ಇಬ್ಬರು ಹೆಂಡಿರ ಪತಿ ಅನುಮಾನಾಸ್ಪದ ಸಾವು

ಕುಂದಾಪುರ, ಡಿ.20: ಇಬ್ಬರು ಪತ್ನಿಯರನ್ನು ಹೊಂದಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.
ಕಟ್‌ಬೆಲ್ತೂರಿನ ಹರೆಗೋಡು ನಿವಾಸಿ ನರಸಿಂಹ ಆಚಾರ್ಯರ ಪುತ್ರ ಭಾಸ್ಕರ ಆಚಾರ್ಯ(32) ಎಂಬವರು ತನ್ನ ಮೊದಲ ಪತ್ನಿ ಶಬಿಯಾ ಎಂಬಾಕೆ ವಾಸವಾಗಿರುವ ಬಸ್ರೂರಿನ ಬಾಡಿಗೆಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೊದಲನೆ ಪತ್ನಿ ಪ್ರೀತಾ ನೀಡಿದ ದೂರಿನಂತೆ ಕುಂದಾಪುರ ಪೊಲೀಸರು ಮೃತದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ರಾತ್ರಿ ಪತ್ನಿ ಶಬಿಯಾ ಜೊತೆ ಊಟ ಮುಗಿಸಿ ಮಲಗಲು ಸಿದ್ಧತೆ ಮಾಡಿದ್ದ ಭಾಸ್ಕರ ಆಚಾರ್ಯ ಪತ್ನಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲೆಕ್ಟ್ರಿಶನ್ ಕೆಲಸ ಮಾಡುತ್ತಿದ್ದ ಭಾಸ್ಕರ ಆಚಾರ್ಯ ಮನೆ ಸಮೀಪದ ಕ್ರೈಸ್ತ ಯುವತಿ ಪ್ರೀತಾ ಎಂಬಾಕೆ ಯನ್ನು ಪ್ರೀತಿಸಿ ಮದುವೆಯಾಗಿ, ಬಗ್ವಾಡಿಯ ಇಂದಿರಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ನಂತರ ಭಟ್ಕಳದ ಲಾರಿ ಚಾಲಕರೊಬ್ಬರ ಪತ್ನಿ ಶಬಿಯಾ ಹಾಗೂ ಭಾಸ್ಕರ ಆಚಾರ್ಯರಿಗೆ ಪ್ರೀತಿ ಬೆಳೆದು, ಆಕೆ ಪತಿಯನ್ನು ಬಿಟ್ಟು ಬಂದು ಭಾಸ್ಕರ ಆಚಾರ್ಯರನ್ನು ಮದುವೆಯಾಗಿದ್ದರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







