ಜೀವಾವಧಿ ಸಜೆ ವಿಧಿಸುವಾಗ ‘ಕಠಿಣ’ ಪದ ಬಳಕೆಯ ಪರಿಶೀಲನೆಗೆ ಸುಪ್ರೀಂ ಅಸ್ತು

ಹೊಸದಿಲ್ಲಿ,ಡಿ.21 : ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಹೊಂದಿರುವ ನ್ಯಾಯಾಲಯಗಳಿಗೆ ಜೀವಾವಧಿ ಸಜೆ ವಿಧಿಸುವ ಸಂದರ್ಭದಲ್ಲಿ ‘ಕಠಿಣ’ ಎಂಬ ಪದ ಬಳಸಬಹುದೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ
ನ್ಯಾಯಮೂರ್ತಿ ಪಿ. ಸಿ. ಘೋಷ್ ನೇತೃತ್ವದ ನ್ಯಾಯಪೀಠ ಈ ವಿಚಾರವನ್ನು ಪರಿಶೀಲಿಸಲಿದೆ.
ಜೀವಾವಧಿ ಶಿಕ್ಷೆ ವಿಧಿಸುವಾಗ ಭಾರತೀಯ ದಂಡ ಸಂಹಿತೆ ಯಲ್ಲಿ ‘ಕಠಿಣ’ ಎಂಬ ಪದ ಬಳಸಲು ಅವಕಾಶವಿಲ್ಲ ಎಂದು ವಕೀಲ ಪರಮಾನಂದ್ ಕಟಾರಾ ಅರ್ಜಿಯಲ್ಲಿ ವಾದಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕಠಿಣ’ ಎಂಬ ಪದ ಬಳಸಬಹುದೇ ಎಂಬುದನ್ನು ಪರಿಶೀಲಿಸಲು ಸಮ್ಮತಿ ನೀಡಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story





