ದೇರಳಕಟ್ಟೆ ಗ್ರೀನ್ ಗ್ರೌಂಡ್‌ನಲ್ಲಿ ಮಿಲಾದುನ್ನಬಿ

ಮಂಗಳೂರು, ಡಿ.20: ದೇರಳಕಟ್ಟೆ ಗ್ರೀನ್‌ಗ್ರೌಂಡ್‌ನ ಮನಾರುಲ್ ಹುದಾ ಮಸೀದಿ ಮತ್ತು ಮದ್ರಸ ವತಿಯಿಂದ ಮೀಲಾದುನ್ನೆಬಿ ಅಂಗವಾಗಿ ಮೌಲೂದ್ ಮಜ್ಲಿಸ್ ಮತ್ತು ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆ ಹಾಗು ಪುರಸ್ಕಾರ ಕಾರ್ಯಕ್ರಮ ನಡೆಯಿತು.
ದೇರಳಕಟ್ಟೆ ಹಿಫ್ಲುಲ್ ಕುರ್‌ಆನ್ ಕೇಂದ್ರದ ಪ್ರಾಂಶುಪಾಲ ಹಾಫಿಲ್ ಹಫೀಝ್ ನದ್ವಿ ಮೀಲಾದ್ ಸಂದೇಶಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಸೈಯದ್ ಅಲಿ ವಹಿಸಿದ್ದರು. ಮಸೀದಿಯ ಇಮಾಮ್ ಉಮರ್ ಫಾರೂಕ್ ಮುಸ್ಲಿಯಾರ್ ಉದ್ಘಾಟಿಸಿದರು.
ಸಮಾರಂಭದಲ್ಲಿ ದೇರಳಕಟ್ಟೆ ರೇಂಜ್ ವತಿಯಿಂದ ಮದ್ರಸ ಮುಅಲ್ಲಿಮ್‌ಗಳ ನೆರವಿಗಾಗಿ ರಚಿಸಲ್ಪಟ್ಟ ಕನ್ನಿಯತ್ ಅಹ್ಮದ್ ಮುಸ್ಲಿಯಾರ್ ಸ್ಮರಣಾರ್ಥ ರಿಲೀಫ್ ಫಂಡ್ ಉದ್ದೇಶಿತ ನೂತನ ಕ್ಯಾಲೆಂಡರನ್ನು ಮಾಜಿ ಗ್ರಾಪಂ ಸದಸ್ಯ ಬಿ. ಇದ್ದಿನಬ್ಬ ಅವರು ಸಂಶುಲ್ ಉಲಮಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸಿರಾಜ್ ಅಹ್ಮದ್‌ರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಸದರ್ ಮುಅಲ್ಲಿಮ್ ಅಬ್ದುಲ್ ಜಬ್ಬಾರ್ ದಾರಿಮಿ, ಮುಅಲ್ಲಿಮ್ ಅಬೂಬಕರ್ ಮುಸ್ಲಿಯಾರ್, ಹಸೈನಾರ್ ಸಕಲೇಶ್‌ಪುರ, ಅಶ್ರಫ್ ಮಂಚಿ ಪ್ರತಿಭಾ ಸ್ಪರ್ಧೆಯಲ್ಲಿ ಸಹಕರಿಸಿದರು.
ಸಮಾರಂಭದಲ್ಲಿ ಏಶಿಯನ್ ಅಹ್ಮದ್ ಹಾಜಿ ಪಿ.ಎಚ್, ಏಶಿಯನ್ ಅಬ್ದುಲ್ ರಹ್ಮಾನ್ ಹಾಜಿ ಪಿ.ಎಚ್, ಮುಹಮ್ಮದ್ ಪನೀರ್, ಕಾರ್ಯದರ್ಶಿ ಖಾಸಿಂ ಹಾಜಿ, ಸಮಸ್ತ ಮದ್ರಸ ಮ್ಯಾನೆಜ್‌ಮೆಂಟ್ ದೇರಳಕಟ್ಟೆ ಇದರ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ, ಮುನೀರ್ ಬೋಳಿಯಾರ್, ಅಬ್ದುರ್ರಝಾಕ್, ಪುತ್ತುಬಾವ ಪಿ.ಎಚ್ ಮತ್ತಿತರರು ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







