Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 16 ವರ್ಷಗಳ ಬಳಿಕ ಒಂದಾದ ಅನಂತ್...

16 ವರ್ಷಗಳ ಬಳಿಕ ಒಂದಾದ ಅನಂತ್ ನಾಗ್-ಲಕ್ಷ್ಮಿ ಜೋಡಿ !

ವಾರ್ತಾಭಾರತಿವಾರ್ತಾಭಾರತಿ20 Dec 2016 9:11 PM IST
share
16 ವರ್ಷಗಳ ಬಳಿಕ ಒಂದಾದ ಅನಂತ್ ನಾಗ್-ಲಕ್ಷ್ಮಿ ಜೋಡಿ !

ಬೆಂಗಳೂರು , ಡಿ. 20 : ಆಕ್ಮೆ ಮೂವೀಸ್ ಇಂಟರ್‌ನ್ಯಾಶನಲ್ ಲಾಂಛಾನದಲ್ಲಿ ಖ್ಯಾತ ನಿರ್ದೇಶಕ ಕೂಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ದುಬೈಯ ಖ್ಯಾತ ಉದ್ಯಮಿ ಹಾಗೂ ಪ್ರಸಿದ್ದ ಗಾಯಕ ಶ್ರೀ ಹರೀಶ್ ಶೇರಿಗಾರ್ ಅವರ ನಿರ್ಮಾಣದ ಚೊಚ್ಚಲ ಕಾಣಿಕೆ "ಮಾರ್ಚ್ 22" ಕನ್ನಡ ಚಲನ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ರವಿವಾರ ಬೆಂಗಳೂರಿನಲ್ಲಿ ಸಿನೆಮಾದ ಕುರಿತು ಸುದ್ದಿಗೋಷ್ಠಿ ಆಯೋಜಿಲಾಗಿತ್ತು.

ಹಲವಾರು ಖ್ಯಾತ, ಪ್ರತಿಭಾವಂತ ನಟಿ-ನಟಿಯರು ನಟಿಸುತ್ತಿರುವ "ಮಾರ್ಚ್ 22" ಸಿನೆಮಾವು ಭಾವನಾತ್ಮಕ ವಿಷಯವನ್ನು ಆಧರಿಸಿದ ಕತೆಯಾಗಿದ್ದು, 16 ವರ್ಷಗಳ ಬಳಿಕ ಖ್ಯಾತ ನಟ ಅನಂತ್ ನಾಗ್-ಲಕ್ಷ್ಮಿ ಜೋಡಿ ಮಾತೆ ಈ ಸಿನೆಮಾ ಮೂಲಕ ಒಂದಾಗುತ್ತಿದ್ದಾರೆ.

ನವೆಂಬರ್ 7ರ ಸೋಮವಾರದಂದು ಬೆಳಿಗ್ಗೆ ಬೆಳಗಾವಿಯ ಹೊರವಲಯದ ನೇಸರ್ಗಿ ಸಮೀಪದ ಚಚಡಿ ಎಂಬಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ರಟ್ ರಾಜರ ವಂಶದ ವಾಡೆ ಎಂಬ ಹೆಸರಿನ ಪುರಾತನ ಮನೆಯೊಂದರಲ್ಲಿ ಸಿನೆಮಾದ ಮುಹೂರ್ತ ನಡೆದಿದ್ದು, ಸಿನೆಮಾ ಚಿತ್ರೀಕರಣ ಭರದಿಂದ ಸಾಗುತ್ತ ಬಂದಿದೆ. ಸಿನೆಮಾ ಬೆಳಗಾವಿಯಲ್ಲಿ ಚಿತ್ರೀಕರಣ ನಡೆಯುತ್ತಿರುದರಿಂದ ಮಾಧ್ಯಮದವರೊಂದಿಗೆ ಸಿನೆಮಾದ ಕುರಿತು ಮಾತನಾಡುದಕ್ಕಾಗಿ ಬೆಂಗಳೂರಿನ ಸಿಟಾಡೆಲ್ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು.

ಸುದ್ದಿಗೋಷ್ಠಿಯಲ್ಲಿ ನಟರಾದ ಅನಂತ್ ನಾಗ್-ವಿನಯ ಪ್ರಸಾದ್, ನಿರ್ದೇಶಕ ಕೂಡ್ಲು ರಾಮಕೃಷ್ಣ, ನಿರ್ಮಾಪಕ ಹರೀಶ್ ಶೇರಿಗಾರ್ ಸಿನೆಮಾದ ಕುರಿತು ವಿಸ್ತಾರವಾಗಿ ಮಾತನಾಡಿದರು. ಈ ವೇಳೆ ಹರೀಶ್ ಶೇರಿಗಾರ್ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಸೇರಿದಂತೆ ಇಡೀ ಚಿತ್ರ ತಂಡವೇ ಭಾಗವಹಿಸಿತ್ತು.

'ಮಾರ್ಚ್ 22' ಇಡೀ ಜಗತ್ತಿಗೆ ಒಂದು ರೀತಿಯಲ್ಲಿ ವಿಶೇಷ ದಿನ. ಯಾಕೆಂದರ ಅದು ಜಲ ದಿನ. ಈ ದಿನವನ್ನೇ ಚಿತ್ರದ ಟೈಟಲ್ ಆಗಿ ಬಳಸಿಕೊಂಡಿರೋದರ ಹಿಂದೆಯೂ ನಿಖರವಾದ ಕಾರಣಗಳಿವೆ. ನೀರಲ್ಲೂ ಜಾತಿ-ಧರ್ಮ ನೋಡುವವರೂ ಇರಬಹುದು. ಆದರೆ ನೀರಿಗೆ ಅಂಥದ್ಯಾವ ಕಟ್ಟು ಪಾಡುಗಳೂ ಇಲ್ಲ. ಅದು ಇಡೀ ಜೀವ ಸಂಕುಲದ ಜೀವಧಾತು. ಅದು ಜಾತಿ, ಧರ್ಮ, ಪಂಥಗಳನ್ನು ಮೀರಿದ್ದು. ಇಂಥದ್ದೇ ಜೀವಪರ ಆಶಯವುಳ್ಳ ಕಥೆಯನ್ನು ಈ ಚಿತ್ರ ಹೊಂದಿದೆ. ನೀರಿನ ಮಹತ್ವ ಏನೆಂಬುದನ್ನು ಹಾಗು ಜಾತಿ-ಧರ್ಮಗಳಿಗಿಂತಲೂ ಬದುಕು ಮುಖ ಎಂಬುದು ಈ ಸಿನೆಮಾದ ತಿರುಳಾಗಿದೆ ಎಂದು ನಟ ಅನಂತ್ ನಾಗ್ ಸಿನೆಮಾದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. 

ಚಿತ್ರದಲ್ಲಿ ನೀರಿನ ಸದ್ಭಳಕೆಯ ಬಗ್ಗೆ ಅರಿವು ಮೂಡಿಸುವ ವಿಚಾರವೂ ಇದೆ. ಕೂಡ್ಲು ಪ್ರಕಾರ, ಇದು ಹೊಸ ಬಗೆಯ ಸಿನಿಮಾವಾಗಲಿದೆ.  ಈ ಚಿತ್ರದದಲ್ಲಿ ಅನಂತ್ ನಾಗ್-ಲಕ್ಷ್ಮಿ ಜೋಡಿ ಜೊತೆ ಆರ್ಯವರ್ಧನ್, ಕಿರಣ್ ರಾಜ್, ಮೇಘಶ್ರೀ, ದೀಪಾ ಶೆಟ್ಟಿ, ಶರತ್‌ ಲೋಹಿತಾಶ್ವ, ಆಶಿಶ್ ವಿದ್ಯಾರ್ಥಿ, ರವಿಕಾಳೆ, ಜೈಜಗದೀಶ್‌, ವಿನಯಾ ಪ್ರಸಾದ್‌, ಪದ್ಮಜಾ ರಾವ್‌, ಪವಿತ್ರ ಲೋಕೇಶ್‌, ಸಾಧುಕೋಕಿಲ ಮತ್ತು ಯುವ ಕಲಾವಿದಾರಾದ ಸೃಜನ್ ರೈ, ಯುವ ಕಿಶೋರ್, ದುಬೈಯ ಕಲಾವಿದರಾದ ಚಿದಾನಂದ್ ಪೂಜಾರಿ, ಸುವರ್ಣ ಸತೀಶ್ ಹಾಗೂ ಮಂಗಳೂರಿನ ಕಲಾವಿದೆ ಪ್ರಶೋಭಿತಾ ಪ್ರಭಾಕರ್ ಮುಂತಾದವರು ನಟಿಸುತ್ತಿದ್ದಾರೆ.

ಇನ್ನುಳಿದಂತೆ ಚಿತ್ರಕ್ಕೆ ಮಣಿಕಾಂತ್ ಕದ್ರಿ ಹಾಗು ಎನ್.ಜೆ.ರವಿಶೇಖರ್ ಸಂಗೀತಾ ನೀಡಿದ್ದಾರೆ, ಮೋಹನ್ ಎಂ ಅವರ ಛಾಯಾ ಗ್ರಾಹಣವಿದೆ, ಬಸವರಾಜ್ ಆರಸ್ ಸಂಕಲನ, ಸುಭಾಶ್ ಕಡಕೋಲ್ ಕಲೆ, ಮದನ್ ಹರಿಣಿ ನೃತ್ಯ ನಿರ್ದೇಶನವಿರಲಿದೆ. ಯಶಸ್ವಿ ಸ್ಟಂಟ್ ಮಾಸ್ಟರ್ ಕುಂಗ್‌ಫು ಚಂದ್ರು ಅವರ ಸಾಹಸ ನಿರ್ದೇಶನವಿದೆ. ಸಹ ನಿರ್ದೇಶನ ಕೆ.ಜಗದೀಶ್ ರೆಡ್ಡಿ, ಶರಣ್ಯ.ಬಿ., ನಾಗರಾಜ್ ಹಸನ್ ಹಾಗೂ ಅಚ್ಯುತ ರಾವ್ ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X