Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಬಾಲಿಶ ನಂಬಿಕೆಗಳು

ಬಾಲಿಶ ನಂಬಿಕೆಗಳು

ಚಂದ್ರಕಲಾ ನಂದಾವರಚಂದ್ರಕಲಾ ನಂದಾವರ21 Dec 2016 12:17 AM IST
share
ಬಾಲಿಶ ನಂಬಿಕೆಗಳು

ನನ್ನೂರಿನ ಬಗ್ಗೆ ನೆನಪಿಸಿಕೊಳ್ಳುತ್ತಲೇ ಬಿಚ್ಚಿಕೊಳ್ಳುವ ಸ್ನೇಹ ಸಂಬಂಧಗಳು ಹತ್ತು ಹಲವು. ಇಂದಿನ ಕಾಪಿಕಾಡು ರಸ್ತೆಯಲ್ಲಿ ಕಿರೋಡಿಯನ್ನರ ಮನೆ ಪಕ್ಕದ ಓಣಿಯ ತುತ್ತ ತುದಿಯ ಹಿತ್ತಿಲಲ್ಲಿ ತೆಂಗು, ಮಾವು, ಹಲಸಿನ ಮರಗಳಿದ್ದು ಒಂದು ದೊಡ್ಡ ಮನೆಯಿತ್ತು. ಈ ಮನೆಯ ಚಿಕ್ಕ ಹುಡುಗ ಶಿವಪ್ಪ. ಈ ಹಿತ್ತಿಲಿನ ಮುಂದಿನ ಹಿತ್ತಿಲು ಮನೆ ನನ್ನ ಅಜ್ಜನದಾಗಿದ್ದು ಇದರಲ್ಲಿ ಸ್ವಲ್ಪ ಸಮಯ ನನ್ನ ಅಪ್ಪ ಅಮ್ಮ ವಾಸ್ತವ್ಯವಿದ್ದರು ಎಂದು ತಿಳಿಸಿದ್ದೇನಲ್ಲ. ಆ ದಿನಗಳ ವಿಷಯ. ನನ್ನ ಅಪ್ಪ ಹರಿಕತೆ, ಯಕ್ಷಗಾನಗಳೆಂದು ರಾತ್ರಿ ತಡವಾಗಿ ಬರುತ್ತಿದ್ದುದರಿಂದ ನನ್ನ ಅಮ್ಮನ ಭಯ ನಿವಾರಣೆಗೆ ಜತೆಗೆ ತಮ್ಮನಂತೆ ಇದ್ದವರು ಈ ಶಿವಪ್ಪಣ್ಣ ಎಂದು ಅಮ್ಮ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು. ಮುಂದೆ ನಾನೂ ಅವರನ್ನು ನೋಡಿದ್ದೆ.

ನಾನು ಹೈಸ್ಕೂಲು ಸೇರಿದ ಮೇಲೆ ಈ ಮನೆಗೆ ಹೆಚ್ಚು ಬಾರಿ ಹೋಗುವಂತಾದುದು ಶಿವಪ್ಪಣ್ಣನ ಅಕ್ಕಂದಿರ ಮಕ್ಕಳು ಮುಖ್ಯವಾಗಿ ಶಶಿಕಲಾ, ಉಮಾ ಸುಂದರಿಯರು ನನ್ನ ಸ್ನೇಹಿತೆಯರಾದಾಗ. ನಾವು ಜತೆಯಾಗಿ ಎಸೆಸೆಲ್ಸಿ ಪರೀಕ್ಷೆಗೆ ಓದುತ್ತಿದ್ದೆವು. ಶನಿವಾರ ಆದಿತ್ಯವಾರಗಳಂದು ನಮ್ಮ ಮನೆಯಲ್ಲಿ ಅಥವಾ ಅವರ ಮನೆಯಲ್ಲಿ ಮರಗಳ ಬುಡದಲ್ಲಿ, ಒಮ್ಮೆಮ್ಮೆ ಸ್ವಲ್ಪ ಎತ್ತರದ ಗೆಲ್ಲುಗಳಲ್ಲಿ ಕುಳಿತು ಗಟ್ಟಿಯಾಗಿ ಓದುತ್ತಿದ್ದುದನ್ನು ನೆನಪಿಸಿಕೊಳ್ಳುವುದೇ ಈಗ ತುಂಬಾ ಖುಷಿಯ ವಿಚಾರ. ಆದ್ದರಿಂದಲೇ ಎಸೆಸೆಲ್ಸಿಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬಂದು ನಾನು ಮತ್ತು ಉಮಾ ಸುಂದರಿ ಅಂದಿನ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪಿಯುಸಿ ತರಗತಿಗೆ ಸೇರಿದೆವು. ಹೀಗೆ ಓದಿಕೊಳ್ಳಲು ಪರಸ್ಪರ ಹೋಗಿ ಬರುತ್ತಿದ್ದ ದಿನಗಳಲ್ಲಿ ಒಮ್ಮಿಮ್ಮೆ ಮಧ್ಯಾಹ್ನದ ಊಟವೂ ನಮ್ಮ ಮನೆಯಲ್ಲಿ ಅಥವಾ ಅವರ ಮನೆಯಲ್ಲಿ ಜತೆಯಾಗಿಯೇ ಆಗುತ್ತಿತ್ತು. ನಾನು ಸಸ್ಯಾಹಾರಿಯಾದುದರಿಂದ ಅವರ ಮನೆಯಲ್ಲಿ ನನಗಾಗಿ ಪ್ರತ್ಯೇಕ ತರಕಾರಿ ಅಡುಗೆ ಮಾಡಬೇಕಾಗುತ್ತಿತ್ತು. ನಮ್ಮ ಮನೆಯಲ್ಲಿ ಸಸ್ಯಾಹಾರದ ಅಡುಗೆಗೆ ಅವಳದೇನೂ ತಕರಾರು ಇಲ್ಲ. ಬದಲಿಗೆ ತುಂಬ ಚೆನ್ನಾಗಿತ್ತು ಎನ್ನುವ ಮೆಚ್ಚುಗೆ ಬೇರೆ. ಇಂದು ಭೇಟಿಯಾಗುವ ಸಂದರ್ಭಗಳಲ್ಲಿ ಒಂದು ವಿಶಿಷ್ಟ ಸಂದರ್ಭ ನಮ್ಮ ಪಾಲಿಗೆ ಸೃಷ್ಟಿಯಾಯಿತು. ನಾವು ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆಯ 1966ರ ಎಸೆಸೆಲ್ಸಿ ತರಗತಿಯ ಒಡನೋದಿಗಳು ಪರಸ್ಪರರನ್ನು ಹುಡುಕಿ ಭೇಟಿಮಾಡುವ ಕಾಯಕ ಶುರು ಮಾಡಿದ್ದೇವೆ. ಇಂತಹ ಒಂದು ಸೌಹಾರ್ದಕೂಟದಲ್ಲಿ ನಮ್ಮ ನಮ್ಮ ಹಳೆಯ ನೆನಪುಗಳನ್ನು ಬಿಚ್ಚಿದಾಗ ಉಮಾಸುಂದರಿ ಹೇಳಿದ ಮಾತು ಕೇಳಿ ನನಗೆ ನಗುವೇ ನಗು. ಅದು ಏನೆಂದರೆ ಉಮಾ ಸುಂದರಿ ನಮ್ಮ ಮನೆಗೆ ಬರುವಾಗ ಅಂದು ಆಕೆ ಮೀನಿನ ಊಟ ಮಾಡಿದ್ದರೆ ಚೆನ್ನಾಗಿ ಬಾಯಿ ತೊಳೆದು ಬರುತ್ತಿದ್ದಳಂತೆ. ಹೇಗೆ ಅನ್ನುತ್ತೀರಾ? ಸೋಪ್ ನೀರಿನಲ್ಲಿ ಬಾಯಿ ಮುಕ್ಕುಳಿಸಿಕೊಳ್ಳುತ್ತಿದ್ದಳಂತೆ. ಕೇಳಿದವರು ಬಿದ್ದು ಬಿದ್ದು ನಕ್ಕರು. ನಾನಾದರೋ ‘ಅಯ್ಯೋ ದೇವರೇ ಹೀಗೆ ಮಾಡುತ್ತಿದ್ದೆಯಾ?’ ಎಂದು ಬೇಸರಪಟ್ಟರೆ, ಇಂದು ನನ್ನ ಮನೆ ಮಂದಿ ಸಸ್ಯಾಹಾರಿಗಳಾಗಿ ಉಳಿದಿಲ್ಲ ಎಂದು ತಿಳಿದು ಅವಳಿಗೆ ಆಶ್ಚರ್ಯ. ಆದರೆ ಈಗ ಅವಳಿಗೂ ಲೋಕಜ್ಞಾನವಿದೆ. ಆಹಾರಕ್ಕೂ ಜನಿವಾರಕ್ಕೂ ಸಂಬಂಧವಿಲ್ಲ. ಆಹಾರ ಅವರ ಇಚ್ಛೆ. ಅವರ ಆಯ್ಕೆ ಎನ್ನುವುದು ಸಾಮಾನ್ಯ ವಿಷಯವಾಗಿದೆ. ಹಾಗೆಯೇ ಜಾತಿ ಧರ್ಮಗಳು ಆಹಾರದ ಮೇಲೆ ನಿಂತಿಲ್ಲ ಎನ್ನುವ ಜಾಗತಿಕ ಸತ್ಯದ ಅರಿವು, ಪ್ರತಿಭೆಗೂ, ಸಾಮಾರ್ಥ್ಯಕ್ಕೂ, ಆಹಾರಕ್ಕೂ ತಾಳೆ ಹಾಕಲು ಸಾಧ್ಯವಿಲ್ಲ ಎನ್ನುವುದೂ ತಿಳಿದಿದೆ. ನಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಆಹಾರ ಕ್ರಮಗಳ ಇತಿಹಾಸ ಕೆದಕಿದರೆ ಸಿಗುವ ಸತ್ಯಗಳು ವಿಚಿತ್ರವಾಗಿವೆ ಎಂಬ ತಿಳುವಳಿಕೆ ನನ್ನದು. ಆಹಾರ ಕ್ರಮ ಅಥವಾ ಆಯ್ಕೆ ಹಸಿವೆಗಾಗಿ ಎಂಬ ಕಠೋರ ವಾಸ್ತವದ ಮುಂದೆ ಉಳಿದೆಲ್ಲ ಆದರ್ಶಗಳು ಹುಸಿಯಾಗುತ್ತವೆ. ಹಾಗೆಯೇ ಇಂದು ಕೌಟುಂಬಿಕ ಕಾರ್ಯಕ್ರಮಗಳು ಸಾರ್ವಜನಿಕ ಸಮಾರಂಭವಾಗುತ್ತಿರುವ ಸನ್ನಿವೇಶಗಳಲ್ಲಿ ಆಹಾರ ಸಹಿಷ್ಣುತೆಯನ್ನು ಪಾಲಿಸುವ ಮಂದಿಗೆ ಕೃತಜ್ಞತೆ ಹೇಳಲೇ ಬೇಕು.

 ಆ ದಿನಗಳಲ್ಲಿ ಬಿಲ್ಲವ ಸಮುದಾಯದ ಮಂದಿಗೆ ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ ಎನ್ನುವುದಕ್ಕೆ ನನ್ನ ಶಾಲಾ ದಿನದ ಒಂದು ಅನುಭವವೇ ಸಾಕ್ಷಿ. ನಾವು ವಿದ್ಯಾರ್ಥಿಗಳು ಅಧ್ಯಾಪಕ ಅಧ್ಯಾಪಿಕೆಯರ ಸಹಿತ ಮೂಡುಬಿದಿರೆ, ಕಾರ್ಕಳ, ಧರ್ಮಸ್ಥಳಕ್ಕೆ ಪ್ರವಾಸ ಹೊರಟೆವು. 5ರಿಂದ 8ನೆ ತರಗತಿಯ ವರೆಗಿನ ವಿದ್ಯಾರ್ಥಿಗಳು. ಇವರಲ್ಲಿ ಹುಡುಗರೇ ಹೆಚ್ಚು. ಯಾಕೆಂದರೆ 7, 8ನೆ ತರಗತಿಯ ಹುಡುಗಿಯರಿಗೆ ಅವಕಾಶವಿರಲಿಲ್ಲ. 5ನೆ ಮತ್ತು 6ನೆ ತರಗತಿಯ ಹುಡುಗಿಯರಲ್ಲೂ ಕೆಲವರಿಗೆ ಮಾತ್ರ ಅವಕಾಶ. ಅಂದರೆ ಅವರು ಇನ್ನೂ ಹತ್ತು ಹನ್ನೊಂದು ವಯಸ್ಸಿನ ಒಳಗಿನವರು. ಯಾಕೆ ಹೀಗೆ ಎನ್ನುವುದನ್ನು ಪ್ರವಾಸದ ಕೊನೆಯಲ್ಲಿ ತಿಳಿಸುತ್ತೇನೆ. ಬಸ್ಸು ತುಂಬಾ ತುಂಬಿದ್ದ ತಂಡದಲ್ಲಿ ವಿದ್ಯಾರ್ಥಿಗಳೊಂದಿಗೆ ಬ್ರಾಹ್ಮಣ, ಇತರ ಹಿಂದೂಗಳು, ಕ್ರಿಶ್ಚಿಯನ್, ಮುಸ್ಲಿಂ ಶಿಕ್ಷಕ, ಶಿಕ್ಷಕಿಯರು ಇದ್ದರು. ಮೂಡುಬಿದರೆಯ ಸಾವಿರ ಕಂಬದ ಬಸದಿಯನ್ನು ನೋಡಿ ಶಿಲ್ಪಕಲೆಗೆ ಬೆರಗಾದೆವು. ಕೆಲವರಿಗೆ ಕಂಬಗಳನ್ನು ಎಣಿಸುವ ಉತ್ಸಾಹ. ಅಷ್ಟರಲ್ಲಿ ಯಾರೋ ಹೇಳಿದರು. ‘‘ಕಂಬಗಳನ್ನು ಎಣಿಸಬೇಡಿ. ಹಿಂದೆ ಯಾರೋ ಎಣಿಸಿದಾಗ ಒಂದು ಕಂಬ ಕಡಿಮೆ ಇತ್ತಂತೆ. ಆಗ ಎಣಿಸಿದವನೇ ಕಲ್ಲಿನ ಕಂಬವಾಗಿ ಬಿಟ್ಟನಂತೆ’’ ಎಂದು ಮಕ್ಕಳ ಕುತೂಹಲದ ಬುದ್ಧಿಗೆ ಭಯವನ್ನುಂಟುಮಾಡಿ ಶೋಧ ಪ್ರವೃತ್ತಿಗೆ ಅಥವಾ ಸತ್ಯದ ಹುಡುಕಾಟಕ್ಕೆ ತೆರೆ ಎಳೆದರು. ಬಹುಶಃ ಶಿಕ್ಷಣದಲ್ಲಿ ಇಂತಹ ಅನೇಕ ಮೂಢ ನಂಬಿಕೆಗಳು ನುಸುಳುವುದರಿಂದಲೇ ‘ಮಕ್ಕೀ ಕಾ ಮಕ್ಕಿ’ಯಂತಹ ಪ್ರವೃತ್ತಿ ಬೆಳೆದು ನಿಜವಾದ ಅರ್ಥದ ಜ್ಞಾನ, ಸಂಶೋಧನೆಗಳು ಈ ದೇಶದಲ್ಲಿ ನಡೆಯುವುದು ಸಾಧ್ಯವಿಲ್ಲ ಅನ್ನಿಸುತ್ತದೆ ಇರಲಿ. ಮುಂದೆ ಕಾರ್ಕಳದ ಗೊಮ್ಮಟೇಶ್ವರನನ್ನು ಕಂಡಾಗ ಹುಡುಗರಿಗೆ ನಾಚಿಕೆಯಾಗುವ ಬದಲು ನಮಗೆ ಹುಡುಗಿಯರಿಗೇ ನಾಚಿಕೆ ಎನ್ನಿಸಿದ್ದು ಯಾಕೆ ಎಂದು ನನಗೆ ಈಗಲೂ ಆಶ್ಚರ್ಯವೇ? ನಮ್ಮ ಕನ್ನಡದ ಅಧ್ಯಾಪಕ ಗುರುವಪ್ಪ ಮಾಸ್ತರರು ಭರತ-ಬಾಹುಬಲಿಯವರ ಕತೆಯನ್ನು ತಿಳಿಸಿ ಬಾಹುಬಲಿ ಯಾಕೆ ಗೊಮ್ಮಟನ ಹಾಗೆ ನಿಂತಿದ್ದಾನೆ ಎಂಬುದನ್ನು ತಿಳಿಸಿದರು. ಗೆದ್ದ ರಾಜ್ಯವನ್ನು ತಿರುಗಿ ಕೊಟ್ಟ ಈ ತಮ್ಮ ಅಣ್ಣನಿಗಿಂತ ಹಿರಿಯವನಾಗಿ ಮೆಚ್ಚುಗೆಯಾದ. ಜತೆಗೆ ಕಾರ್ಕಳದ ಈ ಗೊಮ್ಮಟೇಶ್ವರನನ್ನು ಕೆತ್ತಿದ ಶಿಲ್ಪಿಯ ಕೈ ಕತ್ತರಿಸಿದ ಕೃತಜ್ಞತೆಯಿಂದ ರಾಜನು ‘ಅಹಿಂಸೆಯೇ ಪರಮ ಧರ್ಮ’ ಎಂಬ ಧರ್ಮವನ್ನೇ ಕತ್ತರಿಸಿ ತುಂಡರಿಸಿದ ಕ್ರೂರಿ ಎಂಬಂತೆ ಗೋಚರಿಸಿದ. ಮುಂದಿನ ನಮ್ಮ ಪ್ರಯಾಣ ಧರ್ಮಸ್ಥಳಕ್ಕೆ. ಧರ್ಮಸ್ಥಳ ಬಹಳ ಕಾರಣಿಕದ ಕ್ಷೇತ್ರ ಎಂದು ಅದಾಗಲೇ ಪ್ರಸಿದ್ಧವಾಗಿತ್ತು.

ಯಾವುದೇ ಊರಲ್ಲಿ ಸತ್ಯವನ್ನು ಸಮರ್ಥಿಸಿ ಹೇಳಬೇಕಾದ ಸಂದರ್ಭ ಬಂದಾಗ ‘ಆ ಮಂಜುನಾಥನೇ ನೋಡಲಿ’ ಎಂದು ಹೇಳಿದರೆ ಅದರ ಪರಿಣಾಮ ತಪ್ಪಿದಲ್ಲ ಎನ್ನುವುದು ಜನರ ನಂಬಿಕೆ. ಹಾಗೆಯೇ ಈ ನಂಬಿಕೆ ಯನ್ನು ಬಲಪಡಿಸುವ ಶಕ್ತಿ ಇದ್ದುದು ಅಲ್ಲಿನ ಕ್ಷೇತ್ರ ದೈವವಾಗಿದ್ದ ಅಣ್ಣಪ್ಪನಿಗೆ ಎನ್ನುವುದು ಕೂಡ ಇನ್ನೊಂದು ನಂಬಿಕೆ. ಅವರವರ ನಂಬಿಕೆ ಅವರವರಿಗೆ. ದೇವಸ್ಥಾನದ ಒಳಗೆ ಪ್ರವೇಶಿಸಲು ಸರತಿ ಸಾಲಲ್ಲಿ ನಿಲ್ಲುವಾಗ ಒಳಗೆ ಬರಲಾಗದವರು ಹೊರಗೇ ಉಳಿದರು. ಅಂದರೆ ಬಿಲ್ಲವ ಸಮುದಾಯದ ಮತ್ತು ದಲಿತ ಸಮುದಾಯದ ಹುಡುಗ ಹುಡುಗಿಯರು ಹಾಗೂ ಈ ಸಮುದಾಯದ ಇಬ್ಬರು ಅಧ್ಯಾಪಕರು. ಉಳಿದ ನಾವೆಲ್ಲ ಅಂದರೆ ಕ್ರಿಶ್ಚಿಯನ್, ಮುಸ್ಲಿಂ ಜನಾಂಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕಿಯರು ಸೇರಿದಂತೆ ಬ್ರಾಹ್ಮಣರು ಹಾಗೂ ಇತರ ಹಿಂದೂಗಳು ದೇವರ ದರ್ಶನ ಮಾಡಿ ಬಂದೆವು. ಇದು ಯಾಕೆ ಹೀಗೆ ಎಂಬ ಪ್ರಶ್ನೆಗೆ ಅಲ್ಲಿ ಯಾರನ್ನೂ ಕೇಳಲೂ ಸಾಧ್ಯವಾಗಲಿಲ್ಲ. ಒಳಹೋದವರಿಗೆ ಒಂದು ರೀತಿಯ ಬೇಸರ. ಹೊರಗೆ ಇದ್ದವರಿಗೂ ಬೇಸರ. ಸಹಪಾಠಿಗಳಲ್ಲಿ ಕೇಳಿದರೆ ಕೆಲವರು ಗೊತ್ತಿಲ್ಲ ಎಂದುತ್ತರಿಸಿದರೆ, ಇನ್ನು ಕೆಲವು ಅದನ್ನೆಲ್ಲ ಇಲ್ಲಿ ಹೇಳಬಾರದು ಎಂದು ಭಯಪಟ್ಟುಕೊಂಡರು. ನನ್ನ ಕುತೂಹಲಕ್ಕೆ ಉತ್ತರ ದೊರಕಿದ್ದು ಮನೆಗೆ ಬಂದ ಮೇಲೆ ಅಪ್ಪನಲ್ಲಿ ವಿಚಾರಿಸಿದಾಗ. ಅದರ ಜತೆಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲದ ಬಿಲ್ಲವ ಸಮುದಾಯದವರಿಗಾಗಿ ಕೇರಳದ ಮಹಾತಪಸ್ವಿ, ಜ್ಞಾನಿ, ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳು ಮಂಗಳೂರಿಗೆ ಬಂದು ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ಸ್ಥಾಪಿಸಿದ್ದನ್ನು ತಿಳಿಸಿದರು. ನಾವು ಮನೆ ಮಂದಿ ಕದ್ರಿ ದೇವಸ್ಥಾನಕ್ಕೆ ಗ್ರಾಮದ ದೇವಸ್ಥಾನ ಎಂಬಂತೆ ಸಾಂದರ್ಭಿಕವಾಗಿ ಹೋಗಿ ಬರುತ್ತಿದ್ದರೆ ಉಳಿದಂತೆ ಹೋಗುತ್ತಿದ್ದ ದೇವಸ್ಥಾನಗಳೆರಡು. ಅವುಗಳಲ್ಲಿ ಒಂದು ಗೋಕರ್ಣನಾಥೇಶ್ವರವಾದರೆ ಇನ್ನೊಂದು ಉರ್ವ ಮಾರಿಯಮ್ಮನ ಗುಡಿ. ಈ ಎರಡೂ ದೇವಸ್ಥಾನಗಳಲ್ಲೂ ಯಾರಿಗೂ ಪ್ರವೇಶವಿಲ್ಲ ಎಂದು ನಿಷೇಧವಿರಲಿಲ್ಲ. ಮಾರಿಯಮ್ಮನ ಗುಡಿಯಲ್ಲಿ ಹಿಂದೆ ಕೋಣ ಬಲಿ ನಡೆಯುತ್ತಿತ್ತು ಎಂದು ತಿಳಿಸಿದರೆ ಈಗ ಕೋಳಿಯನ್ನು ಜನರೇ ಒಯ್ದು ತಾವೇ ಕೊಯ್ದು ಬಲಿ ಎಂದರ್ಪಿಸಿ ಅದನ್ನು ಮನೆಯಲ್ಲಿ ಅಡುಗೆ ಮಾಡಿ ಮಾರಿಯಮ್ಮನ ಹಬ್ಬ ಆಚರಿಸುತ್ತಿದ್ದುದು ಇತ್ತು. ಈ ಮಾರಿಯಮ್ಮನ ದೇವಸ್ಥಾನವು ವಿಶೇಷವಾಗಿ ಮೊಗವೀರರಿಗೆ ಸೇರಿದ ದೇವಸ್ಥಾನವಾಗಿತ್ತು ಎನ್ನುವುದು ತಿಳಿಯಿತು. ಹೀಗೆ ಒಂದೊಂದು ಜಾತಿಗೆ ಒಂದೊಂದು ದೇವಸ್ಥಾನಗಳಿರುವುದು ಹಿಂದೂ ಧರ್ಮದ ವೈಶಿಷ್ಟವೋ ಅಥವಾ ವೈಚಿತ್ರವೋ ಎಂದು ನಾನು ಹೇಳಲು ಸಾಧ್ಯವಾದರೂ ಅಂದು ನನಗೆ ಇದೆಂತಹ ವಿಚಿತ್ರವಪ್ಪ ಎಂದು ಆಶ್ಚರ್ಯವಾದುದು ಸುಳ್ಳಲ್ಲ.

ಹಿಂದೂಗಳೇ ಅನ್ನಿಸಿದವರಿಗೆ ಪ್ರವೇಶವಿಲ್ಲದ ದೇವಸ್ಥಾನಗಳಲ್ಲಿ ಕ್ರಿಶ್ಚಿಯನ್, ಮುಸ್ಲಿಂ ಜನರಿಗೆ ಪ್ರವೇಶ ಇದ್ದುದು ಧರ್ಮಗಳ ಸಾಮರಸ್ಯವೇ. ಆದರೂ ಹಿಂದೂಗಳ ಒಳಗೆ ಈ ತಾರತಮ್ಯ ಭಾವನೆಯನ್ನು ಹುಟ್ಟು ಹಾಕಿದವರು ಯಾರು ಎನ್ನುವ ನನ್ನ ಪ್ರಶ್ನೆ ಮಾತ್ರ ಹಾಗೆಯೇ ಉಳಿಯಿತು ಎಂದರೆ ತಪ್ಪಲ್ಲ. ಇದೇ ಹೊತ್ತಿಗೆ ಇನ್ನೊಂದು ಮಾತು ನೆನಪಾಗುತ್ತದೆ. ನನ್ನೂರಿನ ಕ್ರಿಶ್ಚಿಯನ್ನರು ಬ್ರಾಹ್ಮಣರನ್ನು ಬ್ರಾಹ್ಮಣರೆಂದೇ ಹೇಳುತ್ತಿದ್ದರು. ಬ್ರಾಹ್ಮಣರಲ್ಲದವರನ್ನು ಹಿಂದೂಗಳೆನ್ನುತ್ತಿದ್ದರು. ಹಾಗಾದರೆ ಬ್ರಾಹ್ಮಣರು ಹಿಂದೂಗಳಲ್ಲವೇ? ಎನ್ನುವುದು ನನಗೆ ಇನ್ನೊಂದು ಪ್ರಶ್ನೆಯಾಗಿ ಕಾಡುತ್ತಿತ್ತು. ಈ ಹಿಂದೂಗಳು ಎನ್ನುವವರು ಅವರವರ ಕುಲದ ದೈವಗಳನ್ನು ಆರಾಧಿಸುವ ಅಂದರೆ ಕೋಲ, ನೇಮ, ಮಾರಿಪೂಜೆಗಳನ್ನು ಆಚರಿಸುವ ಮಂದಿ. ಬ್ರಾಹ್ಮಣರು ಇವುಗಳನ್ನು ಆರಾಧಿಸುತ್ತಿರಲಿಲ್ಲ. ಆಚರಣೆಗಳನ್ನು ಮಾಡುತ್ತಿರಲಿಲ್ಲ. ಅವರು ದೇವಸ್ಥಾನಗಳಿಗೆ ಹೋಗುತ್ತಿದ್ದವರು. ಅವರಿಗೆ ಅಲ್ಲಿ ದೇವರ ದರ್ಶನದೊಂದಿಗೆ ಭೋಜನ ಭಾಗ್ಯವೂ ಇರುತ್ತಿತ್ತು. ಉಳಿದ ಹಿಂದೂಗಳಿಗೆ ಅವರು ದೇವಸ್ಥಾನಕ್ಕೆ ಒಯ್ದ ಹಣ್ಣುಕಾಯಿಗಳಲ್ಲೂ ಅರ್ಧಭಾಗ ಪ್ರಸಾದವಾಗಿ ದೊರಕಿದರೆ ಉಳಿದ ಅರ್ಧ ಪಾಲು ದೇವರಿಗೆ ನೈವೇದ್ಯ. ಆದರೆ ಆ ಕಲ್ಲಿನ ದೇವರು ತಿನ್ನುವುದಿಲ್ಲವಲ್ಲ? ಮತ್ತೆ ಯಾರಿಗೆ? ಪುನಃ ನನ್ನಲ್ಲಿ ಪ್ರಶ್ನೆಯೇ!
ಹಾಂ. ಅಂದ ಹಾಗೆ ಪ್ರವಾಸಕ್ಕೆ ಹುಡುಗಿಯರು ಯಾಕೆ ಹೆಚ್ಚು ಸಂಖ್ಯೆಯಲ್ಲಿರಲಿಲ್ಲ ಎನ್ನುವುದನ್ನು ಮತ್ತೆ ಹೇಳುತ್ತೇನೆ ಎಂದಿದ್ದೇನಲ್ಲ. ಈಗ ಹೇಳುತ್ತಿದ್ದೇನೆ. ಇದು ನಾವು ಬರುವಾಗ ಹುಡುಗಿಯರೇ ಮಾತಾಡಿಕೊಂಡುದು. ಈ ಬಗ್ಗೆ ನನ್ನ ಮನೆಯಲ್ಲಿ ಯಾರೂ ಏನೂ ಹೇಳಿರ ಲಿಲ್ಲ. ನಾನು ಮೈ ನೆರೆದಿದ್ದ ಹುಡುಗಿಯಲ್ಲದೆ ಚಿಕ್ಕ ವಯಸ್ಸಿನವಳಾದುದಕ್ಕೆ ಹೋಗಿದ್ದಿರಬಹುದು. ಆದರೆ ಆ ವಯಸ್ಸಿಗೆ ಹತ್ತಿರದ ಹುಡುಗಿಯರು ಹೋಗಬಾರದು ಎಂಬುದಕ್ಕೆ ಕಾರಣ ಹೀಗಿದೆ. ಮೈ ನೆರೆಯಬಹುದಾದ ವಯಸ್ಸಿನ ಹುಡುಗಿಯರು ಧರ್ಮಸ್ಥಳಕ್ಕೆ ಹೋದರೆ ಅಕಸ್ಮಾತ್ ಅಲ್ಲಿ ಮೈನೆರೆದರೆ ಆಕೆಯನ್ನು ಅಲ್ಲಿಯೇ ಬಿಟ್ಟು ಬರಬೇಕಂತೆ. ಈ ಕಾರಣಕ್ಕಾಗಿಯೇ ಹೆತ್ತವರು ಹುಡುಗಿಯರನ್ನು ಕಳುಹಿಸುವುದಿಲ್ಲ ಎಂದು ತಿಳಿಯಿತು. ಬಿಟ್ಟು ಬಂದ ಹುಡುಗಿಯರು ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಅಲ್ಲಿ ಚಾಕರಿ ಅಂದರೆ ದೇವರ ಸೇವೆ ಮಾಡುತ್ತಾರೆ ಎಂಬುದು ಉತ್ತರ. ಹೀಗೆ ಯಾರಾದರೂ ಉಳಿದಿರಬಹುದಾದ ಘಟನೆಗಳು ನಡೆದಿವೆಯೇ ಎಂದರೆ ಯಾರಿಗೂ ಗೊತ್ತಿಲ್ಲ. ಅಂತೂ ಹೀಗೊಂದು ನಂಬಿಕೆ. ಈ ನಂಬಿಕೆ ಮೂಢವಾಗಿರಲೇ ಬೇಕು.
ಇಂತಹ ನಂಬಿಕೆಗಳು ನಂಬಿಕೆಗಳ ಇತಿಹಾಸದಲ್ಲಿ ಬಾಲಿಶಗಳಾದುದು. ಅಂದರೆ ತಿಳುವಳಿಕೆಯಿಲ್ಲದವುಗಳು. ಮಕ್ಕಳ ನಂಬಿಕೆಗಳಂತೆ. ತಿಳುವಳಿಕೆ ಹೆಚ್ಚಾದಂತೆ ಅವುಗಳ ಸತ್ಯಾಸತ್ಯತೆಯೊಂದಿಗೆ ಮುಖಾಮುಖಿಯಾಗಿ ನಮ್ಮನ್ನು ಬಿಟ್ಟು ಹೋಗಬೇಕಾಗಿರುವಂತಹುದು. ನಮ್ಮ ಕಾಲದ ಇಂತಹ ಮೂಢನಂಬಿಕೆಗಳು ಇಂದಿನ ಮಕ್ಕಳಿಗೆ ತಿಳಿದಿರಬಾರದು ಎನ್ನುವುದರಲ್ಲಿ ಸಮಾಧಾನವಿದೆ. ಆದರೆ ಇಂದಿನ ಮಕ್ಕಳು ಹೊಸದಾದ ಇನ್ನೆಷ್ಟೋ ನಂಬಿಕೆಗಳನ್ನು ಹುಟ್ಟು ಹಾಕಿಕೊಂಡಿರುತ್ತಾರೆ ಎನ್ನುವುದು ಕೂಡ ನಿಜ. ಇರಲಿ ಆದರೆ ಇಂತಹ ಬಾಲಿಶ ನಂಬಿಕೆಗಳನ್ನು ತಿಳುವಳಿಕೆ ಹೆಚ್ಚಾದಂತೆ ಬಿಟ್ಟು ನಿರಾಳವಾಗಬೇಕಲ್ಲದೆ ಮೂಢನಂಬಿಕೆಗಳಿಗೆ ಭಯಪಟ್ಟು ಬದುಕನ್ನು ಅತಂತ್ರವಾಗಿಸಿಕೊಳ್ಳಬಾರದು ಅಲ್ಲವೇ?

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

share
ಚಂದ್ರಕಲಾ ನಂದಾವರ
ಚಂದ್ರಕಲಾ ನಂದಾವರ
Next Story
X