ತಾಯಿಗೆ ಪಾರ್ಟಿಯ ಗಮ್ಮತ್ತು : 3 ತಿಂಗಳ ಹಸುಳೆಯನ್ನು ಜೀವಂತ ತಿಂದು ಮುಗಿಸಿದ ಇಲಿಗಳು !

ಜೊಹಾನ್ಸ್‌ಬರ್ಗ್, ಡಿ. 20: ದಕ್ಷಿಣ ಆಫ್ರಿಕದ ಜೊಹಾನ್ಸ್‌ಬರ್ಗ್ ನಗರದ ಕ್ಯಾಟಲ್‌ಹಾಂಗ್ ಪ್ರದೇಶದಲ್ಲಿ ಮೂರು ತಿಂಗಳ ಹಸುಳೆಯೊಂದನ್ನು ದೈತ್ಯ ಇಲಿಗಳು ತಿಂದು ಹಾಕಿದ ಘಟನೆ ವರದಿಯಾಗಿದೆ.
ಹೆಣ್ಣು ಹುಸುಳೆಯೊಂದನ್ನೇ ಮನೆಯಲ್ಲಿ ಬಿಟ್ಟು ಅದರ ತಾಯಿ ಪಾರ್ಟಿ ಮಾಡಲು ಹೊರಗೆ ಹೋಗಿದ್ದಾಗ ಘಟನೆ ನಡೆದಿದೆ ಎಂದು ‘ಡೇಲಿ ಮೇಲ್’ ವರದಿ ಮಾಡಿದೆ.
ಮಗುವಿನ ಬಗ್ಗೆ ನಿರ್ಲಕ್ಷ ತೋರಿರುವುದಕ್ಕಾಗಿ 26 ವರ್ಷದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆದಾಗ್ಯೂ, ಈ ಹಸುಳೆಯ ‘ಲಕ್ಕಿ’ ಎಂಬ ಹೆಸರಿನ ಅವಳಿ ಸೋದರನನ್ನು ತಾಯಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದರಿಂದ ಆತ ಅದೃಷ್ಟವಶಾತ್ ಪಾರಾಗಿದ್ದಾನೆ. ಪಾರ್ಟಿ ರಾತ್ರಿಯಿಡೀ ನಡೆದಿತ್ತು ಎನ್ನಲಾಗಿದೆ.
‘‘ಹಸುಳೆಯ ನಾಲಿಗೆ, ಕಣ್ಣುಗಳು ಮತ್ತು ಬೆರಳುಗಳೆಲ್ಲವನ್ನೂ ಇಲಿಗಳು ತಿಂದಿವೆ. ದೇಹದ ಹಲವು ಅವಯವಗಳು ಕಾಣೆಯಾಗಿವೆ. ಅಳಿದುಳಿದ ದೇಹದ ಎಲ್ಲಾ ಭಾಗಗಳಲ್ಲಿ ಕಚ್ಚಿದ ಗಾಯಗಳಿವೆ’’ ಎಂಬುದಾಗಿ ನೆರೆಕರೆಯ ವ್ಯಕ್ತಿಯೊಬ್ಬರು ಈ ಘಟನೆಯನ್ನು ವಿವರಿಸಿದ್ದಾರೆ
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







