ತೈಮೂರ್ ಮೇಲೆ ಹಿಂದುತ್ವ ಬ್ರಿಗೇಡ್‌ನಿಂದ ಆಕ್ರಮಣ!

ಮುಂಬೈ, ಡಿ.21: ಬಾಲಿವುಡ್ ಜೋಡಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಇದೀಗ ಗಂಡುಮಗು ಪಡೆದ ಸಂತಸದಲ್ಲಿದ್ದಾರೆ. ಮಗುವಿಗೆ ತೈಮೂರ್ ಅಲಿ ಖಾನ್ ಪಟೌಡಿ ಎಂದು ಹೆಸರಿಟ್ಟಿದ್ದಾರೆ.
"ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಂಡು ಕಳೆದ ಒಂಬತ್ತು ತಿಂಗಳಿಂದ ಸಹಕರಿಸಿದ ಮಾಧ್ಯಮದವರಿಗೆ ಧನ್ಯವಾದ. ಅದರಲ್ಲೂ ನಮ್ಮ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಪ್ರೀತಿ ತೋರಿದ್ದಕ್ಕಾಗಿ ಧನ್ಯವಾದ" ಎಂದು ಸೈಫ್ ಮತ್ತು ಕರೀನಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಂಗಳವಾರ ಮುಂಜಾನೆ ಕರೀನಾ, ದಕ್ಷಿಣ ಮುಂಬೈನ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯದಿಂದಿದ್ದಾರೆ. 36 ವರ್ಷದ ನಟಿಗೆ ಇದು ಮೊದಲ ಮಗು. ಸೈಫ್‌ಗೆ ಈಗಾಗಲೇ ಮಾಜಿ ಪತ್ನಿ ಅಮೃತಾ ಸಿಂಗ್‌ನಿಂದ ಸಾರಾ ಹಾಗೂ ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ ಬಲಪಂಥೀಯ ಹಿಂದುತ್ವ ಬ್ರಿಗೇಡ್ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಆಕ್ರಮಣ ಇವರ ಸಂತಸ ಕಸಿದುಕೊಂಡಿದೆ. ಈ ಅಂತರ್ ಧರ್ಮೀಯ ಜೋಡಿಯ ಮಗುವಿಗೆ ತೈಮೂರ್ ಎಂದು ಹೆಸರಿಸಿರುವುದಕ್ಕೆ ಹಿಂದುತ್ವ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಕೇಂದ್ರ ಏಷ್ಯಾ ದೊರೆಯಾಗಿದ್ದ ತೈಮೂರ್ ಭಾರತದ ಮೇಲೆ 14 ಮತ್ತು 15ನೆ ಶತಮಾನದಲ್ಲಿ ಆಕ್ರಮಣ ಮಾಡಿದ್ದ ಅವಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ್ದ ಎನ್ನುವುದು ಇವರ ಆಕ್ರೋಶಕ್ಕೆ ಮುಖ್ಯ ಕಾರಣ.
ಇದಕ್ಕೆ ಅಪಸ್ವರ ಎತ್ತಿದ ಪ್ರಮುಖ ವ್ಯಕ್ತಿ ಎಂದರೆ ಆರೆಸ್ಸೆಸ್ ಪೋಸ್ಟರ್‌ಬಾಯ್ ತರೇಕ್ ಫತೇಹ್. "ನನಗೆ ದಿಗ್ಭ್ರಮೆಯಾಗಿದೆ. ಭೂಮಿಯಲ್ಲಿ ಒಬ್ಬ ಭಾರತೀಯ ತನ್ನ ಮಗುವಿಗೆ ತೈಮೂರ್ ಎಂದು ಹೆಸರಿಡಲು ಹೇಗೆ ಸಾಧ್ಯ? ಆತ ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಮರ ಸಾಮೂಹಿತ ಹತ್ಯೆ ಮಾಡಿದ ವ್ಯಕ್ತಿ. ದೇಶಾದ್ಯಂತ ಭಾರತೀಯರ ಮೆದುಳುಗಳ ಪಿರಮಿಡ್ ಮಾಡಿದಾತ. ಇದು ಬಹುಶಃ ಹಿಂದೂಸ್ತಾನದ ಮುಸ್ಲಿಂ ರಾಯಲ್ಟಿಯೇ" ಎಂದು ಪ್ರಶ್ನಿಸಿದ್ದಾರೆ


♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Not sure this is factually correct. Pretty sure by historical accounts including Taimur's, he spared Muslim areas & went after Hindus. pic.twitter.com/XjlWM13aVl
— Rupa Subramanya (@rupasubramanya) December 20, 2016
"its Just a generic muslim name" someone said. So when did you last meet a Khusro or a Bulley or a Waris? Never!
— Harbir Singh (@HarbirSingh_) December 20, 2016
But Taimur, thats generic!
★ Death to Harami #Taimur the killer of Hindus ! ★ https://t.co/1Law2CsP0q
— Nisha Singh #HDL (@Nisha__Hindu) December 20, 2016
death to taimur #TaimurAliKhan
— sunil kp (@sunyl10) December 20, 2016
Hatred, wishing death for a just born kid because they didn't like the Name #TaimurAliKhan given to new born by their parent. That's Sanghis pic.twitter.com/yQ5OTHrbFq
— Joy (@Joydas) December 20, 2016







