ಅಕ್ಕರಂಗಡಿಯಲ್ಲಿ ಮೀಲಾದ್ ಮೆಹಫಿಲ್

ಬಂಟ್ವಾಳ, ಡಿ.20: ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ವತಿಯಿಂದ ಮೀಲಾದ್ ಮೆಹಫಿಲ್ ಹಾಗೂ ಇತ್ತೀಚೆಗೆ ನಿಧನರಾದ ಶೈಖುನಾ ಕುಮರಂಪುತ್ತೂರು ಎ.ಪಿ.ಮುಹಮ್ಮದ್ ಮುಸ್ಲಿಯಾರ್‌ರ ಅನುಸ್ಮರಣಾ ಕಾರ್ಯಕ್ರಮವು ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಸ್ಥಳೀಯ ಖತೀಬ್ ಕೆ.ಎಸ್.ಇಸ್ಮಾಯೀಲ್ ದಾರಿಮಿ ಅಕ್ಕರಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ, ನಂದಿ ದಾರುಸ್ಸಲಾಂ ವಿವಿಯ ಕಾರ್ಯದರ್ಶಿ ಶೈಖುನಾ ಎ.ವಿ.ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಅನುಸ್ಮರಣಾ ಭಾಷಣ ಮಾಡಿದರು. ಎಸ್.ಬಿ.ಮುಹಮ್ಮದ್ ದಾರಿಮಿ ಪುತ್ತೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ದಕ್ಷಿಣ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ತೋಡಾರು ಶಂಸುಲ್ ಉಲಮಾ ಕಾಲೇಜಿನ ಕೆ.ಎಂ. ಉಸ್ಮಾನುಲ್ ಫೈಝಿ, ದಾರಿಮಿ ಉಲಮಾ ಒಕ್ಕೂಟದ ಗಲ್ಫ್ ಆರ್ಗನೈಝರ್ ಕೆ.ಪಿ.ಅಬ್ದುಲ್ ರಹ್ಮಾನ್ ದಾರಿಮಿ ತಬೂಖ್‌ರವರು ಮದ್ಹುರ್ರಸೂಲ್ ಭಾಷಣ ಮಾಡಿದರು.
ಕೆ.ಎಸ್.ಹೈದರ್ ದಾರಿಮಿ ಕಲ್ಲಡ್ಕ ದುಆ ನೆರವೇರಿಸಿದರು. ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ ಹಾಗೂ ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಪ್ರಾಸ್ತಾವಿಕ ಭಾಷಣ ಮಾಡಿದರು. ಸೈಯದ್ ಝೈನುಲ್ ಆಬಿದ್ ಜಿಫ್ರಿ ದಾರಿಮಿ ತಂಙಳ್, ಸೈಯದ್ ಅಮೀರ್ ತಂಙಳ್ ಕಿನ್ಯ, ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಹಾಜಿ ಕೆ.ಎಸ್.ಇಸ್ಮಾಯೀಲ್ ಕಲ್ಲಡ್ಕ, ಹಾಜಿ ಜಿ.ಅಬೂಬಕರ್‌ಗೋಳ್ತಮಜಲು, ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್, ಮಫತ್ತಿಶ್ ಹನೀಫ್ ಮುಸ್ಲಿಯಾರ್, ಬಿ.ಎಚ್.ಖಾದರ್ ಬಂಟ್ವಾಳ, ಆದಂ ದಾರಿಮಿ ಅಜ್ಜಿಕಟ್ಟೆ, ಇಬ್ರಾಹೀಂ ದಾರಿಮಿ ಕಡಬ, ಉಮರ್‌ಫೈಝಿ ಸಾಲ್ಮರ, ಅಬ್ಬಾಸ್ ಮದನಿ ಗಟ್ಟಮನೆ, ಉಮರ್ ದಾರಿಮಿ ಪಟ್ಟೋರಿ, ಅಬ್ಬಾಸ್ ದಾರಿಮಿ ಕೆಲಿಂಜ, ಅಬೂಸಾಲಿಹ್ ಫೈಝಿ, ಆದಂ ಫೈಝಿ, ಮುಸ್ತಫಾ ಫೈಝಿ ಕಿನ್ಯ, ಖಾಸಿಂ ದಾರಿಮಿ, ಕೆ.ವಿ. ಮಜೀದ್ ದಾರಿಮಿ ಗುರುಪುರ, ಸಿತಾರ್ ಮಜೀದ್ ಹಾಜಿ, ನಝೀರ್ ಉಳ್ಳಾಲ, ಖಾದರ್‌ಮಾಸ್ಟರ್ ಬಂಟ್ವಾಳ, ಹಾಜಿ ಶಾಹುಲ್ ಹಮೀದ್ ಮೆಟ್ರೋ, ಅಬೂ ಸಾಲಿಹ್ ಹಾಜಿ ಕಿನ್ಯ, ಹಾಜಿ ಶರೀಫ್ ಮೂಸಾ ಕುದ್ದುಪದವು, ಅಕ್ಕರಂಗಡಿ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಞಿ, ಕಾರ್ಯದರ್ಶಿ ಪಿ.ಜೆ.ಅಬ್ದುಲ್ ರಹ್ಮಾನ್, ಇಕ್ಬಾಲ್ ಅಕ್ಕರಂಗಡಿ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಅಶ್ರಫ್ ಹಾಜಿ ಪೆದಮಲೆ, ಅಬ್ದುಲ್ ಶುಕೂರು ಹಾಜಿ ರೆಂಜಲಾಡಿ, ಹಾಜಿ ನೌಷಾದ್ ಸೂರಲ್ಪಾಡಿ, ರಶೀದ್ ಹಾಜಿ ಪರ್ಲಡ್ಕ, ನಝೀರ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ನಡೆದ ಅಕ್ಕರಂಗಡಿ ದರ್ಗಾ ಶರೀಫ್ ಝಿಯಾರತ್‌ಗೆ ಮಾಹಿನ್ ದಾರಿಮಿ ಪಾತೂರು ನೇತೃತ್ವ ನೀಡಿದರು.
ಅಬೂಬಕರ್ ದಾರಿಮಿ ವಳಚ್ಚಿಲ್ ಕಿರಾಅತ್ ಪಠಿಸಿದರು. ದಾರಿಮಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಸ್ವಾಗತಿಸಿದರು. ಶುಕೂರು ದಾರಿಮಿ ನೆಹರು ನಗರ ಕಾರ್ಯಕ್ರಮ ನಿರೂಪಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







