Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಡಾ. ಕಮಲಾ ಹಂಪನಾ, ಪ್ರಕಾಶ್ ರೈ ಸಹಿತ ಆರು...

ಡಾ. ಕಮಲಾ ಹಂಪನಾ, ಪ್ರಕಾಶ್ ರೈ ಸಹಿತ ಆರು ಮಂದಿಗೆ ಸಂದೇಶ ಪ್ರಶಸ್ತಿ-2017

ವಾರ್ತಾಭಾರತಿವಾರ್ತಾಭಾರತಿ21 Dec 2016 2:08 PM IST
share
  • ಡಾ. ಕಮಲಾ ಹಂಪನಾ, ಪ್ರಕಾಶ್ ರೈ ಸಹಿತ ಆರು ಮಂದಿಗೆ ಸಂದೇಶ ಪ್ರಶಸ್ತಿ-2017
  • ಡಾ. ಕಮಲಾ ಹಂಪನಾ, ಪ್ರಕಾಶ್ ರೈ ಸಹಿತ ಆರು ಮಂದಿಗೆ ಸಂದೇಶ ಪ್ರಶಸ್ತಿ-2017

ಮಂಗಳೂರು, ಡಿ.21: ಸಂದೇಶ ಪ್ರತಿಷ್ಠಾನವು 26ನೆ ವರ್ಷದ ಪ್ರಶಸ್ತಿಯನ್ನು ಘೋಷಿಸಿದ್ದು, ಖ್ಯಾತ ಸಾಹಿತಿ ಡಾ.ಕಮಲಾ ಹಂಪನಾ(ಸಂದೇಶ ಸಾಹಿತ್ಯ ಪ್ರಶಸ್ತಿ), ಬಹುಭಾಷಾ ನಟ ಪ್ರಕಾಶ್ ರೈ(ಸಂದೇಶ ಮಾಧ್ಯಮ ಪ್ರಶಸ್ತಿ), ಜನಪದ ಕಲಾವಿದ ಯುವರಾಜ್ ಕೆ.(ಸಂದೇಶ ಕಲಾ ಪ್ರಶಸ್ತಿ), ಹಾರ್ಮೋನಿಯಂ ವಾದಕ ಅನಿಲ್ ಪತ್ರಾವೊ(ಕೊಂಕಣಿ ಮ್ಯೂಸಿಕ್ ಪ್ರಶಸ್ತಿ), ಕಲಾವಿದ ಜಾನ್ ದೇವರಾಜ್(ಸಂದೇಶ ವಿಶೇಷ ಪ್ರಶಸ್ತಿ) ಹಾಗೂ ಮದರ್ ಥೆರೆಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ಶಿಕ್ಷಣ ಪ್ರಶಸ್ತಿ) ಆಯ್ಕೆಯಾಗಿವೆ.
ಸಾಹಿತಿ ಹಾಗೂ ಸಂದೇಶ ಪ್ರಶಸ್ತಿ ಸಮಿತಿ ಅಧ್ಯಕ್ಷ ನಾ ಡಿಸೋಜ ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿಗೆ ಪಾತ್ರರಾದವರ ವಿವರಗಳನ್ನು ಪ್ರಕಟಿಸಿದರು.
ನಾ ಡಿಸೋಜ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಸದಸ್ಯರಾಗಿರುವ ಡಾ.ನಾ. ದಾಮೋದರ ಶೆಟ್ಟಿ, ಸಾರಾ ಅಬೂಬಕರ್, ಚಂದ್ರಕಲಾ ನಂದಾವರ, ಎರಿಕ್ ಒಝಾರಿಯೊ ಹಾಗೂ ರಿಚರ್ಡ್ ಲೂವಿಸ್ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಸಹಕರಿಸಿದ್ದಾರೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ತಲಿನೊ ತಿಳಿಸಿದರು.

ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ವಂ. ಫಾ.ವಿಕ್ಟರ್ ವಿಜಯ್ ಲೋಬೊ ಮೇಲುಸ್ತುವಾರಿಯಲ್ಲಿ ಸಿದ್ಧಗೊಳಿಸಿದ ಪ್ರಶಸ್ತಿ ವಿತರಣಾ ಸಮಾರಂಭವು ಜ.13ರಂದು ಸಂಜೆ 5:30ಕ್ಕೆ ನಗರದ ಸಂದೇಶ ಕಚೇರಿಯಲ್ಲಿ ನಡೆಯಲಿದೆ ಎಂದವರು ತಿಳಿಸಿದರು.


ಪ್ರಶಸ್ತಿ ವಿಜೇತರ ವಿವರ

# ಡಾ.ಕಮಲಾ ಹಂಪನಾ

 ಬೆಂಗಳೂರಿನ ದೇವನಹಳ್ಳಿಯಲ್ಲಿ ಅಕ್ಟೋಬರ್ 28, 1935ರಲ್ಲಿ ರಂಗ ಲಕ್ಷ್ಮಮ್ಮ-ರಂಗಧಾಮ ನಾಯಕರ ಪುತ್ರಿಯಾಗಿ ಜನಿಸಿರುವ ಇವರು ಪ್ರೊ.ಹಂಪ ನಾಗರಾಜಯ್ಯ ಅವರ ಧರ್ಮಪತ್ನಿಯಾಗಿ, ಸಾಹಿತ್ಯ ಕ್ಷೇತ್ರದ ಧ್ರುವತಾರೆಯಾಗಿ ಇಂದಿಗೂ ಮಿನುಗುತ್ತಿದ್ದಾರೆ. ಸಂಶೋಧನೆ, ವಿಮರ್ಶೆ, ವ್ಯಕ್ತಿಚಿತ್ರ, ಜೀವನ ಚರಿತ್ರೆ, ಬಾನುಲಿ ನಾಟಕ, ಕಥಾಸಂಕಲನ, ಶಿಶು ಸಾಹಿತ್ಯ, ಆಧುನಿಕ ವಚನ, ಮಹಿಳಾ ಸಾಹಿತ್ಯ ಇತ್ಯಾದಿ ಹಲವು ಪ್ರಕಾರಗಳಲ್ಲಿ ಡಾ.ಕಮಲಾ ಹಂಪನಾ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

# ಪ್ರಕಾಶ್ ರೈ

ಭಾರತದ ಶ್ರೇಷ್ಠ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ಪ್ರಕಾಶ್ ರೈ, ತುಳುನಾಡಿನಿಂದ ಹೊರಟು, ರಾಜಧಾನಿಗೆ ತಲುಪಿ, ರಾಷ್ಟ್ರಮಟ್ಟಕ್ಕೇರಿದ ಬಹುಭಾಷಾ ನಟ. ತುಳುವರಾಗಿ ಜನಿಸಿದ ಅವರು ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಮಲಯಾಳ ಹಾಗೂ ಇಂಗ್ಲಿಷ್ ಚಲನಚಿತ್ರಗಳಲ್ಲಿ ತಮ್ಮ ವಿಶಿಷ್ಟ ಶೈಲಿಯ ಅಭಿನಯದಿಂದ ಸಹನಟ, ನಾಯಕ ನಟ ಹಾಗೂ ಖಳನಾಯಕರಾಗಿ ಮಿಂಚಿದರು. ಸದಭಿರುಚಿಯ ಚಿತ್ರಗಳನ್ನು ಮಾಡುವ ಶಪಥ ತೊಟ್ಟವರಂತೆ ನಾನೂ ನನ್ನ ಕನಸು, ಒಗ್ಗರಣೆ, ಇದೊಳ್ಳೆ ರಾಮಾಯಣ ಮುಂತಾದ ಯಶಸ್ವೀ ಚಿತ್ರಗಳನ್ನು ಪ್ರಕಾಶ್ ರೈ ಕನ್ನಡಿಗರಿಗೆ ಕೊಡಮಾಡಿದರು. ಕಾಂಜೀವರಂ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಚಿತ್ರ.


# ಯುವರಾಜ್ ಕೆ.

1956ರಲ್ಲಿ ಜನಿಸಿದ ಯುವರಾಜ್ ವೃತ್ತಿಯಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಮೂರು ದಶಕಗಳ ಕಾಲ ದುಡಿದರು. ಪ್ರವೃತ್ತಿಯಲ್ಲಿ ಜನಪದ ಗಾಯಕರು ಹಾಗೂ ಜನಪದ ಹಾಡುಗಳ ಸಂಗ್ರಾಹಕರಾದರು. ನೂರಾರು ಜನಪದ ಗೀತೆಗಳನ್ನು ಕರ್ನಾಟಕದ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿ ಅವುಗಳನ್ನು ಕ್ಯಾಸೆಟ್ ಹಾಗೂ ಸಿ.ಡಿ. ರೂಪದಲ್ಲಿ ಹಾಡಿ, ದಾಖಲಿಸಿ ಜನಪದ ಲೋಕಕ್ಕೆ ಪ್ರಸಿದ್ಧಿಯನ್ನು ತಂದುಕೊಟ್ಟರು. ಕರ್ನಾಟಕದ ಒಳ-ಹೊರಗುಗಳಲ್ಲಿ ಸಾವಿರದ ಇನ್ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

# ಅನಿಲ್ ಪತ್ರಾವೊ

ತಮ್ಮ ನಾಲ್ಕನೆಯ ವಯಸ್ಸಿನಿಂದ ಹಾರ್ಮೋನಿಯಮ್ ಅಭ್ಯಾಸ ಮಾಡಲು ತೊಡಗಿದ ಅನಿಲ್, ಹನ್ನೆರಡರ ಹರೆಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಮ್ ನುಡಿಸತೊಡಗಿದರು. 1985ರಿಂದ ಇವರು ದೇರೆಬೈಲ್ ಚರ್ಚಿನ ಕೊಯರ್ ಮಾಸ್ಟರ್ ಆದರು. ಅನೇಕ ಶಿಷ್ಯರನ್ನು ತರಬೇತಿಗೊಳಿಸಿದರು. ಇನ್ನೂರಕ್ಕೂ ಹೆಚ್ಚು ಗೀತೆಗಳಿಗೆ ಸಂಗೀತ ಒದಗಿಸಿರುವ ಅನಿಲ್, ತನ್ನ ಸಹೋದರ ಜಾನ್ ಪತ್ರಾವೋ ಅವರೊಡಗೂಡಿ ಪತ್ರಾವೋ ನೈಟ್ ಎಂಬ ಹೆಸರಿನಲ್ಲಿ ಹಲವಾರು ಕೊಂಕಣಿ ಸಂಗೀತ ಸಂಜೆಗಳನ್ನು ಏರ್ಪಡಿಸಿದ್ದಾರೆ.

# ಜಾನ್ ದೇವರಾಜ್
ಜಾನ್ ದೇವರಾಜ್ ಮೂಲತಃ ಸಿವಿಲ್ ಇಂಜಿನಿಯರ್. 1956ರಲ್ಲಿ ಜನಿಸಿದ ದೇವರಾಜ್ ಶಿಲ್ಪಿಯಾಗಿ, ಚಿತ್ರ ಕಲಾವಿದರಾಗಿ, ಆರ್ಕಿಟೆಕ್ಟ್ ಆಗಿ, ಕಲಾ ನಿರ್ದೇಶಕರಾಗಿ, ಸಿನಿಮಾ ತಯಾರಕರಾಗಿ, ಛಾಯಾಚಿತ್ರಗಾರನಾಗಿ, ನಾಟಕಕಾರನಾಗಿ, ನಟನಾಗಿ, ಗೊಂಬೆಯಾಟಗಾರನಾಗಿ, ಸಂಘ ಸಂಸ್ಥೆಗಳ ಸಲಹೆಗಾರರಾಗಿ- ಹೀಗೆ ಹತ್ತು ಹಲವು ವಲಯಗಳಲ್ಲಿ ದುಡಿಯುತ್ತಿರುವ ಏಕವ್ಯಕ್ತಿ. ಜಗತ್ತಿನ ಅರುವತ್ತು ರಾಷ್ಟ್ರಗಳಿಂದ ಮಣ್ಣು ಮತ್ತು ನೀರನ್ನು ತರಿಸಿ ಅದರಲ್ಲೊಂದು ಅಪೂರ್ವ ಮ್ಯೂರಲ್ ಸಿದ್ಧಪಡಿಸಿ ನ್ಯೂಯಾರ್ಕಿನಲ್ಲಿ ಸ್ಥಾಪನೆ, ಆಸ್ಟ್ರಿಯಾದಲ್ಲಿ 25 ಅಡಿ ಎತ್ತರದ ಫ್ಯಾಸಿಸಮ್ಮಿಗೆ ವಿರುದ್ಧವಾದ ಸ್ಮಾರಕ ನಿರ್ಮಾಣ, ಪಾಕಿಸ್ತಾನದ ಮಕ್ಕಳಿಗಾಗಿ 370 ಅಡಿ ಉದ್ದ ಹಾಗೂ 280 ಅಡಿ ಅಗಲದ ಚಿತ್ರ ರಚನೆ, ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಇಪ್ಪತ್ತೆರಡು ಅಡಿ ಎತ್ತರದ ಟೆರ್ರಕೋಟಾ ಶಿಲ್ಪರಚನೆ ಇವರ ದಾಖಲೆಗಳಾಗಿವೆ.

 # ಮದರ್ ಥೆರೆಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್

ಕುಂದಾಪುರದಿಂದ ಸುಮಾರು ಮೂವತ್ತು ಕಿ. ಮೀ. ಒಳಗಡೆಯ ಗ್ರಾಮೀಣ ಪ್ರದೇಶವಾದ ಶಂಕರನಾರಾಯಣದಲ್ಲಿದೆ ಮದರ್ ಥೆರೆಸಾ ಹೆಸರಿನ ಈ ಶಾಲೆ. ಇದು ಸ್ಥಾಪನೆಗೊಂಡದ್ದು 1998ರಲ್ಲಿ. ಮಂಗಳೂರಿನ ರೆನಿಟಾ ಲೋಬೊ ಮತ್ತು ಶಮಿತಾ ರಾವ್ ಎಂಬ ಇಬ್ಬರು ನಾರಿಮಣಿಯರು ತಮ್ಮ ಇಪ್ಪತ್ತೆರಡರ ಹರೆಯದಲ್ಲಿ ಕೈಗೊಂಡ ಸಾಹಸವಿದು. ಅನಕ್ಷರಸ್ತ ಹಳ್ಳಿಗರ ಮಕ್ಕಳಿಗೆ ಅಕ್ಷರ ಕೊಡುವುದೇ ಇದರ ಉದ್ದೇಶ. ಅಂದು ಅಲ್ಲಿನ ಪಂಚಾಯತ್ ಕಚೇರಿಯ ಬಯಲು ವೇದಿಕೆಯಲ್ಲಿ ಪ್ರಾರಂಭಗೊಂಡ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಇದೀಗ ಅದು ಪಿಯುಸಿ ವರೆಗೆ ಬೆಳೆದು ನಿಂತಿದೆ. ನಡುವೆ ಈ ಇಬ್ಬರು ಯುವತಿಯರು ಪಟ್ಟ ಹರಸಾಹಸಗಳು ಇದೀಗ ಯಶೋಗಾಥೆಯಾಗಿ ಪರಿಣಮಿಸಿದೆ 

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X