ಅಮೆಮಾರ್‌ನಲ್ಲಿ ‘ಹುಬ್ಬುರ್ರಸೂಲು’ ಕಾರ್ಯಕ್ರಮ

ಫರಂಗಿಪೇಟೆ ಡಿ.21: ಅಮೆಮಾರ್ ಬದ್ರಿಯಾ ಮದ್ರಸ ಮತ್ತು ಜುಮಾ ಮಸೀದಿಯ ವತಿಯಿಂದ ಎರಡು ದಿನಗಳ ‘ಹುಬ್ಬುರ್ರಸೂಲು’ ಕಾರ್ಯಕ್ರಮವು ಅಮೆಮಾರ್‌ನ ಮರ್ಹೂಮ್ ಹಸೈನಾರ್ ಬಾಖವಿ ವೇದಿಕೆಯಲ್ಲಿ ನಡೆಯಿತು
ದ್ರಿಯಾ ಮದ್ರಸ ಮತ್ತು ಜುಮಾ ಮಸೀದಿಯ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಇ.ಕೆ.ಅಬೂಬಕರ್ ನಿಝಾಮಿ ಮಲೇಶ್ಯಅವರು ಮುಖ್ಯ ಭಾಷಣ ಮಾಡಿದರು. ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಆಗೈದರು.
ಅತಿಥಿಗಳಾಗಿ ಭಾಗವಹಿಸಿದ್ದ ಫರಂಗಿಪೇಟೆ ಎಂ.ಜೆ.ಎಂ. ಮುದರ್ರಿಸ್ ಅಬೂಝಾಹಿರ್ ಉಸ್ಮಾನ್ ದಾರಿಮಿ, ಅಮೆಮಾರ್ ಬಿ.ಜೆ.ಎಂ. ಮುದರ್ರಿಸ್ ಅಬೂಸ್ವಾಲಿಹ್ ಫೈಝಿ, ಬಾಲಕ ಅಬ್ದುರ್ರಹ್ಮಾನ್ ಹಾದಿ ಮಲೇಶ್ಯ, ಫೈಝಲ್ ಕತರ್ ಪ್ರವಚನ ನೀಡಿದರು
ಅತಿಥಿಗಳಾಗಿ ನಝೀರ್ ಹಾಜಿ ಕತರ್, ಶೌಕತ್ ಹಾಜಿ, ಫರಂಗಿಪೇಟೆ ಎಂ.ಜೆ.ಎಂ. ಅಧ್ಯಕ್ಷ ಮುಹಮ್ಮದ್ ಬಾವ, ಅಮೆಮಾರ್ ಬಿ.ಜೆ.ಎಂ. ಕೋಶಾಧಿಕಾರಿ ಮುಸ್ತಫಾ ಡಾ.ಅಮೀರ್ ತುಂಬೆ, ಅಬೂಬಕರ್ ಸಿದ್ದೀಕ್ ಮೌಲವಿ, ಇಸ್ಹಾಕ್, ಇಲ್ಯಾಸ್ ಮದನಿ, ಸುಲೈಮಾನ್, ಕಾರ್ಯಕ್ರಮ ವ್ಯವಸ್ಥಾಪಕರಾದ ಸಿದ್ದೀಕ್ ಎಂ.ಎಸ್.ಉಪಸ್ಥಿತರಿದ್ದರು ಅಬುಸ್ವಾಲಿಹ್ ಸ್ವಾಗತಿಸಿ, ವಂದಿಸಿದರು. ಖಾದರ್ ಕಾರ್ಯಕ್ರಮ ನಿರೂಪಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







