ಅಮಾಯಕ ಸಿರಿಯನ್ನರ ನರಮೇಧಕ್ಕೆ ಸೌದಿ ಸಂಪುಟ ಖಂಡನೆ

ರಿಯಾದ್, ಡಿ. 20: ಸೌದಿ ಅರೇಬಿಯದ ದೊರೆ ಸಲ್ಮಾನ್ ನೇತೃತ್ವದಲ್ಲಿ ಸೋಮವಾರ ನಡೆದ ಸಂಪುಟ ಸಭೆಯು ಸಿರಿಯದ ಅಲೆಪ್ಪೊ ನಗರದ ಮೇಲೆ ನಡೆಯುತ್ತಿರುವ ಭೀಕರ ಶೆಲ್ ದಾಳಿಯನ್ನು ಖಂಡಿಸಿತು.
ಈ ಅಮಾನುಷ ದಾಳಿಗಳಿಂದಾಗಿ ಅಮಾಯಕ ಜನರು ಸಾಯುತ್ತಿದ್ದಾರೆ, ಮುತ್ತಿಗೆಗೊಳಗಾಗುತ್ತಿದ್ದಾರೆ, ಹಸಿವೆಯಿಂದ ಬಳಲುತ್ತಿದ್ದಾರೆ, ನಿರ್ವಸಿತರಾಗುತ್ತಿದ್ದಾರೆ ಹಾಗೂ ಅವರ ಪ್ರಾಥಮಿಕ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಸಂಪುಟ ಸಭೆ ಹೇಳಿದೆ.
ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸನ್ನದಿನಲ್ಲಿ ನಿಗದಿಪಡಿಸಿರುವ ತನ್ನ ಜವಾಬ್ದಾರಿಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಭಾಯಿಸಬೇಕು ಎಂದು ಸಂಪುಟ ಸಭೆ ಕರೆ ನೀಡಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





