಗಳಿಗೆ ಡಿಸೆಂಬರ್ 26 ರಂದು ಮುಖ್ಯ ಮಂತ್ರಿ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಅಂದು ಮುಖ್ಯ ಮಂತ್ರಿ ಯವರು ಎತ್ತಿನ ಹೊಳೆಯ ಬಗ್ಗೆ ಸಮಾಲೋಚನೆ ನಡೆಸಲು ಅವಕಾಶ ಕೋರಿರುವ ಸಂಘಟನೆಗಳ ಸದಸ್ಯರೊಂದಿಗೆ ಸಮಾಲೋಚಿಸಲು ಬೆಳಗ್ಗೆ 12 ಗಂಟೆಗೆ ತಮ್ಮ ನಿವಾಸದಲ್ಲಿ ದಿನ ನಿಗದಿ ಪಡಿಸಿದ್ದಾರೆ ಎಂದು ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ,ಅರಣ್ಯವಾಸಿಗಳ ಅನುಭೋಗದ ಹಕ್ಕು ನೀಡಲು ಅವಕಾಶವಿದೆ:
ಅರಣ್ಯದಲ್ಲಿ ವಾಸಿಸುತ್ತಿರವ ಅರಣ್ಯವಾಸಿಗಳಿಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಅನುಭೋಗದ ಹಕ್ಕಿನ ಕಾಯಿದೆಯನ್ನು ಜಾರಿಗೆ ತರಲಾಗಿದೆ . ಈ ಸಂದರ್ಭದಲ್ಲಿ 2005ಕ್ಕೂ ಮೊದಲು ಅರಣ್ಯದಲ್ಲಿ ವಾಸ ಮಾಡುತ್ತಿರುವವರಿಗೆ ಹಾಗೂ 75ವರ್ಷಕ್ಕೂ ಹೆಚ್ಚು ವರ್ಷ ಅರಣ್ಯದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಅರಣ್ಯದ ಅನುಭೋಗದ ಹಕ್ಕಿನ ಅವಕಾಶ ಲಭಿಸಲಿದೆ. ಕೊಡಗಿನ ದಿಡ್ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







